ನವದೆಹಲಿ: ವಿಶ್ವ ಬ್ಯಾಂಕಿನ ‘ಸುಲಲಿತ ವ್ಯಾಪಾರ ಶ್ರೇಯಾಂಕ’ದಲ್ಲಿ ಭಾರತ 14 ಸ್ಥಾನಗಳ ಜಿಗಿತವನ್ನು ಕಂಡು 63 ನೇ ಸ್ಥಾನಕ್ಕೇರಿದೆ. ಇದಕ್ಕಾಗಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಗುರುವಾರ ಪ್ರಧಾನಿ ನರೇಂದ್ರ ಮೋದಿಯವರ ಸುಧಾರಣಾ ಕ್ರಮಗಳನ್ನು ಶ್ಲಾಘಿಸಿದ್ದು, ದೇಶದ ವ್ಯಾಪಾರ ವಾತಾವರಣವನ್ನು ಸುಧಾರಣೆಗೊಳಿಸುತ್ತಿರುವ ಮೋದಿ ಅಭಿನಂದಾರ್ಹರು ಎಂದು ತಿಳಿಸಿದ್ದಾರೆ.
“ವಿಶ್ವಬ್ಯಾಂಕ್ ಬಿಡುಗಡೆ ಮಾಡಿರುವ ಸುಲಲಿತ ವ್ಯಾಪಾರ ಶ್ರೇಯಾಂಕದಲ್ಲಿ ಭಾರತ 77 ನೇ ಸ್ಥಾನದಿಂದ 63 ನೇ ಸ್ಥಾನಕ್ಕೆ ಏರಿದೆ. ರಾಷ್ಟ್ರದ ಸಮೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಭಾರತದ ವ್ಯಾಪಾರ ವಾತಾವರಣದಲ್ಲಿ ಸುಧಾರಣೆಯನ್ನು ತಂದಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು” ಎಂದು ಅವರು ಟ್ವೀಟ್ ಮಾಡಿದ್ದಾರೆ.
India has jumped from 77th to 63rd rank in the Ease of Doing Business Rankings released just now by the World Bank.
Congratulations to PM @NarendraModi ji for the path breaking improvements in India’s business environment for nation’s prosperity and job creation. pic.twitter.com/67TwARmssS
— Piyush Goyal (@PiyushGoyal) October 24, 2019
ವ್ಯಾಪಾರ ಮಾಡುವ ನಿಟ್ಟಿನಲ್ಲಿ ಭಾರತವು ಗಮನಾರ್ಹವಾಗಿ ಸುಧಾರಿಸಿದೆ ಎಂದು 2020ರ ತನ್ನ ಸಮೀಕ್ಷೆಯಲ್ಲಿ ವಿಶ್ವ ಬ್ಯಾಂಕ್ ವರದಿ ಮಾಡಿದೆ. 190 ದೇಶಗಳ ಪೈಕಿ ಭಾರತವು 63ನೇ ಸ್ಥಾನದಲ್ಲಿದೆ.
ವಿಶ್ವ ಬ್ಯಾಂಕ್ ಗುರುವಾರ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಸತತ ಮೂರನೇ ಬಾರಿಗೆ ಭಾರತ ಅಗ್ರ 10 ಪ್ರದರ್ಶಕರಲ್ಲಿ ಕಾಣಿಸಿಕೊಂಡಿದೆ. ಗಮನಾರ್ಹ ಸುಧಾರಣಾ ಪ್ರಯತ್ನಕ್ಕಾಗಿ ವಿಶ್ವ ಬ್ಯಾಂಕ್ ಭಾರತವನ್ನು ಶ್ಲಾಘಿಸಿದೆ.
“ಉನ್ನತ 10 ಪ್ರದರ್ಶಕರ ಆರ್ಥಿಕತೆಗಳಾಗಿರುವ ಭಾರತ ಮತ್ತು ಚೀನಾದ ನಾಯಕತ್ವವು ಸುಲಲಿತ ವ್ಯಾಪಾರ ಸೂಚ್ಯಂಕಗಳನ್ನು ಪ್ರಮುಖ ಆದ್ಯತೆಯನ್ನಾಗಿ ಸ್ವೀಕರಿಸಿ ಮಹತ್ವದ ಸುಧಾರಣೆಗಳನ್ನು ತಂದಿದೆ” ಎಂದು ವಿಶ್ವಬ್ಯಾಂಕ್ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.