ಲಕ್ನೋ : ಉತ್ತರಪ್ರದೇಶ ರಾಜಧಾನಿ ಲಕ್ನೋದ ಗೋಮತಿ ನಗರದ ರಾಜೀವ್ ಗಾಂಧಿ ವಾರ್ಡ್ನಲ್ಲಿ ನಗರವರನ್ನು ಸುಂದರಗೊಳಿಸುವ ಭಾಗವಾಗಿ ಮರಗಳಿಗೆ ಪೇಟಿಂಗ್ ಮಾಡಿದೆ. ವಿವಿಧ ಬಣ್ಣಗಳನ್ನು, ಚಿತ್ರಗಳನ್ನು ಪಡೆದುಕೊಂಡು ಮರಗಳು ಕಂಗೊಳಿಸುತ್ತಿವೆ.
ಕೌನ್ಸಿಲರ್ ಅರುಣ್ ತಿವಾರಿ ಅವರ ಯೋಜನೆಯಂತೆ ಮರಗಳಿಗೆ ಬಣ್ಣ ಬಳಿಯಲಾಗಿದೆ. 2019ರ ಸ್ವಚ್ಛತಾ ಸಮೀಕ್ಷೆಯಲ್ಲಿ ಈ ವಾರ್ಡ್ಗೆ ಮೂರನೇ ರ್ಯಾಂಕ್ ಬಂದಿತ್ತು. ಹೀಗಾಗಿ ಮೊದಲ ರ್ಯಾಂಕ್ ಪಡೆಯುವ ಮಹದುದ್ದೇಶದೊಂದಿಗೆ ವಾರ್ಡ್ ಅನ್ನು ಸುಂದರೀಕರಣಗೊಳಿಸಲಾಗುತ್ತಿದೆ.
“ರಾಜೀವ್ ಗಾಂಧಿ 2 ನೇ ವಾರ್ಡ್ ಸ್ವಚ್ಛತಾ ಸಮೀಕ್ಷೆ 2019 ರಲ್ಲಿ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿತ್ತು, ಲಕ್ನೋದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಮೊದಲ ಸ್ಥಾನವನ್ನು ಸಾಧಿಸಲು ನಾವು ಇನ್ನೂ ಹೆಚ್ಚಿನದನ್ನು ಮಾಡಲು ನಿರ್ಧರಿಸಿದ್ದೇವೆ. ನಾವು ಸ್ಥಳೀಯ ಜನರೊಂದಿಗೆ ಮಾತನಾಡಿ ಮರಗಳಲ್ಲಿ ಚಿತ್ತಾರ ಬಿಡಿಸಲು ನಿರ್ಧರಿಸಿದ್ದೇವೆ ಮತ್ತು ಬೀದಿಬದಿಗಳಲ್ಲೂ ಕಲೆಯನ್ನು ಮೂಡಿಸಿದೆ. ಈ ಕಲೆಗಳು ಲಕ್ನೋ ಸಂಸ್ಕೃತಿಯನ್ನು ಪ್ರದರ್ಶಿಸುತ್ತಿವೆ. ಬೀದಿ ಕಲೆಯ ಬಗ್ಗೆ ಜನರ ಸಲಹೆಗಳಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ “ಎಂದು ಅರುಣ್ ತಿವಾರಿ ಹೇಳಿದ್ದಾರೆ.
ಕಾರ್ಟೂನ್ ಗಳನ್ನು, ಯೋಗ ಭಂಗಿಗಳನ್ನು ಮತ್ತು ಮರ ಉಳಿಸಿ ಮುಂತಾದ ಸಂದೇಶಗಳನ್ನೂ ಕಲಾವಿದರು ತಮ್ಮ ಕಲೆಗಳ ಮೂಲಕ ಸಾರಿದ್ದಾರೆ.
ಮರಗಳಿಗೆ ಬಳಸಲಾಗಿರುವ ಬಣ್ಣಗಳು ಯಾವುದೇ ರೀತಿಯಲ್ಲೂ ಮರಕ್ಕೆ ಹಾನಿಯುಂಟು ಮಾಡುವುದಿಲ್ಲ, ಬದಲಾಗಿ ಅವುಗಳು ಉಳಿಯುವಿಕೆಯ ಸಂದೇಶವನ್ನು ಸಾರುತ್ತವೆ ಎಂದಿದ್ದಾರೆ.
ಲಕ್ನೋದ ಸಂಸ್ಕೃತಿಯನ್ನು ಸಾರುವ ಚಿತ್ರಗಳನ್ನು ಕೆಲವು ಗೋಡೆಗಳ ಮೇಲೆ ಮೂಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.