ನವದೆಹಲಿ: ಬೆಳವಣಿಗೆ ಕುಸಿದಿದ್ದರೂ, FY20ರಲ್ಲಿ ಜಿ -20 ರಾಷ್ಟ್ರಗಳ ಪೈಕಿ ಭಾರತ ಈಗಲೂ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಎಂದು ಅಂದಾಜಿಸಲಾಗಿದೆ ಎಂಬುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿದ್ದಾರೆ.
ಜಿಡಿಪಿ ಬೆಳವಣಿಗೆಯನ್ನು ಹೆಚ್ಚಿಸುವ ಉದ್ದೇಶದಿಂದ ಆರ್ಥಿಕತೆಯಲ್ಲಿ ಮಧ್ಯಮ ಮಟ್ಟದ ಸ್ಥಿರ ಹೂಡಿಕೆ ದರ, ಖಾಸಗಿ ಬಳಕೆ ದರ ಸ್ಥಿರತೆ ಮತ್ತು ಸಾಧಾರಣ ರಫ್ತು ಕಾರ್ಯಕ್ಷಮತೆಯನ್ನು ಪರಿಹರಿಸಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಹೇಳಿದರು.
ಭಾರತದ ಆರ್ಥಿಕ ಬೆಳವಣಿಗೆ ಕುಸಿದಿದೆ, ಆದರೆ ಅದರ ಆರ್ಥಿಕತೆಯು ಇನ್ನೂ ಜಿ -20 ರಾಷ್ಟ್ರಗಳಲ್ಲಿ ವೇಗವಾಗಿ ಬೆಳೆಯುತ್ತಿದೆ ಮತ್ತು 2025 ರ ವೇಳೆಗೆ 5 ಟ್ರಿಲಿಯನ್ ಆರ್ಥಿಕತೆಯ ಗುರಿಯನ್ನು ಸಾಧಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಕೇರಳದ ಸಂಸದ ಎನ್ ಕೆ ಪ್ರೇಮಚಂದ್ರನ್ ಅವರ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರಿಸಿದ ಅವರು, ಆರ್ಥಿಕ ಬೆಳವಣಿಗೆಯಲ್ಲಿ ಇತ್ತೀಚಿನ ಕೆಲವು ಕುಸಿತದ ಹೊರತಾಗಿಯೂ, ಭಾರತದ ಆರ್ಥಿಕತೆಯು ವಿಶ್ವ ಆರ್ಥಿಕ ಮುನ್ನೋಟದಲ್ಲಿ 2019-20ರಲ್ಲಿ ಜಿ -20 ದೇಶಗಳ ಪೈಕಿ ಅತಿ ವೇಗದಲ್ಲಿ ಬೆಳೆಯುತ್ತದೆ ಎಂದಿದ್ದಾರೆ.
“ಇದಲ್ಲದೆ, ವಿಶ್ವ ಬ್ಯಾಂಕಿನ ಸುಲಲಿತ ವ್ಯಾಪಾರ ಉದ್ಯಮ 2020 ವರದಿಯಲ್ಲಿ, 2017 ರಲ್ಲಿ ಜಿಎಸ್ ಟಿ ಜಾರಿಗೆ ಬಂದ ನಂತರ ಭಾರತದ ಶ್ರೇಯಾಂಕವು 163ಕ್ಕೆ ಏರಿದೆ” ಎಂದು ಸೀತಾರಾಮನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.