ನವದೆಹಲಿ: ಪ್ರಧಾನ ಮಂತ್ರಿ ಮುದ್ರಾ ಯೋಜನೆ (MMY) ಮೂಲಕ ಪಡೆದ ಸಾಲಗಳು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗವನ್ನು ಸೃಷ್ಟಿ ಮಾಡುವಲ್ಲಿ ಯಶಸ್ವಿಯಾಗಿವೆ. ಯೋಜನೆಯ ಲಾಭವನ್ನು ಪಡೆದ ಸಂಸ್ಥೆಗಳಿಂದ ಉತ್ಪತ್ತಿಯಾಗುವ ಉದ್ಯೋಗಗಳಲ್ಲಿ ಶೇಕಡಾ 28 ರಷ್ಟು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಸರ್ಕಾರ ನಡೆಸಿದ ಅಧಿಕೃತ ಸಮೀಕ್ಷೆಯೊಂದು ತಿಳಿಸಿದೆ.
ಮುದ್ರಾ ಯೋಜನೆಗಳಿಂದ ಪಡೆದುಕೊಂಡ ಸಾಲದಿಂದಾಗಿ 11 ಮಿಲಿಯನ್ ಉದ್ಯೋಗ ಸೃಷ್ಟಿಯಾಗಿದೆ ಎಂದು ಹೇಳಿದೆ.
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಲೇಬರ್ ಬ್ಯೂರೋ ಸಿದ್ಧಪಡಿಸಿದ ಪಿಎಂ ಮುದ್ರಾ ಯೋಜನೆಯ ಕುರಿತಾದ ವರದಿಯಲ್ಲಿ ಮುದ್ರಾ ಸಾಲಗಳನ್ನು ಪಡೆಯುವ ಮೊದಲು ಸುಮಾರು 39.3 ಮಿಲಿಯನ್ ಜನರು ಸಂಸ್ಥೆಗಳಲ್ಲಿ ಉದ್ಯೋಗದಲ್ಲಿದ್ದಾರೆ ಎಂದು ತೋರಿಸಿದೆ, ಈ ಸಂಖ್ಯೆ ಯೋಜನೆಯ ಲಾಭವನ್ನು ಪಡೆದ ನಂತರ 50.4 ಮಿಲಿಯನ್ಗೆ ಏರಿಕೆಯಾಗಿದೆ.
ಸ್ವ-ಉದ್ಯೋಗವನ್ನು ಹೆಚ್ಚಿಸುವ ಉದ್ದೇಶದಿಂದ ಮುದ್ರಾ ಯೋಜನೆಯನ್ನು ಏಪ್ರಿಲ್ 2015 ರಲ್ಲಿ ಆರಂಭಿಸಲಾಯಿತು, ಇದರಡಿಯಲ್ಲಿ 10 ಲಕ್ಷ ರೂ.ವರೆಗೆ ಅಸುರಕ್ಷಿತ ಸಾಲ ನೀಡಲಾಗುತ್ತದೆ. ಇದರ ಪರಿಣಾಮವಾಗಿ, 2015 ಮತ್ತು 2018 ರ ನಡುವೆ ನೀಡಲಾದ ಮುದ್ರಾ ಸಾಲಗಳ ಮೂಲಕ ಒಟ್ಟು 11.2 ಮಿಲಿಯನ್ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಸಮೀಕ್ಷೆಯ ವರದಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.