ನವದೆಹಲಿ: ಇನ್ನು ಮುಂದೆ ಐಪಿಎಲ್ ಆರಂಭಿಕ ಸಮಾರಂಭವನ್ನು ಆಯೋಜನೆಗೊಳಿಸುವುದಿಲ್ಲ ಎಂದು ಬಿಸಿಸಿಐ ಹೇಳಿದೆ. ಉದ್ಘಾಟನಾ ಸಮಾರಂಭವನ್ನು ಆಯೋಜನೆಗೊಳಿಸುವುದು ಹಣವನ್ನು ಪೋಲು ಮಾಡಿದಂತೆ ಎಂದು ಅದು ಹೇಳಿದೆ.
“ಉದ್ಘಾಟನಾ ಸಮಾರಂಭಗಳು ಹಣವನ್ನು ಪೋಲು ಮಾಡುತ್ತವೆ. ಕ್ರಿಕೆಟ್ ಪ್ರಿಯರಿಗೆ ಇಂತಹ ಸಮಾರಂಭಗಳಲ್ಲಿ ಆಸಕ್ತಿ ಇರುವುದಿಲ್ಲ, ಆದರೂ ಪ್ರದರ್ಶಕರಿಗೆ ದುಬಾರಿ ಹಣವನ್ನು ನೀಡಲಾಗುತ್ತದೆ” ಎಂದು ಬಿಸಿಸಿಐ ಹೇಳಿದೆ.
“ಐಪಿಎಲ್ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲು ಅಂದಾಜು ವೆಚ್ಚ 20 ಕೋಟಿ ರೂಪಾಯಿ ತಗಲುತ್ತದೆ. ಭಾರತೀಯ ಸೇನೆಗೆ 11 ಕೋಟಿ ರೂಪಾಯಿಯನ್ನು ನೀಡಲು, ಸಿಆರ್ಪಿಎಫ್ಗೆ 7 ಕೋಟಿ ರೂಪಾಯಿ ಮತ್ತು ನೌಕಾಪಡೆ ಹಾಗೂ ವಾಯುಪಡೆಗೆ ತಲಾ 1 ಕೋಟಿ ರೂಪಾಯಿಯನ್ನು ನೀಡಲು ಅವಿರೋಧವಾಗಿ ನಿರ್ಧರಿಸಿದ್ದೇವೆ” ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.
“ಒಕ್ಕೂಟವಾಗಿ ನಾವು, ನಿಯಮಿತವಾಗಿ ಐಪಿಎಲ್ ಉದ್ಘಾಟನಾ ಸಮಾರಂಭವನ್ನು ನಡೆಸದಿರುವುದು ಉತ್ತಮ ಎಂದು ನಾವು ಭಾವಿಸಿದ್ದೇವೆ. ಬದಲಾಗಿ, ಈ ಮೊತ್ತವನ್ನು ಎಲ್ಲರ ಹೃದಯಕ್ಕೆ ಹತ್ತಿರವಾದ ಮತ್ತು ಮುಖ್ಯವಾದ ಕಾರಣಕ್ಕಾಗಿ ಕೊಡುಗೆ ನೀಡಲು ನಾವು ನಿರ್ಧರಿಸಿದ್ದೇವೆ” ಎಂದು ವಿನೋದ್ ರೈ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.