ನವದೆಹಲಿ: ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಭಾರತದ 12 ಪ್ರವಾಸಿ ತಾಣಗಳಿಗಾಗಿ ‘ಆಡಿಯೋ ಒಡಿಗೊಸ್’ ಎಂಬ ಬಹುಭಾಷಾ ಆಡಿಯೊ ಗೈಡ್ ಅಪ್ಲಿಕೇಶನ್ ಸೇವೆಯನ್ನು ಪ್ರಾರಂಭಿಸಿದೆ.
ಇಂಗ್ಲಿಷ್, ಜಪಾನೀಸ್, ಕೊರಿಯನ್ ಮತ್ತು ಸ್ಥಳೀಯ ಭಾಷೆಗಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ದೃಶ್ಯಗಳು ಮತ್ತು ವಾಯ್ಸ್ ಓವರ್ ಬೆಂಬಲದೊಂದಿಗೆ ಪ್ರವಾಸಿ ತಾಣದ ಕುರಿತಾದ ನಿರ್ದಿಷ್ಟವಾದ, ನಿಖರವಾದ ಮಾಹಿತಿಯನ್ನು ಈ ಆ್ಯಪ್ ಮೂಲಕ ಪಡೆಯಬಹುದಾಗಿದೆ. ಎಲ್ಲಾ ಆಂಡ್ರಾಯ್ಡ್ ಮತ್ತು ಐಒಎಸ್ ಬೆಂಬಲಿತ ಮೊಬೈಲ್ ಫೋನ್ಗಳಲ್ಲಿ ಈ ಆ್ಯಪ್ ಅನ್ನು ಡೌನ್ಲೋಡ್ ಮಾಡಬಹುದಾಗಿದೆ.
ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಕಾರ್ಯದರ್ಶಿ ಯೋಗೇಂದ್ರ ತ್ರಿಪಾಠಿ ಅವರು ಆಡಿಯೋ ಒಡಿಗೊಸ್ ಬಗ್ಗೆ ಮಾಹಿತಿಯನ್ನು ನೀಡಿದ್ದು, “ಪ್ರವಾಸಿಗರ ಅನುಕೂಲಕ್ಕಾಗಿ ಈ ಆ್ಯಪ್ ಅನ್ನು ತರಲಾಗಿದೆ. ಆಡಿಯೊ ಗೈಡ್ ಒಡಿಗೊ ದೃಶ್ಯಗಳು ಮತ್ತು ವಾಯ್ಸ್ ಓವರ್ ಬೆಂಬಲದೊಂದಿಗೆ ಭಾರತ ಸರ್ಕಾರ ಪರಿಶೀಲಿಸಿದ ವಿಷಯವನ್ನು ಇದು ನೀಡುತ್ತದೆ. ಆಡಿಯೊ ಒಡಿಗೊಸ್ನೊಂದಿಗೆ, ಪ್ರವಾಸಿಗರು ಈಗ ಹೆಚ್ಚು ಸಮೃದ್ಧ ಅನುಭವವನ್ನು ಪಡೆಯಬಹುದು ಮತ್ತು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಐತಿಹಾಸಿಕ ಒಳನೋಟಗಳನ್ನು ಪಡೆಯಬಹುದು. ಪ್ರವಾಸದ ಸಮಯದಲ್ಲಿ ಸುಗಮ ಸಂಚಾರಕ್ಕಾಗಿ ಆಡಿಯೊ ಒಡಿಗೊಸ್ ಅಪ್ಲಿಕೇಶನ್ ಸೈಟ್ನ ಇನ್ ಬಿಲ್ಟ್ ಮ್ಯಾಪ್ ಅನ್ನು ಒಳಗೊಂಡಿದೆ. ಕೇಳುಗರಿಗೆ ವಿವರವಾದ ಇತಿಹಾಸ ಮತ್ತು ಪಾಡ್ಕಾಸ್ಟ್ಗಳಂತಹ ಇತಿಹಾಸದ ವಿವಿಧ ಆವೃತ್ತಿಗಳನ್ನು ನೀಡಲಾಗುತ್ತದೆ. ಆಡಿಯೊವನ್ನು ಅವರ ಆದ್ಯತೆಯ ಭಾಷೆ ಮತ್ತು ಇತಿಹಾಸದ ಆವೃತ್ತಿಯಲ್ಲಿ ಆಯ್ಕೆ ಮಾಡಬಹುದು. ಆಡಿಯೋ ಒಡಿಗೊಸ್ ಈಗ ಎಲ್ಲಾ ಆಂಡ್ರಾಯ್ಡ್ ಮತ್ತು ಐಒಎಸ್ ಬೆಂಬಲಿತ ಮೊಬೈಲ್ ಫೋನ್ಗಳಲ್ಲಿ ಡೌನ್ಲೋಡ್ ಮಾಡಲು ಲಭ್ಯವಿದೆ” ಎಂದಿದ್ದಾರೆ.
3ನೇ ಆವೃತ್ತಿಯ ಪರ್ಯಟನಾ ಪರ್ವಕ್ಕೂ ಸಿದ್ದತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಲಕ್ಷಾಂತರ ಜನರು ಇದರಲ್ಲಿ ಭಾಗಿಯಾಗುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಪ್ರಧಾನಿ ಮೋದಿಯವರ ಕರೆಯಂತೆ ಏಕ ಬಳಕೆ ಪ್ಲಾಸ್ಟಿಕ್ ಅನ್ನು ಈ ಸಂದರ್ಭದಲ್ಲಿ ನಿಷೇಧ ಮಾಡಲು ನಿರ್ಧರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.