ನವದೆಹಲಿ: ಮಾರಿಷಸ್ನ ಪ್ರಧಾನಿ ಪ್ರವೀಂದ್ ಜುಗ್ನಾಥ್ ಅವರು ಚುನಾವಣೆಯಲ್ಲಿ ವಿಜಯವನ್ನು ಸಾಧಿಸಿದ್ದಾರೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶನಿವಾರ ಅಭಿನಂದಿಸಿದ್ದಾರೆ.
ಟ್ವಿಟ್ ಮಾಡಿರುವ ಮೋದಿ, “ಚುನಾವಣೆಯಲ್ಲಿ ಜಯ ಸಾಧಿಸಿದ್ದಕ್ಕಾಗಿ ಪಿ.ಜುಗ್ನಾಥ್ ಅವರಿಗೆ ಅಭಿನಂದನೆಗಳು. ಭಾರತ ಮತ್ತು ಮಾರಿಷಸ್ ನಡುವಿನ ಭ್ರಾತೃತ್ವ ಸಂಬಂಧ ಮತ್ತು ಅಭಿವೃದ್ಧಿ ಸಹಭಾಗಿತ್ವವನ್ನು ಬಲಪಡಿಸಲು ತಾನು ಮತ್ತು ಪ್ರವೀಂದ್ ಜುಗ್ನಾಥ್ ನಿಕಟವಾಗಿ ಕೆಲಸ ಮಾಡಿದ್ದೇವೆ. ಶೀಘ್ರದಲ್ಲೇ ನಿಮ್ಮೊಂದಿಗೆ ಮಾತನಾಡಲು ಮತ್ತು ನಮ್ಮದೊಂದಿಗಿನ ಕಾರ್ಯವನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ” ಎಂದಿದ್ದಾರೆ.
ಪ್ರವೀಂದ್ ಜುಗ್ನಾಥ್ ಅವರ ಆಡಳಿತಾರೂಢ ಮಿಲಿಟಂಟ್ ಸೋಷಿಯಲಿಸ್ಟ್ ಮೂವ್ಮೆಂಟ್ (ಎಂಎಸ್ಎಂ) ಸಂಸತ್ತಿನ ಅರ್ಧಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದೆ, ಈ ಮೂಲಕ ಪ್ರವೀಂದ್ ಜುಗ್ನಾಥ್ ಅವರಿಗೆ ಐದು ವರ್ಷಗಳ ಅವಧಿ ಮತ್ತೆ ಲಭಿಸಿದೆ. ಶುಕ್ರವಾರ ಮಧ್ಯಂತರ ಚುನಾವಣಾ ಫಲಿತಾಂಶಗಳು ಹೊರಬಿದ್ದಿವೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಮಿಲಿಟಂಟ್ ಸೋಷಿಯಲಿಸ್ಟ್ ಮೂವ್ಮೆಂಟ್ (ಎಂಎಸ್ಎಂ)ನ 62 ಸ್ಥಾನಗಳಲ್ಲಿ 35 ಸ್ಥಾನಗಳನ್ನು ಗೆದ್ದರೆ, ಅದರ ಪ್ರತಿಸ್ಪರ್ಧಿಯಾದ ಲೇಬರ್ ಪಾರ್ಟಿ ಮತ್ತು ಮಾರಿಷಿಯನ್ ಮಿಲಿಟಂಟ್ ಮೂವ್ಮೆಂಟ್ (ಎಂಎಂಎಂ) ಕ್ರಮವಾಗಿ 15 ಮತ್ತು 10 ಸ್ಥಾನಗಳನ್ನು ಗಳಿಸಿವೆ ಎಂದು ಅಲ್ಲಿನ ಚುನಾವಣಾ ಆಯೋಗ ತಿಳಿಸಿದೆ.
Congratulations @PKJugnauth on your electoral victory.
We have worked closely together to strengthen fraternal relations and development partnership between India and Mauritius.
I look forward to speaking with you soon and to continuing our engagement. @MauritiusPM pic.twitter.com/0bpW3hWKnF
— Narendra Modi (@narendramodi) November 9, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.