ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಸಂಪುಟ ಸಚಿವರುಗಳು ಹರಕೆಗೆ ಕೊಂಡೊಯ್ಯುತ್ತಿರುವ ಕುರಿಗಳಂತೆ ಒದ್ದಾಡುತ್ತಿದ್ದಾರೆ, ಸಿಕ್ಕ ಸಿಕ್ಕ ವೇದಿಕೆಗಳಲ್ಲಿ ಭಾರತದ ವಿರುದ್ಧ ಕಿಡಿಕಾರುವುದನ್ನೇ ಕರ್ತವ್ಯವನ್ನಾಗಿಸಿಕೊಂಡಿದ್ದಾರೆ. ಜಗತ್ತಿನ ಮುಸ್ಲಿಮರನ್ನು ಭಾರತದ ವಿರುದ್ಧ ಎತ್ತಿಕಟ್ಟುವ ವ್ಯರ್ಥ ಪ್ರಯತ್ನವನ್ನು ನಡೆಸುತ್ತಿದ್ದಾರೆ. ಕಾಶ್ಮೀರದಲ್ಲಿ ಮಾತ್ರವಲ್ಲ ಇಡೀ ಭಾರತದ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಭಾರತದಲ್ಲಿನ ಮುಸ್ಲಿಂರ ಬಗ್ಗೆ ಚಿಂತಿತನಾಗಿರುವುದಾಗಿ ಹೇಳಿರುವ ಇಮ್ರಾನ್ ಖಾನ್ ಅವರು ಭಾರತದ ನಿಜ ಪರಿಸ್ಥಿತಿಯ ಬಗ್ಗೆ ಕಣ್ತೆರೆದು ನೋಡಬೇಕಾದ ಅನಿವಾರ್ಯತೆ ಇದೆ. ಅವರ ಕಣ್ಣು ತೆರೆಸುವುದಕ್ಕೊಂದು ನಿದರ್ಶನ ಇಲ್ಲಿದೆ.
ಬೇಲೂರಿನ ರಾಮಕೃಷ್ಣ ಮಿಷನ್ ವಿದ್ಯಾಮಂದಿರವು ಆರ್ ಕೆ ಮಿಷನ್ನ 122 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಹಿಂದೂ ಧರ್ಮಗ್ರಂಥಗಳನ್ನು ಕಲಿಸಲು ಮುಸ್ಲಿಂ ಶಿಕ್ಷಕರನ್ನು ನೇಮಿಸಿಕೊಂಡಿದೆ. ಅಲ್ಲಿ ಅವರು ಹಲವಾರು ವರ್ಷಗಳಿಂದ ಶಿಕ್ಷಣವನ್ನು ನೀಡುತ್ತಿದ್ದಾರೆ. ಪಶ್ಚಿಮ ಬಂಗಾಳದ ಕೋಲ್ಕತ್ತಾದಿಂದ ಸುಮಾರು 10 ಕಿ.ಮೀ (ಉತ್ತರ) ದೂರದ ಹೌರಾ ಜಿಲ್ಲೆಯಲ್ಲಿ ಬೇಲೂರು ಇದೆ.
ಪ್ರೆಸಿಡೆನ್ಸಿ ಕಾಲೇಜಿನ ಮಾಜಿ ವಿದ್ವಾಂಸರಾದ ಶಮೀಮ್ ಅಹ್ಮದ್ ಮತ್ತು ಫರಿದೂರ್ ರಹಮಾನ್ ಅವರನ್ನು 2001 ರಲ್ಲಿ ಶಾದ್ ದರ್ಶನ – ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕಾ, ಮೀಮಾಂಸ ಮತ್ತು ವೇದಾಂತವನ್ನು ಕಲಿಸಲು ನೇಮಿಸಲಾಗಿದೆ. ಆರ್ ಕೆ ಮಿಷನಿನ ಕೆಲವು ಸಂನ್ಯಾಸಿಗಳಿಗೆ, ಈ ನೇಮಕಾತಿಯು ಸ್ವಾಮಿ ವಿವೇಕಾನಂದರು ಒಮ್ಮೆ ಆಡಿದ ಮಾತಿನ ಮನೋಭಾವಕ್ಕೆ ಅನುಗುಣವಾಗಿದೆ: “ಭಾರತಕ್ಕೆ, ಇಸ್ಲಾಮಿಕ್ ದೇಹವನ್ನು ಹೊಂದಿರುವ ವೇದಾಂತದ ಮಿದುಳು ಭರವಸೆಯಾಗಿದೆ” ಎಂದು ವಿವೇಕಾನಂದರು ಹೇಳಿದ್ದರು.
ಶಮೀಮ್ ಮತ್ತು ರಹಮಾನ್ ಬಹಳ ಜನಪ್ರಿಯ ಶಿಕ್ಷಕರು ಮತ್ತು ಅವರ ವಿದ್ಯಾರ್ಥಿಗಳು ಅವರ ಬೋಧನಾ ವಿಧಾನವನ್ನು ತುಂಬಾನೇ ಇಷ್ಟಪಡುತ್ತಾರೆ ಎಂದು ವಿದ್ಯಾಮಂದಿರದ ಮಾಜಿ ಪ್ರಾಂಶುಪಾಲರಾದ ಸ್ವಾಮಿ ಆತ್ಮಪ್ರಿಯಾನಂದ ಹೇಳುತ್ತಾರೆ. ಅವರ ಪ್ರಕಾರ, ಕಾಲೇಜು ಸೇವಾ ಆಯೋಗವು 2000 ರ ಜನವರಿ ಮಧ್ಯದಲ್ಲಿ ಶಮೀಮ್ ಹೆಸರನ್ನು ಶಿಫಾರಸು ಮಾಡಿದ ನಂತರ ಕಾಲೇಜಿನ ಶಿಕ್ಷಕರು ಮತ್ತು ಸಂನ್ಯಾಸಿಗಳ ಸಭೆ ನಡೆಯಿತು. ಅವರನ್ನು ನೇಮಕ ಮಾಡುವ ನಿರ್ಧಾರ ಸರ್ವಾನುಮತದಿಂದ ಕೂಡಿತ್ತು.
1992 ರಲ್ಲಿ ಪ್ರಥಮ ದರ್ಜೆ ಪದವಿಯೊಂದಿಗೆ ಪದವೀಧರರಾದ ಅಹ್ಮದ್, ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಅವರು ತಮ್ಮ ಹುದ್ದೆಯನ್ನು “ಆಹ್ಲಾದಕರ ಅನುಭವ” ಎಂದೇ ಬಣ್ಣಿಸುತ್ತಾರೆ. ಶಿಕ್ಷಕರು ಮತ್ತು ಸಂನ್ಯಾಸಿಗಳು ತುಂಬಾ ಸ್ನೇಹಪರವಾಗಿದ್ದಾರೆ ಮತ್ತು ವಿದ್ಯಾರ್ಥಿಗಳಿಗೆ ಕಲಿಸುವಲ್ಲಿ ನನಗೆ ಯಾವುದೇ ಸಮಸ್ಯೆಗಳು ಎದುರಾಗುತ್ತಿಲ್ಲ ಎಂದು ಅವರು ಹೇಳುತ್ತಾರೆ. ಪದವಿಪೂರ್ವ ದಿನಗಳಿಂದಲೂ ಭಾರತೀಯ ತತ್ವಶಾಸ್ತ್ರದ ಮೇಲೆ ಅವರಿಗೆ ಪ್ರೀತಿ ಬೆಳೆದಿತ್ತು. ಅವರು ನ್ಯಾಯಕುಸುಮಂಜಲಿ, ಸರ್ವದರ್ಶನಸಂಗ್ರಹ ಮತ್ತು ವೇದಾಂತಸರ ಮುಂತಾದ ಕೆಲವು ಮೂಲ ಪುಸ್ತಕಗಳನ್ನು ಸಂಸ್ಕೃತದಲ್ಲಿ ಅಧ್ಯಯನ ಮಾಡಿದ್ದಾರೆ. ರೆಹಮಾನ್ಗೆ ವೇದಾಂತ ಮತ್ತು ನ್ಯಾಯದಲ್ಲೂ ಜ್ಞಾನವಿದೆ. ಸಂನ್ಯಾಸಿಗಳೊಂದಿಗಿನ ಅವರ ಒಡನಾಟ ಮತ್ತು ಕಾಲೇಜು ಗ್ರಂಥಾಲಯದ ವೈವಿಧ್ಯಮಯ ಪುಸ್ತಕಗಳು ಮತ್ತು ಭಾರತೀಯ ತತ್ತ್ವಶಾಸ್ತ್ರದ ವ್ಯಾಖ್ಯಾನಗಳನ್ನು ಬಳಸುವ ವ್ಯಾಪ್ತಿ ಅವರಿಗೆ ಜ್ಞಾನ ವೃದ್ಧಿಸಿಕೊಳ್ಳಲು ಸಾಕಷ್ಟು ಸಹಾಯ ಮಾಡಿದೆ.
ನೀವು ಎಂದಾದರೂ ಯಾವುದೇ ವಿರೋಧವನ್ನು ಎದುರಿಸಿದ್ದೀರಾ ಎಂದು ಕೇಳಿದಾಗ ಅಹ್ಮದ್ ಅವರು, “ನಾನು ಉದಾರ ವಾತಾವರಣದಲ್ಲಿ ಬೆಳೆದಿದ್ದೇನೆ ಮತ್ತು ಮುರ್ಷಿದಾಬಾದಿನಲ್ಲಿರುವ ನನ್ನ ಪೋಷಕರು ನಾನು ವೇದಾಂತವನ್ನು ಕಲಿಸುತ್ತಿದ್ದೇನೆ ಎಂಬ ಬಗ್ಗೆ ತುಂಬಾ ಸಂತೋಷಪಡುತ್ತಿದ್ದಾರೆ” ಎಂದು ಹೇಳುತ್ತಾರೆ.
ಶಿಕ್ಷಕರ ನೇಮಕದಲ್ಲಿ ವಿದ್ಯಾಮಂದಿರ ದಿಟ್ಟ ಕೆಲಸ ಮಾಡಿದೆ ಎಂದು ಪ್ರೆಸಿಡೆನ್ಸಿ ಕಾಲೇಜಿನ ಮಾಜಿ ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ಮತ್ತು ವೇದಾಂತದ ಪ್ರಸಿದ್ಧ ವಿದ್ವಾಂಸ ಪ್ರೊಫೆಸರ್ ನಿರೋಡ್ ಬಾರನ್ ಚಕ್ರವರ್ತಿ ಹೇಳಿದ್ದಾರೆ.
ಅದೇನೆಯಿರಲಿ, ಇಮ್ರಾನ್ ಖಾನ್ ಈಗ ಭಾರತದಾದ್ಯಂತ ಇರುವ 200 ಮಿಲಿಯನ್ ಮುಸ್ಲಿಮರ ಬಗ್ಗೆ ಚಿಂತಿತರಾಗಿದ್ದಾರೆ. ಮಾತ್ರವಲ್ಲ, ಭಾರತದ ಕ್ರಿಶ್ಚಿಯನ್ನರು, ಸಿಖ್ಖರು ಮತ್ತು ದಲಿತರ ಭವಿಷ್ಯದ ಬಗ್ಗೆಯೂ ಆತಂಕಿತರಾಗಿದ್ದಾರೆ. ನೆಹರೂ ಊಹಿಸಿದಂತೆಯೇ ಭಾರತದಲ್ಲಿನ ಸಾಮಾಜಿಕ ಮತ್ತು ಧಾರ್ಮಿಕ ದೋಷದ ರೇಖೆಗಳನ್ನು ವಿಸ್ತರಿಸುವ ಅತ್ಯಂತ ತೆಳುವಾದ ಪ್ರಯತ್ನ ಇದಾಗಿದೆ. 1950 ರ ದಶಕದಲ್ಲಿ ಪಾಶ್ಚಿಮಾತ್ಯ ಜಗತ್ತು ಪ್ರಚಾರ ಮಾಡಿದ ಭಾರತದ ಕಲ್ಪನೆಯಲ್ಲೇ ಜೀವಿಸುತ್ತಿರುವುದಕ್ಕಾಗಿ ಖಾನ್ ಅವರನ್ನು ದೂಷಿಸಲಾಗುವುದಿಲ್ಲ. ಅದು ಅವರ ದೇಶದ ಸ್ವಾಭಾವಿಕ ದೌರ್ಬಲ್ಯಗಳಿಂದಾಗಿ ಅವರಿಗೆ ಅಂಟಿಕೊಂಡ ರೋಗವಷ್ಟೇ.
ಅಂತೆಯೇ, ಅಂತಾರಾಷ್ಟ್ರೀಯ ಭೌಗೋಳಿಕತೆಯನ್ನು ಸಂಪೂರ್ಣವಾಗಿ ಅರಿಯದೆ, ಜರ್ಮನಿ ಮತ್ತು ಜಪಾನ್ ಅನ್ನು ಹತ್ತಿರದ ನೆರೆಹೊರೆಯವರು ಎಂದು ವಿವರಿಸುವ ಇಮ್ರಾಮ್ ಖಾನ್, ಫ್ಯಾಸಿಸ್ಟ್ ಹಿಂದುತ್ವದ ಆಡಳಿತ ಎಂಬ ವಿಷಯದ ಬಗ್ಗೆ, ಹಿಂದೂ ಪ್ರಾಬಲ್ಯದ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಿದ್ದಾರೆ. ಶತ್ರುಗಳ ಕಣ್ಣು ಕುಕ್ಕುವಂತೆ ಮಾಡಲು ಹೋಗಿ ಪೇಚಿಗೆ ಸಿಲುಕಿಕೊಳ್ಳುವುದು ಕುರುಡು ಪ್ರಜಾಪ್ರಭುತ್ವ ರಾಷ್ಟ್ರವಾದ ಪಾಕಿಸ್ಥಾನದ ಪ್ರಧಾನ ಮಂತ್ರಿಯ ಅತೀದೊಡ್ಡ ವ್ಯಂಗ್ಯವಾಗಿದೆ. ಅವರು ತನ್ನ ಮಿಲಿಟರಿ ಮೇಲಧಿಕಾರಿಗಳಿಗೆ ವಿಧೇಯರಾಗಿರಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಜಾತ್ಯಾತೀತತೆ ಮತ್ತು ಬಹುತ್ವವನ್ನು ಈಗಾಗಲೇ ನುಂಗಿ ನೀರು ಕುಡಿದಿದ್ದಾರೆ. ಪಾಕಿಸ್ಥಾನದ ಸ್ವರೂಪವನ್ನು ಗಮನಿಸಿದರೆ, ಖಾನ್ನ ವರ್ತನೆಗಳು ಆಶ್ಚರ್ಯಕರವಾಗಿ ಕಾಣಿಸುವುದಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.