ನವದೆಹಲಿ: ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣವನ್ನು ಮಾಜಿ ಕ್ರೆಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ತೀವ್ರವಾಗಿ ಖಂಡಿಸಿದ್ದು, ಇಮ್ರಾನ್ ಖಾನ್ ಭಯೋತ್ಪಾದಕರ ರೋಲ್ ಮಾಡೆಲ್ ಎಂದು ಜರೆದಿದ್ದಾರೆ.
ಟ್ವಿಟ್ ಮಾಡಿರುವ ಗಂಭೀರ್, “ಕ್ರೀಡಾಪಟು ಯಾವತ್ತೂ ರೋಲ್ ಮಾಡೆಲ್ ಆಗಿರಬೇಕು, ಆದರೆ ಪಾಕಿಸ್ಥಾನದ ಪ್ರಧಾನಿಯವರು ಭಯೋತ್ಪಾದಕರ ರೋಲ್ ಮಾಡೆಲ್ ಆಗಿದ್ದಾರೆ” ಎಂದಿದ್ದಾರೆ.
“ಕ್ರೀಡಾಪಟುಗಳು ರೋಲ್ ಮಾಡೆಲ್ ಆಗಿರಬೇಕು. ಉತ್ತಮ ನಡವಳಿಕೆಯನ್ನು ಹೊಂದಿರಬೇಕು, ತಂಡ ಸ್ಪೂರ್ತಿಯನ್ನು ಹೊಂದಿರಬೇಕು, ನೈತಿಕತೆ ಮತ್ತು ವರ್ತನೆಯಲ್ಲಿ ದೃಢತೆ ಹೊಂದಿರಬೇಕು. ಇತ್ತೀಚಿಗೆ ವಿಶ್ವಸಂಸ್ಥೆಯಲ್ಲಿ ಮಾಜಿ ಕ್ರೀಡಾಪಟುವಿನ ಭಾಷಣವನ್ನು ಕೇಳಿದೆವು. ಭಯೋತ್ಪಾದಕರ ರೋಲ್ ಮಾಡೆಲ್ ಅವರಾಗಿದ್ದಾರೆ. ಕ್ರೀಡಾ ಸಮುದಾಯದಿಂದ ಅವರನ್ನು ಬಹಿಷ್ಕರಿಸಬೇಕಾಗಿದೆ” ಎಂದಿದ್ದಾರೆ.
ಇಮ್ರಾನ್ ಖಾನ್ ಅವರು 1971 ರಲ್ಲಿ ಪಾಕಿಸ್ಥಾನದ ರಾಷ್ಟ್ರೀಯ ತಂಡಕ್ಕಾಗಿ ತಮ್ಮ ಮೊದಲ ಪಂದ್ಯವನ್ನು ಆಡಿದ್ದಾರೆ. ಕ್ರಿಕೆಟ್ನಿಂದ ನಿವೃತ್ತಿಯಾದ ನಂತರ, ಖಾನ್ ಪಾಕಿಸ್ಥಾನದಲ್ಲಿನ ಸರ್ಕಾರದ ದುರುಪಯೋಗ ಮತ್ತು ಭ್ರಷ್ಟಾಚಾರದ ಬಗ್ಗೆ ಬಹಿರಂಗವಾಗಿ ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದರು. ಬಳಿಕ ತಮ್ಮದೇ ಆದ ರಾಜಕೀಯ ಪಕ್ಷವನ್ನು ಕಟ್ಟಿಕೊಂಡು ಚುನಾವಣೆಗೂ ಸ್ಪರ್ಧಿಸಿದರು. ನಂತರ ಪ್ರಧಾನಿಯೂ ಆದರು.
ಇಮ್ರಾನ್ ಅವರನ್ನು ಪಾಕಿಸ್ಥಾನ ಸೇನೆಯ ಕೈಗೊಂಬೆ ಎಂದೇ ಕರೆಯಲಾಗುತ್ತಿದೆ. ಸೇನೆಯ ಅನತಿಯಂತೆಯೇ ಅವರು ನಡೆದುಕೊಳ್ಳುತ್ತಿದ್ದಾರೆ. ಭಯೋತ್ಪಾದನೆಯ ವಿರುದ್ಧ ಸಮರ ಸಾರುವ ಬದಲು ಭಾರತದ ವಿರುದ್ಧ ಸಮರ ಸಾರುವ ಪ್ರಯತ್ನ ನಡೆಸುತ್ತಿದ್ದಾರೆ.
Sportspeople are supposed to be role models. Of good behavior. Of Team spirit. Of ethics. Of strength of character. Recently in the UN, we also saw a former sportsperson speak up. As a role model for terrorists. @ImranKhanPTI should be excommunicated from sports community.
— Gautam Gambhir (@GautamGambhir) September 30, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.