ನವದೆಹಲಿ: ಭಾರತದ ನಿಖರ ಪಾಸ್ಪೋರ್ಟ್ ಇದ್ದರಷ್ಟೇ ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಕರ್ತಾರ್ ಸಾಹೀಬ್ ಗುರುದ್ವಾರಕ್ಕೆ ಭೇಟಿ ನೀಡಬಹುದು ಎಂದು ಕೇಂದ್ರ ಸರ್ಕಾರ ಗುರುವಾರ ಘೋಷಣೆ ಮಾಡಿದೆ. ಕುತಂತ್ರಿ ಪಾಕಿಸ್ಥಾನ ತನ್ನ ನರಿ ಬುದ್ಧಿಯನ್ನು ತೋರಿಸಬಹುದು ಎಂಬ ಕಾರಣಕ್ಕೆ ಭಾರತ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಗುರು ನಾನಕ್ ದೇವ್ ಅವರ 550ನೇ ಜನ್ಮ ವರ್ಷಾಚರಣೆಯ ಪ್ರಯುಕ್ತ ಕಾರ್ತಾರ್ಪುರ ಸಾಹೀಬ್ಗೆ ಅಪಾರ ಭಕ್ತಾದಿಗಳು ಭೇಟಿ ನೀಡಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಪಾಕಿಸ್ಥಾನ ದಿನಕ್ಕೊಂದು ರೀತಿಯ ಹೇಳಿಕೆಯನ್ನು ನೀಡಿ ಎಲ್ಲರಲ್ಲೂ ಗೊಂದಲವನ್ನು ಸೃಷ್ಟಿಸುತ್ತಿದೆ.
ಒಂದು ಬಾರಿ ಭಕ್ತಾದಿಗಳಿಗೆ ಕಾರ್ತಾರ್ಪುರಕ್ಕೆ ಭೇಟಿ ನೀಡಲು ಯಾವುದೇ ಪಾಸ್ಪೋರ್ಟ್ನ ಅಗತ್ಯವಿಲ್ಲ ಎನ್ನುತ್ತಿದೆ, ಇನ್ನೊಂದು ಬಾರಿ ಪಾಸ್ಪೋರ್ಟ್ ಇದ್ದರಷ್ಟೇ ಪ್ರವೇಶ ಎನ್ನುತ್ತಿದೆ.
ಒಂದೆಡೆ, ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಅವರು ಕರ್ತಾರ್ಪುರ್ ಸಾಹಿಬ್ಗೆ ಭೇಟಿ ನೀಡುವವರಿಗೆ ಯಾವುದೇ ಪಾಸ್ಪೋರ್ಟ್ ಅಗತ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ, ಆದರೆ ಪಾಕಿಸ್ಥಾನದ ಸೇನೆಯ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಪಾಸ್ಪೋರ್ಟ್ ಯಾತ್ರಾರ್ಥಿಗಳಿಗೆ ಅಗತ್ಯ ಎಂದು ಹೇಳಿಕೆ ನೀಡಿದ್ದಾರೆ.
ಹೀಗಾಗಿ ಭಕ್ತಾದಿಗಳು ಪಾಕಿಸ್ಥಾನ ಸೃಷ್ಟಿ ಮಾಡುತ್ತಿರುವ ಗೊಂದಲದ ಬಲಿಪಶುಗಳಾಗದಿರುವಂತೆ ನೋಡಿಕೊಳ್ಳುವ ಸಲುವಾಗಿ ಭಾರತ ಪಾಸ್ಪೋರ್ಟ್ ಅನ್ನು ಕಡ್ಡಾಯಗೊಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.