ನವದೆಹಲಿ: ಭಾರತವು ತನ್ನ ಕಾರ್ಟೋಗ್ರಫಿ ಸ್ಯಾಟಲೈಟ್ ಕಾರ್ಟೊಸಾಟ್ -3 ಮತ್ತು ಅಮೆರಿಕಾದ 13 ಕಮರ್ಷಿಯಲ್ ನ್ಯಾನೊ ಸ್ಯಾಟಲೈಟ್ಗಳನ್ನು ನವೆಂಬರ್ 25 ರಂದು ಸನ್-ಸಿಂಕ್ರೊನಸ್ ಕಕ್ಷೆಗೆ ಉಡಾವಣೆ ಮಾಡಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ. ಇಸ್ರೋ ಪ್ರಕಾರ, ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ SHAR ನಿಂದ ಬೆಳಿಗ್ಗೆ 9.28ಕ್ಕೆ ರಾಕೆಟ್ ಹಾರಲಿದೆ.
ಇಸ್ರೋ ಪ್ರಕಾರ, ಅದರ ರಾಕೆಟ್ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್-ಎಕ್ಸ್ಎಲ್ ವೇರಿಯಂಟ್(ಪಿಎಸ್ಎಲ್ವಿ-ಎಕ್ಸ್ಎಲ್) ನವೆಂಬರ್ 25 ರಂದು ಕಾರ್ಟೊಸಾಟ್ -3 ಮತ್ತು 13 ಕಮರ್ಷಿಯಲ್ ನ್ಯಾನೊ ಸ್ಯಾಟಲೈಟ್ಗಳನ್ನು ಕಕ್ಷೆಗೆ ಒಳಪಡಿಸಲಿದೆ. ಇದು ಶ್ರೀಹರಿಕೋಟದ SHARನಿಂದ ಕೈಗೊಳ್ಳಲಾಗುತ್ತಿರುವ 74 ನೇ ಉಡಾವಣಾ ಕಾರ್ಯಾಚರಣೆಯಾಗಿದೆ.
ಕಾರ್ಟೊಸಾಟ್-3 ಉಪಗ್ರಹವು ಮೂರನೇ ತಲೆಮಾರಿನ ಚಾಣಾಕ್ಷ ಸುಧಾರಿತ ಉಪಗ್ರಹವಾಗಿದ್ದು, ಹೆಚ್ಚಿನ ರೆಸಲ್ಯೂಶನ್ ಇಮೇಜಿಂಗ್ ಸಾಮರ್ಥ್ಯವನ್ನು ಹೊಂದಿದೆ. ಉಪಗ್ರಹವನ್ನು 97.5 ಡಿಗ್ರಿಗಳ ಇಳಿಜಾರಿನಲ್ಲಿ 509 ಕಿ.ಮೀ ಕಕ್ಷೆಯಲ್ಲಿ ಇಡಲಾಗುವುದು.
ಕಾರ್ಟೊಸಾಟ್ -3 ಜೊತೆಗೆ, ಇಸ್ರೋದ ಪಿಎಸ್ಎಲ್ವಿ-ಎಕ್ಸ್ಎಲ್ ರಾಕೆಟ್ ಅಮೆರಿಕಾದ 13 ವಾಣಿಜ್ಯ ನ್ಯಾನೊ ಉಪಗ್ರಹಗಳನ್ನು ಸಹ ಸಾಗಿಸಲಿದೆ, ಎಲ್ಲವನ್ನೂ ಒಂದೇ ಹಾರಾಟದ ಕಾರ್ಯಾಚರಣೆಯ ಮೂಲಕ ಸನ್-ಸಿಂಕ್ರೊನಸ್ ಕಕ್ಷೆಯಲ್ಲಿ ನಿಯೋಜಿಸಲಾಗುವುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.