ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಛೇರಿ ಮತ್ತು ಹೈಕೋರ್ಟುಗಳ ಮುಖ್ಯ ನ್ಯಾಯಮೂರ್ತಿಗಳ ಕಛೇರಿ ಮಾಹಿತಿ ಹಕ್ಕುಗಳ ಕಾಯ್ದೆ (ಆರ್ಟಿಐ)ಯಡಿ ಬರುತ್ತದೆ ಎಂದು ಸುಪ್ರೀಂಕೋರ್ಟ್ ಬುಧವಾರ ಮಹತ್ವದ ತೀರ್ಪನ್ನು ನೀಡಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಯ್ ನೇತೃತ್ವದ ಐದು ನ್ಯಾಯಾಧೀಶರುಗಳಾದ ಎನ್.ವಿ.ರಮಣ, ಡಿ.ವೈ.ಚಂದ್ರಚೂಡ್, ದೀಪಕ್ ಗುಪ್ತಾ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ಸಂವಿಧಾನ ಪೀಠ ಈ ತೀರ್ಪು ಪ್ರಕಟಿಸಿದೆ.
ನ್ಯಾಯಮೂರ್ತಿಗಳ ಕಛೇರಿಯನ್ನು ಆರ್ಟಿಐ ಕಾಯ್ದೆ ವ್ಯಾಪ್ತಿಗೆ ಒಳಪಡಿಸುವುದರಿಂದ ನ್ಯಾಯಾಂಗವನ್ನು ದುರ್ಬಳಗೊಳಿಸಿದಂತೆ ಆಗುವುದಿಲ್ಲ ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
“ಯಾರೂ ಕತ್ತಲೆಯ ಸ್ಥಿತಿಯಲ್ಲಿರಲು ಅಥವಾ ಯಾರನ್ನೂ ಕತ್ತಲೆಯಲ್ಲಿ ಇರಿಸಲು ಬಯಸುವುದಿಲ್ಲ. ಆದರೆ, ನಮ್ಮ ಮುಂದಿರುವ ಸವಾಲು ಎಂದರೆ ಪಾರದರ್ಶಕತೆಯ ಹೆಸರಿನಲ್ಲಿ ನಾವು ನಮ್ಮ ಸಂಸ್ಥೆಯನ್ನು ನಾಶಮಾಡದಿರುವಂತೆ ನೋಡಿಕೊಳ್ಳುವುದು” ಎಂದು ನ್ಯಾಯಪೀಠ ಹೇಳಿದೆ.
ಪಾರದರ್ಶಕತೆ ನ್ಯಾಯಾಂಗಕ್ಕೆ ತೊಡಕಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.