ಖರಗ್ಪುರ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಖರಗ್ಪುರದ ಮೆಕ್ಯಾನಿಕಲ್ ವಿಭಾಗದ ಸಂಶೋಧಕರು ನೈಸರ್ಗಿಕ ವಾತಾವರಣದಲ್ಲಿ ಬಟ್ಟೆಗಳನ್ನು ಒಣಗಿಸುವುದರ ಮೂಲಕ ವಿದ್ಯುತ್ ಉತ್ಪಾದಿಸಿದ್ದಾರೆ. 3,000 ಚದರ ಮೀಟರ್ ವಿಸ್ತೀರ್ಣದ 50 ಒದ್ದೆಯಾದ ಬಟ್ಟೆಗಳನ್ನು ಬಳಸಿ ಹಳ್ಳಿಯೊಂದರ ‘ಧೋಬಿ ಘಾಟ್’ನಲ್ಲಿ ಸಂಶೋಧನೆ ನಡೆಸಲಾಯಿತು.
ಬಟ್ಟೆಗಳನ್ನು ವಾಣಿಜ್ಯ ಸೂಪರ್-ಕೆಪಾಸಿಟರ್ಗೆ ಸಂಪರ್ಕಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ, ಸಂಶೋಧಕರಿಗೆ ಸುಮಾರು 24 ಗಂಟೆಗಳಲ್ಲಿ ಸುಮಾರು 10 ವೋಲ್ಟ್ಗಳವರೆಗೆ ವಿದ್ಯುತ್ ಅನ್ನು ಉತ್ಪಾದನೆ ಮಾಡಲು ಸಾಧ್ಯವಾಯಿತು. ಈ ವಿದ್ಯುತ್ 1 ಗಂಟೆಗಿಂತ ಹೆಚ್ಚು ಕಾಲ ಬಿಳಿ ಎಲ್ಇಡಿಯನ್ನು ಬೆಳಗುವಂತೆ ಮಾಡಲು ಸಾಕಾಗುತ್ತದೆ.
“ಈ ಪ್ರಕ್ರಿಯೆ ನಿಜಕ್ಕೂ ಸಂಭವನೀಯ ವಿದ್ಯಮಾನವಾಗಿದೆ ಎಂದು ಕಂಡುಹಿಡಿಯಲು ನಾವು ಬಹಳ ಮಹತ್ವದ ಸ್ಥಿರವಾದ ಸಂಶೋಧನೆ ನಡೆಸಿದ್ದೇವೆ ಮತ್ತು ತೆರೆದ ಜಾಗದಲ್ಲಿ ಬಟ್ಟೆಗಳ ಒಣಗಿಸುವಿಕೆಯಿಂದ ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದೇವೆ. ಈ ಪ್ರಕ್ರಿಯೆಯಲ್ಲಿ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುವುದಿಲ್ಲ, ಆದರೆ ಗ್ರಾಮೀಣ ಸಮುದಾಯದ ಜೀವನವನ್ನು ಬದಲಾಯಿಸಲು ನಿಟ್ಟಿನಲ್ಲಿ ಇದು ಸಕಾರಾತ್ಮಕ ಹೆಜ್ಜೆಯಾಗಿದೆ” ಎಂದು ಪ್ರೊಫೆಸರ್ ಸುಮನ್ ಚಕ್ರವರ್ತಿ ಹೇಳುತ್ತಾರೆ.
ವಿದ್ಯುತ್ ಉತ್ಪಾದನೆಗೆ ಕಡಿಮೆ ವೆಚ್ಚದ ತಂತ್ರಕ್ಕೆ ಭಾರಿ ಬೇಡಿಕೆಯಿದೆ. ಈ ನಿಟ್ಟಿನಲ್ಲಿ ನಮ್ಮ ಸಂಶೋಧಕರು ಮಹತ್ವ ಹೆಜ್ಜೆಯನ್ನು ಮುಂದಿಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.