ನವದೆಹಲಿ: ಮೋಟಾರು ವಾಹನ ತಿದ್ದುಪಡಿ ಕಾಯ್ದೆ ದೇಶಾದ್ಯಂತ ಜಾರಿಗೆ ಬಂದ ಸೆಪ್ಟೆಂಬರ್ 1 ರಿಂದ ಇದುವರೆಗೆ ರೂ. 577 ಕೋಟಿಗಳ ದಂಡವನ್ನು ಸಂಗ್ರಹಿಸಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದಾಗಿನಿಂದ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಚಾರಿ ಪೊಲೀಸರು 38 ಲಕ್ಷ ಚಲನ್ಗಳನ್ನು ವಾಹನ ಚಾಲಕರಿಗೆ ನೀಡಿದ್ದಾರೆ ಎಂದು ಗಡ್ಕರಿ ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.
ಚಂಡೀಗಢ, ಪುದುಚೇರಿ, ಅಸ್ಸಾಂ, ಛತ್ತೀಸ್ಗಢ, ಉತ್ತರ ಪ್ರದೇಶ, ಒರಿಸ್ಸಾ, ದೆಹಲಿ, ರಾಜಸ್ಥಾನ, ಬಿಹಾರ, ದಾದ್ರಾ-ನಗರ ಹವೇಲಿ, ಪಂಜಾಬ್, ಗೋವಾ, ಉತ್ತರಾಖಂಡ್, ತಮಿಳುನಾಡು, ಗುಜರಾತು, ಮಹಾರಾಷ್ಟ್ರ, ಹಿಮಾಚಲ ಪ್ರದೇಶಗಳಿಗೆ ಸಂಬಂಧಿಸಿದೆ ಈ ಅಂಕಿಅಂಶಗಳನ್ನು ನೀಡಲಾಗಿದೆ.
2019 ರ ಮೋಟಾರು ವಾಹನಗಳ (ತಿದ್ದುಪಡಿ) ಕಾಯ್ದೆಯ ಕೆಲವು ನಿಬಂಧನೆಗಳ ಅನುಷ್ಠಾನದ ನಂತರ ಸುಮಾರು 38,39,406 ಚಲನ್ಗಳನ್ನು ನೀಡಲಾಗಿದೆ ಮತ್ತು 5,77,51,79,895 ರೂಗಳನ್ನು ದಂಡದ ಮೂಲಕ ಸಂಗ್ರಹಿಸಲಾಗಿದೆ ”ಎಂದು ಕೇಂದ್ರ ಸಚಿವರು ಹೇಳಿದರು. ಆದರೆ, ಗಡ್ಕರಿ ನಿಜವಾದ ಆದಾಯದ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲ ಮತ್ತು ಡಾಟಾವನ್ನುಆಧರಿಸಿ ಮಾಹಿತಿ ನೀಡಲಾಗಿದೆ ಎಂದಿದ್ದಾರೆ.
ಗಡ್ಕರಿ ಪ್ರಕಾರ, ತಮಿಳುನಾಡಿನಲ್ಲಿ ಅತಿ ಹೆಚ್ಚು ಚಲನ್ಗಳು ಅಂದರೆ 14,13,996 , ಗೋವಾದಲ್ಲಿ ಕನಿಷ್ಠ 58 ಚಲನ್ಗಳನ್ನು ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.