ದೋಹಾ: 2020ರ ಟೋಕಿಯೊ ಒಲಿಂಪಿಕ್ಸ್ಗಾಗಿ ಭಾರತದ 15 ಶೂಟರ್ಗಳು ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಭಾನುವಾರ ದೋಹಾದಲ್ಲಿ ನಡೆದ 14ನೇ ಏಷ್ಯನ್ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಅಂಗದ್ ವೀರ್ ಸಿಂಗ್ ಬಜ್ವಾ ಚಿನ್ನ ಮತ್ತು ಮೈರಾಜ್ ಅಹ್ಮದ್ ಖಾನ್ ಬೆಳ್ಳಿ ಗೆದ್ದುಕೊಂಡಿದ್ದಾರೆ. ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಅವರ ಕಂಚು ಗೆದ್ದುಕೊಂಡಿದ್ದಾರೆ.
ಈ ಮೂವರ ಗೆಲುವಿನೊಂದಿಗೆ ಭಾರತದ ಒಲಿಂಪಿಕ್ಸ್ ಖೋಟ 3 ಸ್ಥಾನಗಳ ಏರಿಕೆಯನ್ನು ಕಂಡಿದೆ.
ಈ ಬಗ್ಗೆ ಟ್ವಿಟ್ ಮಾಡಿರುವ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜ್ಜು ಅವರು, “ಟೋಕಿಯೋ 2020ಕ್ಕೆ ಭಾರತವು 15 ಸ್ಥಾನಗಳ ಖೋಟವನ್ನು ಗೆದ್ದುಕೊಂಡಿದೆ. ಇದು ದೇಶ ಇದುವರೆಗೆ ಒಲಿಂಪಿಕ್ಸ್ಗೆ ಪಡೆದ ಅತೀ ಹೆಚ್ಚಿನ ಶೂಟಿಂಗ್ ಅರ್ಹತೆಯಾಗಿದೆ. ಅರ್ಹತೆ ಪಡೆದುಕೊಂಡ ಎಲ್ಲರಿಗೂ ಅಭಿನಂದನೆಗಳು ಮತ್ತು ಒಲಿಂಪಿಕ್ಸ್ ಪ್ರಯಾಣಕ್ಕೆ ಶುಭ ಹಾರಕೆಗಳು” ಎಂದಿದ್ದಾರೆ.
2016ರಲ್ಲಿ ರಿಯೋ ಗೇಮ್ಸ್ಗೆ 12 ಮಂದಿ ಶೂಟರ್ಗಳು ಅರ್ಹತೆಯನ್ನು ಪಡೆದುಕೊಂಡಿದ್ದರು, 2012ರಲ್ಲಿ 11 ಮಂದಿ ಅರ್ಹತೆಯನ್ನು ಪಡೆದುಕೊಂಡಿದ್ದರು. 2020ಕ್ಕೆ ಭಾರತದ 15 ಮಂದಿ ಶೂಟರ್ಗಳು ಅರ್ಹತೆಯನ್ನು ಪಡೆದುಕೊಂಡಿರುವುದು ಮಹತ್ವದ ಬೆಳವಣಿಗೆಯಾಗಿದೆ.
13th #Olympic Quota for India in Shooting as #AishwarySinghTomar wins bronze medal in Men’s 50m Rifle 3P event of #AsianChampionships.
Many Congratulations.@KirenRijiju @RijijuOffice @DGSAI @PIB_India @PMOIndia @ddsportschannel @IndiaSports pic.twitter.com/WvNByiZiXJ— SAIMedia (@Media_SAI) November 10, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.