ಮಂಗಳೂರು: ಪೇಪರ್ ಮತ್ತು ಸ್ಟೆನ್ಸಿಲ್ ಬಳಸಿ ಅತೀ ಉದ್ದದ ಪೇಪರ್ ಕಟ್ಟಿಂಗ್ ಆರ್ಟ್ ಅನ್ನು ರಚನೆ ಮಾಡಿದ ಮತ್ತು ಒಂದು ನಿಮಿಷದಲ್ಲಿ ಅತೀ ಹೆಚ್ಚು ಸಂಖ್ಯೆಯ ಮಿಮಿಕ್ರಿ ಸೌಂಡ್ ಮಾಡಿದ ಮಂಗಳೂರಿನ ಶಿಕ್ಷಕ ದಂಪತಿಗಳಾದ ಚೇತನ್ ಕೊಪ್ಪ ಮತ್ತು ಅಕ್ಷತಾ ಕುಡ್ಲಾ ‘ಎಕ್ಸ್ಕ್ಲೂಸಿವ್ ವರ್ಲ್ಡ್ ರೆಕಾರ್ಡ್ಸ್’ಗೆ ಪ್ರವೇಶಿಸಿದ್ದಾರೆ.
ಅಕ್ಷತಾ ಕುಡ್ಲಾ ಅವರು ಪ್ರಾಣಿಗಳು, ಪಕ್ಷಿಗಳು, ಮಕ್ಕಳು ಮತ್ತು ಸಂಗೀತ ವಾದ್ಯಗಳ ಶಬ್ದಗಳನ್ನು ಮಿಮಿಕ್ರಿ ಮಾಡುತ್ತಾರೆ. ಚೇತನ್ ಕೊಪ್ಪಾ ಅವರು ಬಿಳಿ ಮತ್ತು ಕಪ್ಪು ಕಾಗದದ ಹಾಳೆಗಳು ಮತ್ತು ಸ್ಟೆನ್ಸಿಲ್ ಬಳಸಿ ಮಹಾತ್ಮ ಗಾಂಧಿಯವರ ಅತಿದೊಡ್ಡ ಭಾವಚಿತ್ರವನ್ನು ರಚನೆ ಮಾಡಿದ್ದಾರೆ. ಭಾವಚಿತ್ರದ ಗಾತ್ರ 10X10 ಅಡಿಗಳಾಗಿವೆ.
“ನಾನು ಒಂದು ನಿಮಿಷದಲ್ಲಿ ವಿವಿಧ ಪ್ರಾಣಿಗಳು, ಪಕ್ಷಿಗಳು, ಸಂಗೀತ ಉಪಕರಣಗಳು ಮತ್ತು ಮಕ್ಕಳನ್ನು ಮಿಮಿಕ್ರಿ ಮಾಡುತ್ತೇನೆ. ಕನ್ನಡ ಶಿಕ್ಷಕಿಯಾಗಿರುವುದರಿಂದ ನಾನು ವಿದ್ಯಾರ್ಥಿಗಳನ್ನು ಬಹು-ಕಾರ್ಯ ಮತ್ತು ವಿಶೇಷ ಬೋಧನಾ ವಿಧಾನಕ್ಕೆ ಪ್ರೋತ್ಸಾಹಿಸುತ್ತೇನೆ, ಇದನ್ನು ನಾನು ಗೋಪಾತ್ಕರ್ ಸ್ವರೂಪ್ ಅಧ್ಯಾಯನ್ ಕೇಂದ್ರದಿಂದ ಕಲಿತಿದ್ದೇನೆ. ಇದು ವಿದ್ಯಾರ್ಥಿಗಳಿಗೆ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ ” ಎಂದು ಅಕ್ಷತಾ ಹೇಳುತ್ತಾರೆ.
ಮಹಾತ್ಮ ಗಾಂಧಿಯವರ ಅತಿದೊಡ್ಡ ಭಾವಚಿತ್ರಕ್ಕಾಗಿ ನಾನು ವಿಶೇಷ ದಾಖಲೆ ಮಾಡಿದ್ದೇನೆ ಎಂಬುದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಳಗೊಳಿಸಿದೆ ಎಂದು ಚೇತನ್ ಕೊಪ್ಪಾ ಹೇಳಿದ್ದಾರೆ.
ಈ ರೆಕಾರ್ಡ್ ನಮಗೆ ವಿಸಿಟಿಂಗ್ ಕಾರ್ಡ್ ಆಗಿದೆ. ಈ ದಾಖಲೆಯ ಸಹಾಯದಿಂದ ಸರ್ಕಾರಿ ಶಾಲೆಗಳಿಗೆ ಬೆಂಬಲ ಸಿಗುವಂತೆ ಮಾಡಲು ನಾವು ಬಯಸುತ್ತೇವೆ. ಇದು ನಮ್ಮ ಮುಖ್ಯ ಗುರಿಯೂ ಆಗಿದೆ. ಇದು ಭವಿಷ್ಯದಲ್ಲಿ ಮಕ್ಕಳ ಶಿಬಿರಗಳನ್ನು ಆಯೋಜಿಸುವಲ್ಲಿ ನಮಗೆ ಸಹಾಯ ಮಾಡುತ್ತದೆ ಎಂದಿದ್ದಾರೆ.
ಈ ದಂಪತಿಯ ಮಿಮಿಕ್ರಿ ಮತ್ತು ಅತಿದೊಡ್ಡ ಆರ್ಟ್ ಎರಡೂ ಪ್ರಯತ್ನಗಳು ಯಶಸ್ವಿಯಾಗಿದ್ದು, ‘ಎಕ್ಸ್ಕ್ಲೂಸಿವ್ ವರ್ಲ್ಡ್ ರೆಕಾರ್ಡ್ಸ್’ಗೆ ಸೇರ್ಪಡೆಗೊಂಡಿದೆ. ಕನ್ನಡ ಮಧ್ಯಮ ಶಾಲೆಗಳ ಜಾಗೃತಿ ಮತ್ತು ಉನ್ನತಿಗಾಗಿ ಈ ಪ್ರಯತ್ನಗಳನ್ನು ಇವರು ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.