ನವದೆಹಲಿ: ಭಾರತೀಯ ಸಂಶೋಧನಾ ಸಂಸ್ಥೆ ಇಸ್ರೋ ಮುಖ್ಯಸ್ಥ ಕೆ.ಸಿವನ್ ಅವರು ಖಾಸಗಿ ವಿಮಾನದಲ್ಲಿ ಎಕಾನಮಿ ಕ್ಲಾಸ್ನಲ್ಲಿ ಪ್ರಯಾಣಿಸಿದ್ದಾರೆ. ಈ ವೇಳೆ ವಿಮಾನದಲ್ಲಿದ್ದ ಅವರ ಸಹ ಪ್ರಯಾಣಿಕರು ಅವರಿಗೆ ಹೃದಯಸ್ಪರ್ಶಿ ಸ್ವಾಗತವನ್ನು ನೀಡಿದ್ದಾರೆ. ಸಿವನ್ ಅವರೊಂದಿಗೆ ಸಂವಾದಗಳನ್ನು ನಡೆಸಿದ್ದಾರೆ.
ಈ ಬಗೆಗಿನ ವೀಡಿಯೋ ವೈರಲ್ ಆಗಿದ್ದು, ಇದರಲ್ಲಿ ಅವರು ಕ್ಯಾಬಿನ್ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಅವರೊಂದಿಗೆ ಎಲ್ಲರೂ ಸೆಲ್ಫಿಯನ್ನೂ ತೆಗೆದುಕೊಂಡಿದ್ದಾರೆ. ತಮ್ಮ ಸೀಟಿನತ್ತ ಅವರು ಬರುತ್ತಿದ್ದಂತೆ ಸಹ ಪ್ರಯಾಣಿಕರು ಜೋರಾಗಿ ಚಪ್ಪಾಳೆಯನ್ನು ತಟ್ಟಿ ಅವರನ್ನು ಸ್ವಾಗತಿಸಿದ್ದಾರೆ. ನಗು ಮುಖದೊಂದಿಗೆ ಸಿವನ್ ಅವರಿಗೆ ಧನ್ಯವಾದ ಸಮರ್ಪಿಸಿದ್ದಾರೆ.
“ಇಸ್ರೋ ಮುಖ್ಯಸ್ಥ ಇಂಡಿಗೋ ವಿಮಾನದಲ್ಲಿ ಎಕಾನಮಿ ಕ್ಲಾಸಿನಲ್ಲಿ ಪ್ರಯಾಣಿಸಿದ್ದಾರೆ. ಅವರ ಸರಳತೆಗೆ ದೊಡ್ಡ ಸೆಲ್ಯೂಟ್. ನಿಮ್ಮ ಬಗ್ಗೆ ಹೆಮ್ಮೆ ಇದೆ ಸಿವನ್” ಎಂಬ ಒಕ್ಕಣೆಯೊಂದಿಗೆ ವೀಡಿಯೋವನ್ನು ಟ್ವಿಟ್ ಮಾಡಲಾಗಿದೆ.
“ನಮ್ರತೆ, ಸರಳತೆ, ಬುದ್ಧಿಮತ್ತೆಯ ಶ್ರೇಷ್ಠ ಸಂಗಮ! ನಿಮ್ಮ ಸಮರ್ಥ ನಾಯಕತ್ವ ಮತ್ತು ಇಸ್ರೋದ ಅತ್ಯುತ್ತಮ ಕಾರ್ಯಗಳಿಗೆ ನಿಮಮ್ ಕೊಡುಗೆಗಳ ಬಗ್ಗೆ ನಮಗೆ ಹೆಮ್ಮೆ ಇದೆ” ಎಂದು ಒಬ್ಬರು ಹೇಳಿದರೆ, “ನಿಮ್ಮ ಮೊಗದಲ್ಲಿನ ನಗು ಪರಿಶುದ್ಧ ಬಂಗಾರ” ಎಂದು ಮತ್ತೊಬ್ಬರು ಹೇಳಿದ್ದಾರೆ.
ಕೆ.ಸಿವನ್ ಅವರು ತಮ್ಮ ಸರಳತೆ ಮತ್ತು ಕೊಡುಗೆಗಳಿಗಾಗಿ ದೇಶದ ಮನ್ನಣೆಗೆ ಪಾತ್ರರಾಗಿದ್ದಾರೆ.
This video doing the rounds of @isro chief K. Sivan being requested for selfies by @IndiGo6E flt attendants made me very happy
When those that quietly go about doing their work, become heroes…
Wonderful 👏🏽👏🏽🇮🇳👏🏽👏🏽 pic.twitter.com/JS71WanbHC
— atul kasbekar (@atulkasbekar) October 5, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.