ಹಿಂದೂಗಳು ಮತ್ತು ಭಾರತದ ವಿರುದ್ಧ ದ್ವೇಷ ಕಾರುವಲ್ಲಿ ಮುಂಚೂಣಿಯಲ್ಲಿರುವ ಮಾಧ್ಯಮವೆಂದರೆ ಅದು ಬಿಬಿಸಿ. ಅನೇಕ ಬಾರಿ ಅದು, ಹಿಂದೂಗಳ ವಿರುದ್ಧ ಅತೀ ಕೆಟ್ಟ ಮತ್ತು ದ್ವೇಷದ ವಿಷಯವನ್ನು ಪ್ರಕಟಗೊಳಿಸಿದೆ. ವಿಧ್ವಂಸಕ ಕೃತ್ಯ ಎಸಗುವ ಭಯೋತ್ಪಾದಕರನ್ನು ಕೇವಲ ‘ಕಾರ್ಮಿಕರು’ ಎಂದು ಉಲ್ಲೇಖಿಸುವುದರಿಂದ ಹಿಡಿದು, ‘ಜೈ ಶ್ರೀ ರಾಮ್’ ಅನ್ನು ರಕ್ತಸಿಕ್ತ ಯುದ್ಧದ ಕೂಗು ಎಂದು ಕರೆಯುವವರೆಗೂ ಬಿಬಿಸಿ ಸಾಕಷ್ಟು ನಾಚಿಕೆಯಿಲ್ಲದೆ ಕಾರ್ಯವನ್ನು ಮಾಡಿದೆ. ಆದರೂ, ಬಿಬಿಸಿ ಪತ್ರಿಕೋದ್ಯಮವನ್ನು ಸರ್ವ ಶ್ರೇಷ್ಠ ಎಂದು ಭಾವಿಸಿರುವವರು ಭಾರತದಲ್ಲಿದ್ದಾರೆ ಎಂಬುದು ವಿಪರ್ಯಾಸವಲ್ಲದೆ ಬೇರೇನೂ ಅಲ್ಲ.
ರಾಮಜನ್ಮ ಭೂಮಿ ತೀರ್ಪಿನ ನಂತರ, ಬಿಬಿಸಿಯು ಭಾರತೀಯ ನ್ಯಾಯಾಂಗದ ಘನತೆಗೆ ಧಕ್ಕೆ ತರುವ ಮತ್ತು ಅದರ ಹೆಸರನ್ನು ಹಾಳು ಮಾಡುವ ವಿಷಯಗಳನ್ನು ಪ್ರಕಟಗೊಳಿಸಿದೆ. ಅಯೋಧ್ಯಾ ಪ್ರಕರಣದಲ್ಲಿ ನ್ಯಾಯಾಂಗವು ಪಕ್ಷಪಾತದ ಧೋರಣೆಯನ್ನು ಅನುಸರಿಸಿದೆ ಮತ್ತು ಸತ್ಯಗಳ ಬಗ್ಗೆ ಅಜ್ಞಾನವನ್ನು ಹೊಂದಿದೆ ಎಂದು ಹೇಳುವ ಮೂಲಕ ಅವಮಾನ ಮಾಡಿದೆ. ಅನಕ್ಷರಸ್ಥರಂತೆ ವರ್ತಿಸುವ ಜನರೊಂದಿಗೆ ಬೆರೆತು ಭಾರತದ ನ್ಯಾಯಾಂಗವನ್ನು ವ್ಯಂಗ್ಯಚಿತ್ರ ಮಾಡುವ ಮೂಲಕ ಅದರ ಘನತೆಗೆ ಧಕ್ಕೆ ತರುತ್ತಿದೆ. ಇದು ಅದರ ಸ್ವತಃ ಮಾನದಂಡಗಳಿಗಿಂತಲೂ ಕೆಳ ಮಟ್ಟದ್ದಾಗಿದೆ. ವ್ಯಂಗ್ಯಚಿತ್ರಗಳನ್ನು ಬಳಸಿ, ಬಿಬಿಸಿ ನಿಯಮಿತವಾಗಿ ಭಾರತ ಮತ್ತು ಹಿಂದೂಗಳನ್ನು ಅಪಹಾಸ್ಯ ಮಾಡುತ್ತಾ ಬಂದಿದೆ. ಆದರೂ, ಅಯೋಧ್ಯ ಪ್ರಕರಣದಲ್ಲಿ ಅದು ಮಾಡಿರುವುದು ಅತಿರೇಕದ ಸಂಗತಿ.
ಭಾರತದ ಸುಪ್ರೀಂ ಕೋರ್ಟ್ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಕೆಟ್ಟ ವ್ಯಂಗ್ಯ ಚಿತ್ರದ ಮೂಲಕ ಅಪಹಾಸ್ಯ ಮಾಡಿದ ಬಿಬಿಸಿಯನ್ನು ಟ್ವಿಟರ್ ಬಳಕೆದಾರರು #ಬ್ಯಾನ್ಬಿಬಿಸಿ ಎಂಬ ಹ್ಯಾಶ್ಟ್ಯಾಗ್ ಬಳಸಿ ವಿರೋಧಿಸಿದ್ದಾರೆ. ಅಯೋಧ್ಯಾ ತೀರ್ಪಿನ ಬಗೆಗಿನ ವ್ಯಂಗ್ಯಚಿತ್ರದಲ್ಲಿ ಬಿಬಿಸಿಯು, ಸುಪ್ರೀಂಕೋರ್ಟ್ ರಾಮಾಯಣವನ್ನು ಸಂವಿಧಾನಕ್ಕೂ ಮಿಗಿಲಾಗಿಸಲು ಪ್ರಯತ್ನಿಸಿದೆ ಎಂಬಂತೆ ಚಿತ್ರಿಸಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ಅವರು ಸಂವಿಧಾನ ಇಡಲಾಗಿರುವ ತಕ್ಕಡಿಯಲ್ಲಿ ನೇತಾಡುತ್ತಿರುವಂತೆ ಬಿಂಬಿಸಲಾಗಿದೆ. ಇನ್ನೊಂದು ತಕ್ಕಡಿಯಲ್ಲಿ ರಾಮಾಯಣ ಇದೆ. ಇದು ತೀರ್ಪಿನ ತರ್ಕಬದ್ಧವಲ್ಲದ, ಅನಕ್ಷರಸ್ಥ ವಿಶ್ಲೇಷಣೆಯಾಗಿದೆ. ಏಕೆಂದರೆ ಹಿಂದೂಗಳ ಪರವಾಗಿ ತೀರ್ಪು ಬರಲು ರಾಮಾಯಣ ಒಂದೇ ಕಾರಣವಲ್ಲ, ಬಿಬಿಸಿಯ ವ್ಯಂಗ್ಯಚಿತ್ರ ಸುಪ್ರೀಂಕೋರ್ಟ್ನ ಸಂಪೂರ್ಣ ಅಪಹಾಸ್ಯವಾಗಿದೆ.
ಇತರ ನ್ಯಾಯಾಲಯಗಳು ಪರಿಹರಿಸಲು ವಿಫಲವಾದ ಹಲವು ಪ್ರಕರಣಗಳನ್ನು ಭಾರತೀಯ ಸುಪ್ರೀಂಕೋರ್ಟ್ ಅತ್ಯಂತ ಜತನದಿಂದ ಪರಿಹರಿಸಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ ಎಂಬುದನ್ನು ನಾವೆಲ್ಲರೂ ನೆನಪಿನಲ್ಲಿಡಬೇಕು. ಸುಪ್ರೀಂಕೋರ್ಟ್ ಕೇವಲ ಒಂದು ಸಂಸ್ಥೆ ಮಾತ್ರವಲ್ಲ, ಅದು ಹೃದಯವನ್ನು ಒಳಗೊಂಡ ನ್ಯಾಯದಾಯಕ ಸಂಸ್ಥೆಯಾಗಿದೆ, ಇದು ಕಾನೂನಿನ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಮಾತ್ರ ನಂಬಿಕೆಯನ್ನು ನೋಡುವುದಿಲ್ಲ. ಇಂತಹ ಭಾರತದ ನ್ಯಾಯಾಂಗದ ಬಗ್ಗೆ ಕೆಟ್ಟ ಮಾಹಿತಿ ಮತ್ತು ತಪ್ಪಾದ ಕಾಮೆಂಟ್ಗಳನ್ನು ರವಾನಿಸಲು ವಿದೇಶಿ ಏಜೆನ್ಸಿಗೆ ಯಾವ ಹಕ್ಕಿದೆ?
ಹಿಂದೂಗಳ ಮೇಲೆ ನಿರಂತರವಾಗಿ ಆಕ್ರಮಣ ಮಾಡುವುದನ್ನು ಅತ್ಯಂತ ಸುಲಭ ಎಂದು ಅಂದುಕೊಂಡಿರುವ ಬಿಬಿಸಿ, ಈಗ ಭಾರತದ ಸಂಸ್ಥೆಗಳ ವಿರುದ್ಧ ಯುದ್ಧವನ್ನು ಆರಂಭಿಸಿ ಬಿಟ್ಟಿದೆ. ಭಾರತೀಯರು ಅಂತಹ ಯಾವುದೇ ಯುದ್ಧವನ್ನು ಎದುರಿಸಲು ಸರ್ವ ಸನ್ನದ್ಧಗೊಂಡಿದ್ದಾರೆ ಎಂಬುದನ್ನು ಬಹುಶಃ ಅವರು ಮರೆತು ಬಿಟ್ಟಿದ್ದಾರೆ ಎಂದೆನಿಸುತ್ತದೆ.
ಒಂದು ವರ್ಷದ ಹಿಂದೆ, ಬಿಬಿಸಿ ಅಸಹ್ಯಕರವಾದ ಬ್ರಾಹ್ಮಣ ವಿರೋಧಿ ವ್ಯಂಗ್ಯಚಿತ್ರವನ್ನು ಪ್ರಕಟಿಸಿತ್ತು. ಟ್ವಿಟ್ಟರ್ ಸಿಇಒ ಜ್ಯಾಕ್ ಡಾರ್ಸೆ ಆ ಸಮಯದಲ್ಲಿ # ಸ್ಮ್ಯಾಶ್ ಬ್ರಾಹ್ಮಿನಿಕಲ್ ಪ್ಯಾಟ್ರಿಯಾರ್ಸಿ ಎಂಬ ಬರಹವನ್ನು ಹೊಂದಿದ್ದ ಪ್ಲ್ಯಾಕಾರ್ಡ್ ಹಿಡಿದಿದ್ದರು, ಈ ಮೂಲಕ ವಿವಾದದ ಚಂಡಮಾರುತ ಬೀಸುವಂತೆ ಮಾಡಿದ್ದರು. ಈ ವೇಳೆ ಬಿಬಿಸಿ ತನ್ನ ವ್ಯಂಗ್ಯಚಿತ್ರವನ್ನು ಪ್ರಕಟಗೊಳಿಸಿತ್ತು, ಇದರಲ್ಲಿ ವಿರೂಪಗೊಂಡ ಬ್ರಾಹ್ಮಣನೊಬ್ಬ ಸ್ವತಂತ್ರವಾಗಿ ಹಾರುವ ಮಹಿಳೆಯನ್ನು ಸೆರೆಹಿಡಿಯುವ ಪ್ರಯತ್ನ ಮಾಡುತ್ತಿರುವುದನ್ನು ತೋರಿಸಲಾಗಿತ್ತು.
ಈ ವರ್ಷದ ಜುಲೈ 10 ರಂದು ಬಿಬಿಸಿಯು, ‘Jai Shri Ram: The Hindu chant that became a murder cry’ ಎಂಬ ಲೇಖನವನ್ನು ಪ್ರಕಟಿಸಿತು. ಭಾರತದಲ್ಲಿ ಮುಸ್ಲಿಮರಿಗೆ ಮೂಲಭೂತ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ, ಕೋಮು ದ್ವೇಷದಿಂದ ಭಾರತ ಕುದಿಯುತ್ತಿದೆ ಎಂದು ಓದುಗರಿಗೆ ಮನವರಿಕೆ ಮಾಡುವ ಉದ್ದೇಶವನ್ನು ಈ ಲೇಖನ ಹೊಂದಿತ್ತು. ಭಾರತದಲ್ಲಿ ರಾಷ್ಟ್ರೀಯತೆಯ ಉದಯ ಮತ್ತು ಪ್ರಧಾನಿ ಮೋದಿ ಮತ್ತು ಅವರ ಬಿಜೆಪಿ ಸರ್ಕಾರದ ಯಶಸ್ಸು ಎಲ್ಲವನ್ನೂ ಬಿಬಿಸಿಯು ದ್ವೇಷದಿಂದಲೇ ನೋಡಿದೆ. ಬಿಬಿಸಿಯ ಅಪ್ರಾಮಾಣಿಕತೆಯು ಈ ಲೇಖನದ ಮೂಲಕ ಸ್ಪಷ್ಟವಾಗಿ ಗೋಚರಿಸಿತ್ತು. “ಜೈ ಶ್ರೀ ರಾಮ್” ಮತ್ತು ಅದರ ಮೂಲದ ಬಗ್ಗೆ ಅದು ಯಾವುದೇ ಸಂಶೋಧನೆ ನಡೆಸಲಿಲ್ಲ, ಲಕ್ಷಾಂತರ ಭಾರತೀಯರ ಹೃದಯದಲ್ಲಿ ಈ ಪಠಣವು ಯಾವ ಸ್ಥಾನವನ್ನು ಹೊಂದಿದೆ ಎಂಬುದನ್ನು ಅರಿತುಕೊಳ್ಳುವ ಪ್ರಯತ್ನವನ್ನೂ ಅದು ಮಾಡಿಲ್ಲ. ದ್ವೇಷ ಹರಡಿಸುವುಕ್ಕಾಗಿಯೇ ಇಂತಹ ಹಿಂದೂ ಭಾವನೆಗೆ ಧಕ್ಕೆ ತರುವ ಲೇಖನವನ್ನು ಅದು ಪ್ರಕಟಿಸಿತ್ತು.
ಬಿಬಿಸಿ ಅಜ್ಞಾನವನ್ನು ಹೊಂದಿರುವ ಒಂದು ಮಾಧ್ಯಮ ಸಂಸ್ಥೆ. ಭಾರತ ವಿರೋಧಿ ವಿಷಯವನ್ನು ನಿಯಮಿತವಾಗಿ ಪ್ರಕಟಿಸುವ ಮೂಲಕ ಕೆಲವು ರಹಸ್ಯ ಶಕ್ತಿಗಳನ್ನು ಸಂತೋಷಪಡಿಸುವ ಅನಿವಾರ್ಯತೆಯನ್ನು ಅದು ಖಂಡಿತವಾಗಿಯೂ ಹೊಂದಿದೆ. ಭಾರತ ಮತ್ತು ಹಿಂದೂಗಳ ವಿರುದ್ಧದ ಅವರ ಶುದ್ಧ ಪಕ್ಷಪಾತ ಜಗಜ್ಜಾಹೀರುಕೊಂಡಿರುವ ವಿಷಯ. ಹಿಂದೂಗಳನ್ನು ಅವರು ಉಗ್ರವಾದಿಗಳು ಎಂದು ಕರೆಯಲು ಹೇಸುವುದಿಲ್ಲ, ಆದರೆ ಜಿಹಾದಿ ಮಾಡುವವರನ್ನು, ವಿಧ್ವಂಸಕ ಕೃತ್ಯ ಎಸಗುವವರನ್ನು ಭಯೋತ್ಪಾದಕರು ಎಂದ ಕರೆಯಲು ಅದು ಹಿಂದೆ ಮುಂದೆ ನೋಡುತ್ತದೆ. ಆದರೆ ಭಾರತೀಯ ನಾಗರಿಕರು ಇಂದು ಹೆಚ್ಚು ಜಾಗೃತಗೊಂಡಿದ್ದಾರೆ, ಇವರ ದ್ವೇಷದ ನಡವಳಿಕೆಯನ್ನು ಸಾರಸಗಟಾಗಿ ತಿರಸ್ಕರಿಸುವ ದಿಟ್ಟತನ ಇಂದಿನ ಭಾರತೀಯರಿಗೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.