ನವದೆಹಲಿ: ಅಂತಾರಾಷ್ಟ್ರೀಯ ರಾಜಕೀಯ ಸ್ಥಾನದ ಬಗ್ಗೆ ಭಾರತದ ನಿಲುವು ಕುರಿತು ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಟೋನಿ ಅಬಾಟ್ ಅವರು, ಭಾರತವು ಆತ್ಮಾವಲೋಕನ ಮಾಡುವುದರಿಂದ ಬಹಳ ದೂರ ಸಾಗಿದೆ ಮತ್ತು ಪ್ರಧಾನಿ ನರೇಂದ್ರ ಅವರ ನೇತೃತ್ವದಲ್ಲಿ ವಿಶ್ವ ವೇದಿಕೆಯಲ್ಲಿ ಭಾರತದ ಧ್ವನಿ ಹೆಚ್ಚು ವ್ಯಾಪಕವಾಗಿ ಕೇಳಲ್ಪಡುತ್ತಿದೆ ಎಂದಿದ್ದಾರೆ.
“ಉನ್ನತಿಗೇರುವಂತಹ, ಸಭ್ಯ ಮತ್ತು ಮಾನವೀಯ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಖಂಡಿತವಾಗಿಯೂ ಭಾರತದ ಧ್ವನಿಯನ್ನು ಹೆಚ್ಚು ವ್ಯಾಪಕವಾಗಿ ಪಸರಿಸುತ್ತಿದ್ದಾರೆ” ಎಂದಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್ಎಸ್ಸಿ) ಶಾಶ್ವತ ಸ್ಥಾನವನ್ನು ಹೊಂದಲು ಮಿಲಿಟರಿ ಗಾತ್ರ ಮತ್ತು ಆರ್ಥಿಕ ಸಾಮರ್ಥ್ಯದ ಅರ್ಹತೆಯನ್ನು ಒಂದು ದೇಶ ಹೊಂದಿದ್ದರೆ ಅದು ಭಾರತ ಎಂದು ಅಬಾಟ್ ಒತ್ತಿಹೇಳಿದ್ದಾರೆ. ಆಸ್ಟ್ರೇಲಿಯಾದಲ್ಲಿ ಪ್ರಸ್ತುತ ಇರುವ ಸರ್ಕಾರ ಭಾರತಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನಮಾನ ನೀಡುವ ಬಗ್ಗೆ ಯಾವ ನಿಲುವನ್ನು ಹೊಂದಿದೆ ಎಂಬುದರ ಬಗ್ಗೆ ತನಗೆ ತಿಳಿದಿಲ್ಲ, ಆದರೆ ತಾನು ಭಾರತವನ್ನು ಮಂಡಳಿಯಲ್ಲಿ ನೋಡಲು ಹೆಚ್ಚು ಉತ್ಸಾಹಿತನಾಗಿರುವುದಾಗಿ ಅವರು ಹೇಳಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾದ ಎರಡು ಪ್ರಜಾಪ್ರಭುತ್ವಗಳ ನಡುವೆ ನಿಕಟ ಸಂಬಂಧವನ್ನು ಪ್ರತಿಪಾದಿಸಿರುವ ಅಬಾಟ್ ಅವರು, ಆರ್ಥಿಕ ಅರ್ಥದಲ್ಲಿ ಭಾರತವು ಮುಂದಿನ ಚೀನಾ ಆಗಬಹುದು ಎಂದಿದ್ದಾರೆ. ಅಲ್ಲದೇ, ಭಾರತವನ್ನು ಆರ್ಥಿಕ ಮಹಾಶಕ್ತಿಯಾಗಿ ಪರಿವರ್ತಿಸಲು ಆಸ್ಟ್ರೇಲಿಯಾ ನೆರವು ನೀಡಬೇಕು ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.