ನವದೆಹಲಿ: ಪಟಾಕಿ ಮುಕ್ತ ದೀಪಾವಳಿಯನ್ನು ಆಚರಿಸುವ ಸಲುವಾಗಿ ದೆಹಲಿಯ ಕನ್ನೌಟ್ ಪ್ರದೇಶದಲ್ಲಿ ನಾಲ್ಕು ದಿನಗಳ ಲೇಸರ್ ಲೈಟ್ ಶೋ ಅನ್ನು ಆಯೋಜನೆಗೊಳಿಸಲಾಗಿದೆ. ಶನಿವಾರದಿಂದ ಇದು ಆರಂಭಗೊಳ್ಳಲಿದೆ. ಶಬ್ದಮಾಲಿನ್ಯ, ವಾಯುಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಶೋ ಅನ್ನು ಆಯೋಜಿಸಲಾಗಿದೆ.
“ಸಮುದಾಯ ಮತ್ತು ಮಾಲಿನ್ಯ ರಹಿತ ದೀಪಾವಳಿಯನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಇಟ್ಟುಕೊಂಡು ಲೇಸರ್ ಲೈಟ್ ಶೋ ಅನ್ನು ಆಯೋಜನೆಗೊಳಿಸಲಾಗುತ್ತಿದೆ. ಅಕ್ಟೋಬರ್ 26 ರಿಂದ 29 ರವರೆಗೆ ಸಂಜೆ 6 ರಿಂದ ರಾತ್ರಿ 10 ರವರೆಗೆ ವಿವಿಧ ಲೇಸರ್ ಪ್ರದರ್ಶನಗಳು ಜರುಗಲಿವೆ. ಈ ಕಾರ್ಯಕ್ರಮಕ್ಕೆ ಹಾಜರಾಗಲು ಮತ್ತು ಪಟಾಕಿ ಇಲ್ಲದೆ ದೀಪಾವಳಿಯನ್ನು ಆಚರಿಸಲು ನಾನು ದೆಹಲಿ ಜನರನ್ನು ಆಹ್ವಾನಿಸುತ್ತೇವೆ ”ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಸಿಪಿಯ ಸೆಂಟ್ರಲ್ ಪಾರ್ಕ್ನಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಯಾವುದೇ ಪ್ರವೇಶ ಪಾಸ್ಗಳಿಲ್ಲ ಎಂದು ದೆಹಲಿ ಸಿಎಂ ಸ್ಪಷ್ಟಪಡಿಸಿದ್ದಾರೆ. “ಇಡೀ ಸಿಪಿಯನ್ನು ಲೇಸರ್ ದೀಪಗಳಿಂದ ಅಲಂಕರಿಸಲಾಗುವುದು. ಪ್ರದರ್ಶನಗಳು ಪ್ರತಿ ಗಂಟೆಗಳಿಗೊಂದು ನಡೆಯುತ್ತವೆ. ವಿವಿಧ ಕಲಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ. ಈ ಆವರಣದಲ್ಲಿ ಆಹಾರ ಅಂಗಡಿಗಳು ಮತ್ತು ವಿವಿಧ ಮಾರುಕಟ್ಟೆಗಳು ಇರಲಿವೆ ”ಎಂದು ಅವರು ಹೇಳಿದ್ದಾರೆ.
ಪ್ರದರ್ಶನ ಯಶಸ್ವಿಯಾದರೆ, ಸರ್ಕಾರವು ಈ ಕಾರ್ಯಕ್ರಮವನ್ನು ವಿವಿಧ ಸ್ಥಳಗಳಲ್ಲಿ ಮತ್ತು ಮುಂದಿನ ವರ್ಷ ದೊಡ್ಡ ಪ್ರಮಾಣದಲ್ಲಿ ಆಯೋಜಿಸುತ್ತದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.