ನವದೆಹಲಿ: ನವರಾತ್ರಿಯ 8ನೇ ದಿನವಾದ ಇಂದು ದೇಶದಾದ್ಯಂತ ದುರ್ಗಾಷ್ಟಮಿಯನ್ನು ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.
ರಾಷ್ಟ್ರಪತಿಗಳು ಹಿಂದಿ, ಇಂಗ್ಲಿಷ್ ಮತ್ತು ಬಂಗಾಳಿ ಭಾಷೆಯಲ್ಲಿ ಟ್ವಿಟರ್ ಮೂಲಕ ದುರ್ಗಾಷ್ಟಮಿ ಶುಭಾಶಯಗಳನ್ನು ಕೋರಿದ್ದಾರೆ.
“ದುರ್ಗಾಷ್ಟಮಿಯ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯಗಳು ಮತ್ತು ಶುಭ ಹಾರೈಕೆಗಳು. ದುಷ್ಟತನದ ವಿರುದ್ಧ ಒಳ್ಳೆಯದರ ವಿಜಯದ ಸಂಕೇತವಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ದುರ್ಗಾ ದೇವತೆ ಸರ್ವರಿಗೂ ಆಶೀರ್ವಾದ ಮಾಡಲಿ, ಎಲ್ಲರ ಬದುಕು ಹಸನಾಗಲಿ” ಎಂದಿದ್ದಾರೆ.
Greetings and good wishes to fellow citizens in India and abroad on the auspicious occasion of Durga Puja. This is a celebration of the victory of good over evil. May Goddess Durga shower her blessings on us and enrich our lives with joy and prosperity #PresidentKovind
— President of India (@rashtrapatibhvn) October 6, 2019
ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ, ಸರ್ವರಿಗೂ ನವರಾತ್ರಿಯ ಮಹಾಷ್ಟಮಿ ಪೂಜೆಯ ಶುಭಕಾಮನೆಗಳು. ದುರ್ಗಾಷ್ಟಮಿಯ ಅಭಿಷ್ಟ ದೇವತೆಯಾದ ಗೌರಿಯು ಸರ್ವರಿಗೂ ಸುಖ ಸೌಭಾಗ್ಯ ಮತ್ತು ಸಮೃದ್ಧಿಯನ್ನು ಕರುಣಿಸಲಿ ಎಂದಿದ್ದಾರೆ.
नवरात्रि की महाष्टमी पूजा की हार्दिक शुभकामनाएं। दुर्गाष्टमी की अभीष्ट देवी महागौरी हम सबके जीवन में सुख, सौभाग्य और समृद्धि लेकर आएं। pic.twitter.com/PpcOXYIXXN
— Narendra Modi (@narendramodi) October 6, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.