ನವದೆಹಲಿ: ಪೊಲೀಸ್ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ರಾಷ್ಟ್ರೀಯ ಪೊಲೀಸ್ ಸ್ಮಾರಕಕ್ಕೆ ತೆರಳಿ ಹುತಾತ್ಮ ಪೊಲೀಸ್ ಸಿಬ್ಬಂದಿಗೆ ಗೌರವ ನಮನಗಳನ್ನು ಸಲ್ಲಿಸಿದರು. ಅಲ್ಲದೇ, ತಮ್ಮ ಕರ್ತವ್ಯವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸುತ್ತಿರುವ ಪೊಲೀಸರ ಕಾರ್ಯವನ್ನು ಅವರು ಶ್ಲಾಘಿಸಿದರು.
ಅಕ್ಟೋಬರ್ 21ನ್ನು ಪ್ರತಿ ವರ್ಷ ಪೊಲೀಸ್ ಸಂಸ್ಮರಣಾ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. 1959ರ ಅ. 21 ರಂದು ಚೀನಾದ ಸೈನ್ಯವು ಲಡಾಖಿನ ಹಾಟ್ ಸ್ಪ್ರಿಂಗ್ಸ್ನಲ್ಲಿ ನಡೆಸಿದ ಆಕ್ರಮಣದ ವೇಳೆ ಸರ್ವೋಚ್ಚ ತ್ಯಾಗ ಮಾಡಿದ ಪೊಲೀಸರ ನೆನಪಿಗಾಗಿ ಪ್ರತಿವರ್ಷ ಪೊಲೀಸ್ ಸಂಸ್ಮರಣಾ ದಿನವನ್ನು ಆಚರಿಸಲಾಗುತ್ತದೆ.
“ನಮ್ಮ ಪೊಲೀಸ್ ಪಡೆಗಳಿಗೆ, ಅವರ ಕುಟುಂಬಗಳಿಗೆ ನಮ್ಮ ನಮನಗಳು ಮತ್ತು ಪೊಲೀಸ್ ಸಂಸ್ಮರಣಾ ದಿನದಂದು ಕರ್ತವ್ಯದ ವೇಳೆ ಹುತಾತ್ಮರಾದ ಧೈರ್ಯಶಾಲಿ ಪೊಲೀಸ್ ಸಿಬ್ಬಂದಿಯನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತೇವೆ. ನಮ್ಮ ಪೊಲೀಸ್ ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸುತ್ತಾರೆ. ಅವರ ಧೈರ್ಯ ಯಾವಾಗಲೂ ನಮ್ಮನ್ನು ಪ್ರೇರೇಪಿಸುತ್ತದೆ” ಎಂದು ಮೋದಿ ಟ್ವಿಟ್ ಮಾಡಿದ್ದಾರೆ.
Last year, the National Police Memorial was dedicated to the nation. This Memorial is a place of inspiration and gratitude. It reminds us of the valour of our police forces.
Do visit the National Police Memorial whenever possible. pic.twitter.com/DMYFLvi0pB
— Narendra Modi (@narendramodi) October 21, 2019
ರಾಷ್ಟ್ರೀಯ ಪೊಲೀಸ್ ಸ್ಮಾರಕವು ಸ್ಫೂರ್ತಿ ಮತ್ತು ಕೃತಜ್ಞತೆಯ ಸ್ಥಳವಾಗಿದೆ ಎಂದು ಪ್ರಧಾನಿ ಹೇಳಿದರು. ಅಲ್ಲದೇ, ಜನರು ಈ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಅವರು ವಿನಂತಿಸಿದ್ದಾರೆ.
“ಕಳೆದ ವರ್ಷ, ರಾಷ್ಟ್ರೀಯ ಪೊಲೀಸ್ ಸ್ಮಾರಕವನ್ನು ರಾಷ್ಟ್ರಕ್ಕೆ ಸಮರ್ಪಿಸಲಾಯಿತು. ಈ ಸ್ಮಾರಕವು ಸ್ಫೂರ್ತಿ ಮತ್ತು ಕೃತಜ್ಞತೆಯ ಸ್ಥಳವಾಗಿದೆ. ಇದು ನಮ್ಮ ಪೊಲೀಸ್ ಪಡೆಗಳ ಶೌರ್ಯವನ್ನು ನೆನಪಿಸುತ್ತದೆ. ಸಾಧ್ಯವಾದಾಗಲೆಲ್ಲಾ ರಾಷ್ಟ್ರೀಯ ಪೊಲೀಸ್ ಸ್ಮಾರಕಕ್ಕೆ ಭೇಟಿ ನೀಡಿ” ಎಂದು ಮೋದಿ ಹೇಳಿದ್ದಾರೆ.
ಪೊಲೀಸ್ ಸ್ಮಾರಕವು 6.12 ಎಕರೆ ವಿಸ್ತೀರ್ಣದಲ್ಲಿದೆ ಮತ್ತು 30 ಅಡಿ ಎತ್ತರದ ಭಾರವಾದ ಕಪ್ಪು ಗ್ರಾನೈಟ್ನ ಕೇಂದ್ರ ಶಿಲ್ಪವನ್ನು, ವಸ್ತುಸಂಗ್ರಹಾಲಯವನ್ನು ಹೊಂದಿದೆ. ಸ್ವಾತಂತ್ರ್ಯದ ನಂತರ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದ ವೇಳೆ ಮೃತಪಟ್ಟ ಪೊಲೀಸ್ ಸಿಬ್ಬಂದಿಗಳ ಹೆಸರನ್ನು ಹೊಂದಿರುವ ‘ವಾಲ್ ಆಫ್ ವಾಲೌರ್’ ಅನ್ನು ಇದು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.