ಬೆಂಗಳೂರು : ಮಾರಕ ಕ್ಯಾನ್ಸರ್ ಕಾಯಿಲೆಯನ್ನು ತಡೆಗಟ್ಟುವ ಸಲುವಾಗಿ ಬೆಂಗಳೂರು ಮೂಲದ ವಿಜ್ಞಾನಿಯೊಬ್ಬರು ‘ಸೈಟೊಟ್ರಾನ್’ ಎಂಬ ಅದ್ಭುತ ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸಾಧನವನ್ನು ಅಮೆರಿಕದ ಫುಡ್ ಆ್ಯಂಡ್ ಡ್ರಗ್ಸ್ ಎಡ್ಮಿನಿಷ್ಟ್ರೇಶನ್(ಎಫ್ಡಿಎ) ಅದ್ಭುತ ಎಂದು ಬಣ್ಣಿಸಿದ್ದು, ಇದಕ್ಕೆ ಅನುಮೋದನೆಯನ್ನೂ ನೀಡಿದೆ.
ಇನ್ನೊವೇಟಿವ್ ಟೆಕ್ನಾಲಜಿ ಕಂಪನಿಯಾದ ಆರ್ಗನೈಸೇಶನ್ ಡಿ ಸ್ಕಲೀನ್ನ ಅಧ್ಯಕ್ಷ ಡಾ. ರಾಜಾ ವಿಜಯ್ ಕುಮಾರ್ ಅವರು ಈ ಸಾಧನವನ್ನು ಅಭಿವೃದ್ಧಿಪಡಿಸಿದರು. ಈ ಸಾಧನವು ದೇಹದಲ್ಲಿ ಕ್ಯಾನ್ಸರ್ ಕೋಶಗಳು ಹರಡದಂತೆ ನಿಯಂತ್ರಿಸುತ್ತದೆ. ಅಲ್ಲದೇ, ಕ್ಯಾನ್ಸರ್ ಪ್ರೋಟಿನ್ಗಳನ್ನು ನಿಯಂತ್ರಿಸಿ ಅದನ್ನು ಕೊಬ್ಬಿನ ಜೀವಕೋಶಗಳನ್ನಾಗಿ ಬದಲಾಯಿಸುತ್ತದೆ.
ಡಾ. ರಾಜಾ ವಿಜಯ್ ಅವರು ಬಯೋಫಿಸಿಕ್ಸ್, ನ್ಯಾನೊತಂತ್ರಜ್ಞಾನ ಮತ್ತು ಸುಸ್ಥಿರ ಇಂಧನ ಕ್ಷೇತ್ರದ ಸಂಶೋಧಕರು ಕೂಡ ಆಗಿದ್ದಾರೆ. ಅವರು ಯೋಜಿಸಿದಂತೆಯೇ ಸೈಟೊಟ್ರಾನ್ ಸಾಧನವು, ಅಂಗಾಂಶಗಳ ಅನಿಯಂತ್ರಿತ ಬೆಳವಣಿಗೆಯನ್ನು ತಡೆಯುವ ಉದ್ದೇಶವನ್ನು ಹೊಂದಿದೆ.
ಮುಂದಿನ ವರ್ಷದ ಜನವರಿಯಲ್ಲಿ ಬಹುಶಃ ಈ ಸೈಟೊಟ್ರಾನ್ ಸಾಧನ ಭಾರತದ ಆಸ್ಪತ್ರೆಗಳಲ್ಲಿ ಕಾನ್ಸರ್ ರೋಗಿಗಳ ಚಿಕಿತ್ಸೆಗೆ ಬಳಸುವ ನಿರೀಕ್ಷೆ ಇದೆ ಎಂದು ಡಾ.ರಾಜಾ ವಿಜಯ್ ಅವರು ತಿಳಿಸಿದ್ದಾರೆ. ಮ್ಯಾಗ್ನೆಟಿಕ್ ರೆಸೋನೆನ್ಸ್ ಬಳಸುವ ಮೂಲಕ ಈ ಸಾಧನವನ್ನು ಅಭಿವೃದ್ಧಿಪಡಿಸಲಾಗಿದೆ.
ಪ್ರೋಟೀನ್-ಸಂಬಂಧಿತ ಕಾಯಿಲೆಗಳ ಚಿಕಿತ್ಸೆಗೆ ಕೂಡ ಈ ಸಾಧನ ಸಹಾಯಕಾರಿಯಾಗಿದೆ, ಯಾವುದೇ ಕೋಶವಾಗಲಿ ನಮ್ಮ ದೇಹದಲ್ಲಿ ಕೇವಲ 50 ಬಾರಿ ಮಾತ್ರವೇ ಕೆಲಸ ಮಾಡುತ್ತದೆ. ಆದರೆ ಕಾನ್ಸರ್ ಕಾರಕ ಕೋಶಗಳು ಮಾತ್ರ ದೇಹದಲ್ಲಿ ಹರಡುತ್ತಾ ಹೋಗುತ್ತದೆ. ಹೀಗಾಗಿ ಸೈಟೊಟ್ರಾನ್ ಸಾಧನವು ಕ್ಯಾನ್ಸರ್ ಕೋಶಗಳನ್ನು ತಡೆದು, ಅದು ಹರಡದಂತೆ ಕೆಲಸ ಮಾಡುತ್ತದೆ. ಜೊತೆಗೆ ಆರೋಗ್ಯಕರ ಕೋಶಗಳು 50ಕ್ಕಿಂತಲೂ ಹೆಚ್ಚಿನ ಬಾರಿ ಕೆಲಸ ಮಾಡುವಂತೆ ಸಹಕರಿಸುತ್ತದೆ ಎಂದು ಡಾ.ರಾಜಾ ವಿಜಯ್ ಹೇಳಿದ್ದಾರೆ.
ಈ ಸಾಧನವನ್ನು ಕಂಡುಹಿಡಿಯಲು ಸುಮಾರು 30 ವರ್ಷಗಳು ತಗುಲಿದೆ. ಇದು ನೋಡಲು ಎಂಆರ್ಐ ಸ್ಕಾನಿಂಗ್ ಯಂತ್ರದ ರೀತಿ ಕಾಣುತ್ತದೆ. ರೋಟೆಶನಲ್ ಕ್ಕ್ವಾಂಟಮ್ ಮ್ಯಾಗ್ನೆಟಿಕ್ ರೆಸೋನೆನ್ಸ್ ಎಂಬುದಾಗಿ ಈ ತಂತ್ರಜ್ಞಾನವನ್ನು ಕರೆಯಲಾಗುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.