ನವದೆಹಲಿ: ಮುಂದಿನ ವರ್ಷದ ಮಧ್ಯಭಾಗದ ವೇಳೆ, ಪ್ರಧಾನಿ ಮೋದಿ ಸರ್ಕಾರವು ಭಾರತದಾದ್ಯಂತ 11.5 ಕೋಟಿ ರೈತರು ಮತ್ತು ಅವರ ಕುಟುಂಬಗಳೊಂದಿಗೆ ನೇರ ಸಂಪರ್ಕವನ್ನು ಹೊಂದಲಿದೆ, ಈ ಮೂಲಕ ಅಭೂತಪೂರ್ವ ರೀತಿಯಲ್ಲಿ ಸಂವಹನ ಕಾರ್ಯ ಏರ್ಪಡಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ರೈತರ ಮೇಲಿನ ಬೃಹತ್ ಡೇಟಾ ಬ್ಯಾಂಕ್ 2020 ರ ಜೂನ್ ವೇಳೆಗೆ ಬಿಡುಗಡೆಗೆ ಸಿದ್ಧವಾಗಲಿದೆ.
ಪ್ರಧಾನಮಂತ್ರಿ ಸಚಿವಾಲಯ ನಿಗದಿಪಡಿಸಿರುವ ಮೆಗಾ ಡೇಟಾ ಯೋಜನೆಯ ಗಡುವನ್ನು ತಲುಪಲು ಕೇಂದ್ರ ಕೃಷಿ ಕಾರ್ಯದರ್ಶಿ ಸಂಜಯ್ ಅಗರ್ವಾಲ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ಅದರ ರಾಷ್ಟ್ರೀಯ ಇ-ಆಡಳಿತ ವಿಭಾಗ (ಎನ್ಇಜಿಡಿ)ದೊಂದಿಗೆ ಒಟ್ಟಾಗಿ ಕಾರ್ಯನಿರ್ವಹಿಸುತ್ತಿದೆ.
ಈ ಡೇಟಾಬೇಸ್ ಮತ್ತು ತಂತ್ರಜ್ಞಾನದ ಬಳಕೆಯಿಂದ ದೇಶದ ಸಣ್ಣ ಮತ್ತು ಅಲ್ಪ ರೈತರ ಜೀವನದಲ್ಲಿ ಅಮೂಲಾಗ್ರ ಬದಲಾವಣೆಯಾಗಲಿದೆ. ಮಣ್ಣಿನ ಪರೀಕ್ಷೆಯಿಂದ ಹಿಡಿದು ಪ್ರವಾಹ ಎಚ್ಚರಿಕೆಗಳವರೆಗೆ ಮತ್ತು ಉಪಗ್ರಹ ಚಿತ್ರಣದಿಂದ ಭೂ ಕಂದಾಯ ದಾಖಲೆಗಳವರೆಗಿನ ಎಲ್ಲಾ ಹಣಕಾಸು ಮತ್ತು ಕೃಷಿ ಸಂಬಂಧಿತ ಮಾಹಿತಿಯನ್ನು ಪ್ರವೇಶಿಸಲು ಈ ಮಾಹಿತಿಯು ರೈತರಿಗೆ ಮತ್ತು ರಾಜ್ಯಕ್ಕೆ ಅವಕಾಶ ನೀಡುತ್ತದೆ.
“ಮುಂದಿನ ಆರು ತಿಂಗಳ ವೇಳೆಗೆ ಸಿದ್ಧವಾಗುವ ಡೇಟಾಬೇಸ್ ರೈತರಿಗೆ ಎಲ್ಲಾ ರೀತಿಯ ಮಾರುಕಟ್ಟೆ ಮಾಹಿತಿಯನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಇದು ಖಂಡಿತವಾಗಿಯೂ ಗ್ರಾಮೀಣ ವಲಯದಲ್ಲಿನ ಚಿತ್ರಣವನ್ನೇ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಲಿದೆ” ಎಂದು ಕೇಂದ್ರ ಕೃಷಿಯ ಹಿರಿಯ ಅಧಿಕಾರಿ ಜೆ. ಸತ್ಯನಾರಾಯಣ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.