ನವದೆಹಲಿ: ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ)ದಡಿಯಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಮತ್ತೆ 1.23 ಅಗ್ಗದ ದರದ ಮನೆಗಳ ನಿರ್ಮಾಣಕ್ಕೆ ಅನುಮೋದನೆಯನ್ನು ನೀಡಿದೆ. ನಗರ ಭಾಗದ ಬಡ ಜನತೆಗೆ ಇದರಿಂದ ಸಾಕಷ್ಟು ಪ್ರಯೋಜನವಾಗಲಿದೆ.
ಕೇಂದ್ರ ಮಂಜೂರು ಮತ್ತು ಪರಿಶೀಲನಾ ಸಮಿತಿ (Central Sanctioning and Monitoring Committee) ಇಂದು ನಡೆಸಿದ 47ನೇ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕೃತ ಪ್ರಕಟನೆ ತಿಳಿಸಿದೆ.
1.23 ಲಕ್ಷ ಮನೆಗಳಿಗೆ ಅನುಮೋದನೆಯನ್ನು ನೀಡುವ ಮೂಲಕ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಗರ ಪ್ರದೇಶದಲ್ಲಿ ನಿರ್ಮಾಣವಾದ ಮನೆಗಳ ಸಂಖ್ಯೆ 90 ಲಕ್ಷಕ್ಕೆ ಏರಿಕೆಯಾಗಿದೆ. ಒಟ್ಟು 1.12 ಕೋಟಿ ಮನೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ.
“ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ ನೇತೃತ್ವದ ಕೇಂದ್ರ ಮಂಜೂರು ಮತ್ತು ಪರಿಶೀಲನಾ ಸಮಿತಿಯು 1.23 ಲಕ್ಷ ಮನೆಗಳ ನಿರ್ಮಾಣಕ್ಕಾಗಿ ಭಾಗವಹಿಸುವ ರಾಜ್ಯಗಳಿಂದ 630 ಪ್ರಸ್ತಾಪಗಳನ್ನು ಅನುಮೋದಿಸಿದೆ, ಇದಕ್ಕೆ ಹೂಡಿಕೆ ಮಾಡಲಾಗುವ ಒಟ್ಟು ಮೊತ್ತ 4,988 ಕೋಟಿ ರೂಪಾಯಿಯಾಗಿದೆ” ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲಿ 27,746 ಮನೆಗಳನ್ನು, ತಮಿಳುನಾಡಿನಲ್ಲಿ 26,709 ಮನೆಗಳನ್ನು, ಗುಜರಾತಿನಲ್ಲಿ 20,903 ಮನೆಗಳನ್ನು, ಪಂಜಾಬಿನಲ್ಲಿ 10,332 ಮನೆಗಳನ್ನು, ಛತ್ತೀಸ್ಗಢದಲ್ಲಿ 10,079 ಮನೆಗಳನ್ನು, ಜಾರ್ಖಂಡಿನಲ್ಲಿ 8,674 ಮನೆಗಳನ್ನು, ಮಧ್ಯಪ್ರದೇಶದಲ್ಲಿ 8,314 ಮನೆಗಳನ್ನು, ಕರ್ನಾಟಕದಲ್ಲಿ 2,822 ಮನೆಗಳನ್ನು ಮತ್ತು ಉತ್ತರಾಖಂಡದಲ್ಲಿ 2,501 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.