ನವದೆಹಲಿ: ದೇಶದಾದ್ಯಂತ ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನವನ್ನು ಮತ್ತು ದೇಶ ಕಂಡ ಶ್ರೇಷ್ಠ ರಾಜಕಾರಣಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರ 115ನೇ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಗಣ್ಯಾತೀಗಣ್ಯರು ಈ ಇಬ್ಬರು ಮಹಾನ್ ಚೇತನಗಳಿಗೆ ಗೌರವ ನಮನಗಳನ್ನು ಸಲ್ಲಿಕೆ ಮಾಡುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಗಾಂಧೀಜಿ ಸ್ಮಾರಕವಾದ ರಾಜ್ ಘಾಟ್ಗೆ ತೆರಳಿ ಮಹಾತ್ಮನಿಗೆ ಗೌರವಾರ್ಪಣೆ ಮಾಡಿದರು. ಬಳಿಕ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಸ್ಮಾರಕವಾದ ವಿಜಯ್ ಘಾಟ್ಗೆ ತೆರಳಿ ಗೌರವಾರ್ಪಣೆ ಮಾಡಿದರು.
ಸಂಸತ್ತಿನಲ್ಲಿರುವ ಗಾಂಧೀ ಪ್ರತಿಮೆಗೂ ಮೋದಿ ಪುಷ್ಪಾರ್ಚನೆ ಮಾಡಿದ್ದಾರೆ. ಇಂದು ಅವರು ಸಬರಮತಿ ಆಶ್ರಮಕ್ಕೆ ತೆರಳಿ ಅಲ್ಲಿ ನಡೆಯಲಿರುವ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಟ್ವಿಟ್ ಮಾಡಿರುವ ಮೋದಿ, “ರಾಷ್ಟ್ರಪತಿ ಗಾಂಧೀಜಿಯವರ 150ನೇ ಜನ್ಮದಿನದ ಶತ ಶತ ನಮನಗಳು. ಪ್ರೀತಿಯ ಬಾಪು ಅವರಿಗೆ ನನ್ನ ಗೌರವ! 150ನೇ ಗಾಂಧೀ ಜಯಂತಿಯ ಹಿನ್ನಲೆಯಲ್ಲಿ ಮಾನವೀಯತೆಗೆ ಶಾಶ್ವತ ಕೊಡುಗೆ ನೀಡಿದ್ದಕ್ಕಾಗಿ ನಾವು ಬಾಪುಗೆ ಕೃತಜ್ಞತೆ ಸಲ್ಲಿಸುತ್ತೇವೆ. ಅವರ ಕನಸುಗಳನ್ನು ಸಾಕಾರಗೊಳಿಸಲು ಮತ್ತು ಉತ್ತಮ ಸಮಾಜವನ್ನು ಸೃಷ್ಟಿಸಲು ನಾವು ನಿರಂತರವಾಗಿ ಶ್ರಮಿಸುತ್ತೇವೆ ಎಂಬ ಪ್ರತಿಜ್ಞೆ ಮಾಡುತ್ತೇವೆ” ಎಂದಿದ್ದಾರೆ.
ಶಾಸ್ತ್ರೀಜಿ ಬಗ್ಗೆ ಟ್ವಿಟ್ ಮಾಡಿರುವ ಮೋದಿ, “ಶಾಸ್ತ್ರೀ ಅವರು ನೀಡಿದ ಅಮೂಲ್ಯ ಕೊಡುಗೆಯನ್ನು ನಾವೆಂದೂ ಮರೆಯುವುದಿಲ್ಲ. ಯಾವ ಪರಿಸ್ಥಿತಿ ಎದುರಾದರು ಅವರೂ ತಮ್ಮ ಕರ್ತವ್ಯ ಮತ್ತು ಸಿದ್ಧಾಂತಗಳಿಂದ ವಿಮುಖರಾಗಿರಲಿಲ್ಲ” ಎಂದಿದ್ದಾರೆ.
ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಮತ್ತು ಗೃಹ ಸಚಿವ ಅಮಿತ್ ಶಾ ಅವರು ದೆಹಲಿಯಲ್ಲಿ ಬಿಜೆಪಿಯ “ಗಾಂಧಿ ಸಂಕಲ್ಪ ಯಾತ್ರೆ’ಗೆ ಚಾಲನೆಯನ್ನು ನೀಡಲಿದ್ದಾರೆ.
ಕಾಂಗ್ರೆಸ್ ಮುಖಂಡರುಗಳು ಕೂಡ ರಾಜ್ ಘಾಟ್ಗೆ ತೆರಳಿ ಬಾಪುಗೆ ನಮನ ಸಲ್ಲಿಸಿದರು. ಗಾಂಧೀ ಜಯಂತಿ ಹಿನ್ನಲೆಯಲ್ಲಿ ಕಾಂಗ್ರೆಸ್ ಪಾದಾಯಾತ್ರೆಯನ್ನು ಹಮ್ಮಿಕೊಂಡಿದೆ.
At Rajghat, paid tributes to Bapu.
Gandhi Ji’s commitment to peace, harmony and brotherhood remained unwavering. He envisioned a world where the poorest of the poor are empowered.
His ideals are our guiding light. #Gandhi150 pic.twitter.com/4UHLj1EfhB
— Narendra Modi (@narendramodi) October 2, 2019
At Vijay Ghat, paid tributes to Shastri Ji.
India will never forget the valuable contribution of Shastri Ji. He was a stalwart who never deviated from his ideals and principles, come what may. pic.twitter.com/myP7h3erqt
— Narendra Modi (@narendramodi) October 2, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.