ನವದೆಹಲಿ: ಮಳೆಯೇ ಬರಲಿ, ಸಿಡಿಲೇ ಬರಲಿ ಯೋಧ ದೇಶ ಕಾಯುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ. ಆತನ ಕರ್ತವ್ಯ ನಿಷ್ಠೆ ಎಂತಹುದು ಎಂಬುದಕ್ಕೆ ನಮ್ಮ ದೇಶದ ಮುಂದೆ ಹಲವಾರು ನಿದರ್ಶನಗಳಿವೆ. ಅದಕ್ಕೆ ಮತ್ತೊಂದು ಸೇರ್ಪಡೆ, ದೊಡ್ಡ ದೊಡ್ಡ ಗಾತ್ರ ಮಂಜು ಬೀಳುತ್ತಿದ್ದರೂ ಕಾವಲು ಕಾಯುವುದನ್ನು ಮುಂದುವರೆಸುತ್ತಿರುವ ಸಿಆರ್ಪಿಎಫ್ ಯೋಧ. ಈ ಯೋಧನ ಫೋಟೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಸಿಆರ್ಪಿಎಫ್ ಯೋಧ ಐಝಾಜ್ ಅವರು ಹಳದಿ ವಿಂಡ್ಚೀಟರ್ ಅನ್ನು ತೊಟ್ಟು ಜಮ್ಮು ಕಾಶ್ಮೀರದಲ್ಲಿ ಎಡೆಬಿಡದೆ ಬೀಳುತ್ತಿರುವ ಮಂಜಿನ ನಡುವೆ ಕಾವಲು ಕಾಯುತ್ತಿರುವ ಫೋಟೋವನ್ನು ಮಾಜಿ ಕ್ರಿಕೆಟಿಗ ಮತ್ತು ಪ್ರಸ್ತುತ ಸಿಆರ್ಪಿಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಕಶ್ಯಪ್ ಕಡಗತ್ತೂರು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅಝೀಜ್ ಅವರ ಸುತ್ತಲೂ ದೊಡ್ಡ ದೊಡ್ಡ ಗಾತ್ರದ ಮಂಜಿನ ಗಡ್ಡೆಗಳಿವೆ. ಗಡ್ಡೆಗಳು ಬೀಳುತ್ತಿರುವ ದೃಶ್ಯವೂ ಫೋಟೋದಲ್ಲಿದೆ.
“ಇಲ್ಲ, ಇದು ಬ್ಯಾಟ್ಮನ್ ಅಲ್ಲ. ಇವರು ಸಿಆರ್ಪಿಎಫ್ ಕಾನ್ಸ್ಟೇಬಲ್ ಐಝಾಜ್, ಭಾರೀ ಹಿಮಪಾತದ ನಡುವೆಯೂ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ” ಎಂದು ಕಡಗತ್ತೂರು ಫೋಟೋಗೆ ಒಕ್ಕಣೆ ಬರೆದಿದ್ದಾರೆ. “ಪೋಲಿಸಿಂಗ್ 24/7 ಸೇವೆಯಾಗಿದೆ. ಸಿಆರ್ಪಿಎಫ್ ಎಂದರೆ ಕರ್ತವ್ಯ. ಸಿಆರ್ಪಿಎಫ್ ವೃತ್ತಿಪರತೆಯನ್ನು ಸೂಚಿಸುತ್ತದೆ” ಎಂದು ಅವರು ಹೇಳಿದ್ದಾರೆ.
ಆಗಸ್ಟ್ 5 ರಂದು ಸೆಕ್ಷನ್ 370 ಅನ್ನು ರದ್ದುಗೊಳಿಸಿದಾಗಿನಿಂದ ಸುಮಾರು 3.5 ಲಕ್ಷ ಭದ್ರತಾ ಸಿಬ್ಬಂದಿಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಇರಿಸಲಾಗಿದೆ. ಕಳೆದ ವಾರ ಈ ಋತುವಿನ ಮೊದಲ ಹಿಮಪಾತವನ್ನು ಕೇಂದ್ರಾಡಳಿತ ಪ್ರದೇಶವು ಸ್ವೀಕರಿಸಿದ್ದು, ಕಣಿವೆಯಲ್ಲಿನ ಜೀವನವನ್ನು ಅಸ್ತವ್ಯಸ್ಥಗೊಳಿಸಿದೆ. ಕಣಿವೆಯಾದ್ಯಂತ ತೋಟಗಾರಿಕೆ, ವಿದ್ಯುತ್ ಮೂಲಸೌಕರ್ಯಗಳಿಗೆ ಅನಿರೀಕ್ಷಿತ ಹಿಮಪಾತವು ಹಾನಿಗೊಳಗಾಗಿದೆ.
No, this is not Batman. He’s Constable Aijaz of CRPF performing his duty in Union Territory of J&K despite massive snowfall. Policing is a 24/7 service. CRPF means business. CRPF stands for professionalism. #Kashmir pic.twitter.com/UvuUoLsHE4
— Kashyap Kadagattur 🇮🇳 (@iamkash_kr) November 8, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.