ನವದೆಹಲಿ: ಹಿಂಸಾಚಾರ ಮತ್ತು ಇತರ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿರುವ ಮೇಘಾಲಯ ಮೂಲದ ಬಂಡುಕೋರ ಗುಂಪು ಹಿನ್ನಿಯೆವೆಟ್ರೆಪ್ ನ್ಯಾಷನಲ್ ಲಿಬರೇಶನ್ ಕೌನ್ಸಿಲ್ (ಎಚ್ಎನ್ಎಲ್ಸಿ) ಅನ್ನು ಕೇಂದ್ರ ಸರ್ಕಾರ ನಿಷೇಧಕ್ಕೊಳಪಡಿಸಿದೆ.
ಎಚ್ಎನ್ಎಲ್ಸಿ ಮತ್ತು ಅದರ ಎಲ್ಲಾ ಬಣಗಳು, ಅಂಗ ಸಂಸ್ಥೆಗಳನ್ನು ನಿಷೇಧಕ್ಕೊಳಪಡಿಸಲಾಗಿದೆ. ಅವುಗಳು ದೇಶದಲ್ಲಿ ಇನ್ನು ಮುಂದೆ ಕಾರ್ಯಾಚರಿಸುವಂತೆ ಇಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.
ಎಚ್ಎನ್ಎಲ್ಸಿ ಸಂಘಟನೆಯ ಕಾರ್ಯಗಳು, ಚಟುವಟಿಕೆಗಳು ದೇಶದ ಸಾರ್ವಭೌಮತೆ, ಏಕತೆಗೆ ಮಾರಕವಾಗಿದೆ ಎಂದು ಸಚಿವಾಲಯ ಹೇಳಿದೆ.
ಈ ಹಿಂದೆ ಎಚ್ಎನ್ಎಲ್ಸಿ ಅನ್ನು 2000 ನವೆಂಬರ್ 16ರಂದು ನಿಷೇಧಕ್ಕೆ ಒಳಪಡಿಸಲಾಗಿತ್ತು, ಆದರೆ ಬಳಿಕ ನಿಷೇಧವನ್ನು ಹಿಂಪಡೆಯಲಾಗಿತ್ತು. ಆದರೆ ಸಂಘಟನೆ ಮತ್ತೆ ತನ್ನ ದುಷ್ಕೃತ್ಯಗಳನ್ನು ಹೆಚ್ಚಿಸಲು ಪ್ರಾರಂಭಿಸಿದ್ದರಿಂದ ಮತ್ತೆ ನಿಷೇಧವನ್ನು ಹೇರಲಾಗಿದೆ.
ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ, 1967 (1967 ರ 37) ರ ಸೆಕ್ಷನ್ 3 ರ ಉಪವಿಭಾಗ (1) ಅಡಿಯಲ್ಲಿ ಕೇಂದ್ರ ಸರ್ಕಾರ ಈ ಸಂಘಟನೆಯನ್ನು ನಿಷೇಧಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.