ನವದೆಹಲಿ: ಭಾರತೀಯ ರೈಲ್ವೆಯ ಪಿಎಸ್ಯು ಮಿನಿರತ್ನ, ರೈಲ್ ಟೆಲ್ ಡೇರಾ ಬಾಬಾ ನಾನಕ್ ನಿಲ್ದಾಣ ಮತ್ತು ಕಾರ್ತಾರ್ಪುರ ಕಾರಿಡಾರ್ನ ಭಾರತದ ಬದಿಯಲ್ಲಿರುವ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ನಲ್ಲಿ ಉಚಿತ ವೈ-ಫೈ ಸೇವೆಗಳನ್ನು ಪ್ರಾರಂಭಿಸಿದೆ. ಇದರಿಂದ ಯಾತ್ರಾ ಸ್ಥಳಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಅನುಕೂಲವಾಗಲಿದೆ.
ಗುರುನಾನಕ್ ಅವರ 550 ನೇ ಜನ್ಮ ವಾರ್ಷಿಕೋತ್ಸವದ ಆಚರಣೆಯ ಸಂದರ್ಭದಲ್ಲಿ ಕರ್ತಾರ್ಪುರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಲು ಪಾಕಿಸ್ಥಾನಕ್ಕೆ ತೆರಳುವ ಯಾತ್ರಾರ್ಥಿಗಳಿಗೆ ಸುಲಭವಾಗಿ ಪ್ರವೇಶ ಕಲ್ಪಿಸುವ ಸಲುವಾಗಿ ಕರ್ತಾರ್ಪುರ್ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 9 ರಂದು ಉದ್ಘಾಟಿಸಿದ್ದರು.
ಡೇರಾ ಬಾಬಾ ನಾನಕ್ ನಿಲ್ದಾಣವು ಯಾತ್ರೆಯ ಕಾರಣದಿಂದಾಗಿ ಪ್ರಯಾಣಿಕರ ಹೆಚ್ಚಳವನ್ನು ಕಂಡಿದೆ. ಡೇರಾ ಬಾಬಾ ನಾನಕ್ ಗೆ ಭೇಟಿ ನೀಡುವ ಯಾತ್ರಾರ್ಥಿಗಳಿಂದಾಗಿ ದಟ್ಟಣೆಯನ್ನು ಕಾಣುತ್ತಿರುವ ಸುಲ್ತಾನ್ಪುರ ಲೋಧಿ ನಿಲ್ದಾಣಕ್ಕೂ ವೈ-ಫೈ ಒದಗಿಸಲಾಗಿದೆ.
ಐಸಿಪಿಯಲ್ಲಿ 8 Mbps BW ಪೂರೈಸಲು ರೈಲ್ ಟೆಲ್ ಅನ್ನು ಎನ್ಐಸಿಗೆ ವಹಿಸಲಾಗಿತ್ತು. ಈ ಗುತ್ತಿಗೆ ಲೈನ್ ಸಂಪರ್ಕವನ್ನು ಪಿಎಸ್ಯು 15 ದಿನಗಳ ದಾಖಲೆ ಸಮಯದೊಳಗೆ ಮಾಡಿದೆ, ಇದರಲ್ಲಿ ಅಮೃತಸರದಿಂದ ಡೇರಾ ಬಾಬಾ ನಾನಕ್ಗೆ 45 ಕಿ.ಮೀ ದೂರದ ರೇಡಿಯೋ ಕನೆಕ್ಟಿವಿಟಿ ಮತ್ತು ಡೇರಾ ಬಾಬಾದಿಂದ 5 ಕಿ.ಮೀ ದೂರದಲ್ಲಿರುವ ಕೊನೆಯ ಮೈಲಿ ಅಂಡರ್ ಗ್ರೌಂಡ್ ಒಎಫ್ಸಿ ಸಂಪರ್ಕವನ್ನು ಒಳಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.