ಕೊಲ್ಲಂ: ಕೇರಳದ 105 ವರ್ಷದ ಅಜ್ಜಿಯೊಬ್ಬರು ಆ ರಾಜ್ಯದ ಅತ್ಯಂತ ಹಿರಿಯ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 6 ಮಕ್ಕಳು ಮತ್ತು 16 ಮೊಮ್ಮಕ್ಕಳನ್ನು ಹೊಂದಿರುವ ಭಾಗೀರಥಿ ಅಮ್ಮ 4 ನೇ ತರಗತಿ ಪರೀಕ್ಷೆಗೆ ಹಾಜರಾಗುವ ಮೂಲಕ ಇತಿಹಾಸವನ್ನು ಬರೆದಿದ್ದಾರೆ.
ತನ್ನ 9ನೇ ವಯಸ್ಸಿನಲ್ಲಿ, ಭಾಗೀರಥಿ ತನ್ನ ಕಿರಿಯ ಸಹೋದರರನ್ನು ನೋಡಿಕೊಳ್ಳುವ ಸಲುವಾಗಿ ತನ್ನ ಶಿಕ್ಷಣವನ್ನು ಮೊಟಕುಗೊಳಿಸಬೇಕಾಯಿತು. ರಾಜ್ಯ ಸಾಕ್ಷರತಾ ಮಿಷನ್ನ ಅಧಿಕಾರಿಗಳು ಅವರನ್ನು ಸಂಪರ್ಕಿಸಿದಾಗ ಅವರ ವಿದ್ಯಾಭ್ಯಾಸ ಮಾಡುವ ಕನಸಿಗೆ ರೆಕ್ಕೆ ಬಂತು.
“ಅವರು ಎಲ್ಲಾ ಪರೀಕ್ಷೆಗಳನ್ನೂ ಬರೆದಿದ್ದಾರೆ, ಕಲಿಯಲು ಬಯಸುವ ಎಲ್ಲರಿಗೂ ಅವರು ನಿಜವಾದ ಪ್ರೇರಣೆಯಾಗಿದ್ದಾರೆ” ಎಂದು ಕೇರಳ ರಾಜ್ಯ ಸಾಕ್ಷರತಾ ಮಿಷನ್ ಜಿಲ್ಲಾ ಸಂಯೋಜಕ ಸಿ.ಕೆ.ಪ್ರದೀಪ್ ಕುಮಾರ್ ಹೇಳುತ್ತಾರೆ.
ಕೇರಳ ಸರ್ಕಾರದ ಅಧೀನದಲ್ಲಿರುವ ಸ್ವಾಯತ್ತ ಸಂಸ್ಥೆಯಾದ ಕೇರಳ ರಾಜ್ಯ ಸಾಕ್ಷರತಾ ಮಿಷನ್ ರಾಜ್ಯದಲ್ಲಿ ಸಾಕ್ಷರತಾ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಓದಲು ಅಥವಾ ಬರೆಯಲು ಸಾಧ್ಯವಾಗದ ಅಥವಾ ಶಾಲೆಯ ಡ್ರಾಪ್- ಔಟ್ ಆಗಿರುವ ಜನರು ಕಾರ್ಯಕ್ರಮದಿಂದ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.