ನವದೆಹಲಿ: ಇಂದು ಸೆನ್ಸೆಕ್ಸ್ ಸಾರ್ವಕಾಲಿಕ ಉನ್ನತ ಮಟ್ಟಕ್ಕೆ ಏರಿದ್ದು, ನಿಫ್ಟಿ 50 ಸೂಚ್ಯಂಕವು ಪ್ರಮುಖವಾದ 12,000 ಮಟ್ಟವನ್ನು ಪುನಃ ಪಡೆದುಕೊಂಡಿದೆ. ಮಾರುಕಟ್ಟೆಯಲ್ಲಿನ ಏರಿಕೆಯು ರಿಲಾಯನ್ಸ್ ಇಂಡಸ್ಟ್ರೀಸ್ನ ಲಾಭದ ಹಿನ್ನಲೆಯಲ್ಲಿ ಬಂದಿದೆ ಎಂಬುದು ವಿಶೇಷ. ಸೂಚ್ಯಂಕ ಬೆಲ್ವೆಥರ್ ಶೇಕಡಾ 4.05 ರಷ್ಟು ಏರಿಕೆಯಾಗಿ ಹೊಸ ದಾಖಲೆಯ ಗರಿಷ್ಠ ರೂ.1,571ಕ್ಕೆ ಏರಿದೆ. ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಡಿಸೆಂಬರ್ನಿಂದ ಸುಂಕವನ್ನು ಹೆಚ್ಚಿಸುವ ಯೋಜನೆಯನ್ನು ಪ್ರಕಟಿಸಿದ ಒಂದು ದಿನದ ನಂತರ ಟೆಲಿಕಾಂ ಕೊಡುಗೆಗಳ ಸುಂಕವನ್ನು ಹೆಚ್ಚಿಸುವುದಾಗಿ ಟೆಲಿಕಾಂ ವಿಭಾಗವು ತಿಳಿಸಿದ ನಂತರ ಈ ಬೆಳವಣಿಗೆ ನಡೆದಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಲಾರ್ಸೆನ್ ಮತ್ತು ಟೌಬ್ರೊ, ಇಂಡಸ್ಇಂಡ್ ಬ್ಯಾಂಕ್, ಭಾರತಿ ಏರ್ಟೆಲ್, ಒಎನ್ಜಿಸಿ ಮತ್ತು ಐಸಿಐಸಿಐ ಬ್ಯಾಂಕ್ ಸಹ ಸೂಚ್ಯಂಕದ ಏರಿಕೆಗೆ ಕೊಡುಗೆ ನೀಡಿದೆ. ಸೆನ್ಸೆಕ್ಸ್ 346 ಪಾಯಿಂಟ್ಗಳಷ್ಟು ಏರಿಕೆಯಾಗಿದ್ದು, ಹೊಸ ದಾಖಲೆಯ ಗರಿಷ್ಠ 40,816 ಕ್ಕೆ ತಲುಪಿದೆ ಮತ್ತು ನಿಫ್ಟಿ 50 ಸೂಚ್ಯಂಕವು ಇಂಟ್ರಾಡೇ ಗರಿಷ್ಠ 12,039 ಕ್ಕೆ ತಲುಪಿದೆ.
ಮಧ್ಯಾಹ್ನ 12: 20 ರ ಹೊತ್ತಿಗೆ, ಸೆನ್ಸೆಕ್ಸ್ 296 ಪಾಯಿಂಟ್ ಅಥವಾ ಶೇ.0.78 ರಷ್ಟು ಹೆಚ್ಚಳವಾಗಿ 40,785 ಕ್ಕೆ ವಹಿವಾಟು ನಡೆಸಿತು ಮತ್ತು ಎನ್ಎಸ್ಇ ನಿಫ್ಟಿ 50 ಸೂಚ್ಯಂಕವು 91 ಪಾಯಿಂಟ್ ಅಥವಾ ಶೇ.0.75 ರಷ್ಟು ಏರಿಕೆ ಕಂಡು 12,031 ಕ್ಕೆ ತಲುಪಿತು.
“ಹೊಸ ಗರಿಷ್ಠಗಳು ಕೆಲವು ದಿನಗಳ ವಿಷಯವಾಗಿದೆ ಎಂದು ನಾವು ಭಾವಿಸುತ್ತೇವೆ. ಈಗ, ನಾವು ವಿಶಾಲ ಮಾರುಕಟ್ಟೆಗಳು ಉತ್ತಮ ಸಾಧನೆ ಮಾಡಲಿವೆ ಎಂದು ನಿರೀಕ್ಷಿಸುತ್ತೇವೆ” ಎಂದು ಐಐಎಫ್ಎಲ್ ಸೆಕ್ಯುರಿಟೀಸ್ ನಿರ್ದೇಶಕ ಸಂಜೀವ್ ಭಾಸಿನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.