ನವದೆಹಲಿ: ಇಂದು ಭಾರತದ ಹೆಮ್ಮೆಯ ವಾಯುಸೇನೆ ತನ್ನ 87ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಾಯು ವೀರರಿಗೆ ಮತ್ತು ಅವರ ಕುಟುಂಬಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಅಸಾಧಾರಣ ಸಮರ್ಪಣೆ ಮತ್ತು ಉತ್ಕೃಷ್ಟತೆಯೊಂದಿಗೆ ಭಾರತೀಯ ವಾಯುಸೇನೆ ದೇಶಕ್ಕೆ ಸೇವೆ ಸಲ್ಲಿಸುತ್ತಿದೆ ಎಂದಿದ್ದಾರೆ.
“ಇಂದು, ವಾಯುಸೇನಾ ದಿನದಂದು, ಹೆಮ್ಮೆಯ ದೇಶ ತನ್ನ ವಾಯು ವೀರರಿಗೆ ಮತ್ತು ಅವರ ಕುಟುಂಬಗಳಿಗೆ ಕೃತಜ್ಞತೆಯನ್ನು ಅಭಿವ್ಯಕ್ತಪಡಿಸುತ್ತಿದೆ. ಭಾರತೀಯ ವಾಯುಸೇನೆಯು ಅಸಾಧಾರಣ ಸಮರ್ಪಣೆ ಮತ್ತು ಉತ್ಕೃಷ್ಟತೆಯೊಂದಿಗೆ ದೇಶಕ್ಕೆ ಸೇವೆ ಸಲ್ಲಿಸುವುದನ್ನು ಮುಂದುವರೆಸುತ್ತಿದೆ” ಎಂದು ಮೋದಿ ಟ್ವಿಟ್ ಮಾಡಿದ್ದಾರೆ.
Today, on Air Force Day, a proud nation expresses gratitude to our air warriors and their families. The Indian Air Force continues to serve India with utmost dedication and excellence. pic.twitter.com/iRJAIqft11
— Narendra Modi (@narendramodi) October 8, 2019
ಅಲ್ಲದೇ ಅವರು ಭಾರತೀಯ ವಾಯುಪಡೆಯ ವಿವಿಧ ಸಾಧನೆಗಳನ್ನು ಪ್ರದರ್ಶಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಟ್ವಿಟ್ಟರ್ ಮೂಲಕ ವಾಯುಸೇನಾ ದಿನದ ಶುಭಾಶಯಗಳನ್ನು ತಿಳಿಸಿದ್ದಾರೆ, “87ನೇ ವಾಯುಸೇನಾ ದಿನದಂದು ಎಲ್ಲಾ ಭಾರತೀಯ ವಾಯುಪಡೆಯ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಶುಭಾಶಯಗಳು. ನಮ್ಮ ವಾಯುಸೇನೆಯು ಆದರ್ಶಪ್ರಾಯವಾದ ಧೈರ್ಯ, ದೃಢತೆ, ದೃಢ ನಿಶ್ಚಯ ಮತ್ತು ನಿಸ್ವಾರ್ಥ ಸೇವೆಗೆ ಒಂದು ಪ್ರಜ್ವಲಿಸುವ ಉದಾಹರಣೆಯಾಗಿದೆ. ನೀಲಿ ಬಣ್ಣದಲ್ಲಿನ ನಮ್ಮ ಪುರುಷ ಮತ್ತು ಮಹಿಳೆಯರು ಶೌರ್ಯ ಮತ್ತು ವೈಭವದಿಂದ ಆಕಾಶವನ್ನು ಸ್ಪರ್ಶಿಸುವ ಸಾಮರ್ಥ್ಯವುಳ್ಳವರು” ಎಂದಿದ್ದಾರೆ.
Greetings to all @IAF_MCC personnel and their families on the 87th IAF Day. The IAF is the shining example of exemplary courage, fortitude, determination and impeccable service to our nation.
These men and women in Blue have the ability to touch the sky with grit and glory.
— Rajnath Singh (@rajnathsingh) October 8, 2019
ವಾಯುಸೇನೆ ಕೂಡ ತನ್ನ ವೀರರಿಗೆ ಶುಭಾಶಯಗಳನ್ನು ಕೋರಿದ್ದು, “ವಾಯು ವೀರರಿಗೆ ಮತ್ತು ಅವರ ಕುಟುಂಬಗಳಿಗೆ ವಾಯುಸೇನಾ ದಿನದ ಶುಭಾಶಯಗಳು. ವಾಯು ವೀರರ ಧೈರ್ಯ, ಶೌರ್ಯ, ಬದ್ಧತೆ, ಸಮರ್ಪಣೆ ಮತ್ತು ಉತ್ಸಾಹ ಎಲ್ಲರಿಗೂ ಸ್ಫೂರ್ತಿ” ಎಂದು ಟ್ವೀಟ್ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.