“ಚಾಣಕ್ಯ ಪ್ರತಿಯೊಬ್ಬ ವ್ಯಕ್ತಿಯ ನೀತಿ ಕೌಶಲ್ಯದ ಮೇಲೂ ನಂಬಿಕೆ ಇಟ್ಟಿದ್ದ. ಹೀಗಾಗಿ, ನರೇಂದ್ರ ಮೋದಿ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂದಾಗ ಅವರು ಆಗಾಗಲೇ ಚಾಣಕ್ಯನ ಬರವಣಿಗೆಯನ್ನು ಓದಿದ್ದಾರೆ ಎಂಬುದನ್ನು ನಾನು ಅರ್ಥಮಾಡಿಕೊಂಡೆ” ಎಂದು ಪುಣೆಯಲ್ಲಿ ‘ಚಾಣಕ್ಯನ ಜೀವನ ಮತ್ತು ಕಾರ್ಯ’ದ ವಿಷಯದ ಬಗ್ಗೆ ಮಾತನಾಡಿದ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷ, ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದರು. ಈಗಾಗಲೇ ತಮ್ಮ 69ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರುವ ಮೋದಿಯವರ ನೀತಿ ಮತ್ತು ನಿರ್ಧಾರಗಳು ಯಾವ ರೀತಿಯಲ್ಲಿ ಚಾಣಕ್ಯನ ಬೋಧನೆಗಳಿಂದ ಪ್ರಭಾವಿತವಾಗಿದೆ ಎಂಬುದರತ್ತ ಒಂದು ಬಾರಿ ನೋಟ ಹರಿಸೋಣ.
ಚಾಣಕ್ಯ ಕ್ರಿ.ಪೂ ನಾಲ್ಕನೇ ಶತಮಾನದ ತತ್ವಜ್ಞಾನಿ, ಶಿಕ್ಷಕ, ಅರ್ಥಶಾಸ್ತ್ರಜ್ಞ, ನ್ಯಾಯಶಾಸ್ತ್ರಜ್ಞ ಮತ್ತು ರಾಜ ಸಲಹೆಗಾರರಾಗಿದ್ದರು, ಅವರು ತಮ್ಮ ಶಿಷ್ಯ ಚಂದ್ರಗುಪ್ತ ಮೌರ್ಯ ಅವರೊಂದಿಗೆ ಮೌರ್ಯ ಸಾಮ್ರಾಜ್ಯವನ್ನು ನಿರ್ಮಿಸಿದರು. ಆಧುನಿಕ ಇರಾನ್ನಿಂದ ಮ್ಯಾನ್ಮಾರ್ ಮತ್ತು ಕಾಶ್ಮೀರದಿಂದ ಕೇರಳದವರೆಗಿನ ಗಡಿಗಳನ್ನು ಹೊಂದಿದ್ದ ಮೌರ್ಯ ಸಾಮ್ರಾಜ್ಯವು ಭಾರತದಲ್ಲಿ ಇದುವರೆಗೆ ಅಸ್ತಿತ್ವದಲ್ಲಿದ್ದ ಅತ್ಯಂತ ಶಕ್ತಿಶಾಲಿ ಸಾಮ್ರಾಜ್ಯಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ.
ತೆರಿಗೆ, ಪುರಸಭೆಯ ಕಾನೂನುಗಳು, ಕಾನೂನು ವ್ಯವಸ್ಥೆ, ಆಸ್ತಿ ಹಕ್ಕುಗಳು ಮತ್ತು ಕಾರ್ಮಿಕ ಕಾನೂನುಗಳು ಮತ್ತು ಮುಂತಾದವುಗಳ ಕುರಿತ ಚಾಣಕ್ಯನ ವಿಚಾರಗಳು ಮತ್ತು ಚಿಂತನೆಗಳು ನವ ಸಮಾಜಕ್ಕೆ ಮಾರ್ಕ್ಸ್ವಾದ ಅಥವಾ ನೆಹರು ಸಮಾಜವಾದಕ್ಕಿಂತ ಹೆಚ್ಚು ಪ್ರಸ್ತುತವಾಗಿವೆ. ಶ್ರೇಷ್ಠ ಚಿಂತಕನು ವಿಶ್ವದ ಶ್ರೇಷ್ಠ ಸಾಮ್ರಾಜ್ಯಗಳಲ್ಲಿ ಒಂದನ್ನು ನಿರ್ಮಿಸಿದವನು ಮತ್ತು ಅದರ ಕಾನೂನುಗಳನ್ನು ರಚನೆ ಮಾಡಿದವನೂ ಆದ ಮಹಾನ್ ಚಿಂತಕ ಚಾಣಕ್ಯನ ತತ್ವಗಳನ್ನು ನಾವು ಮತ್ತೊಮ್ಮೆ ಅಳವಡಿಸಬೇಕಾದ ಅನಿವಾರ್ಯತೆ ಬಹಳಷ್ಟಿದೆ.
ಭಾರತವು ವೈಭವದ ದಿನಗಳನ್ನು ಮರಳಿ ಪಡೆಯಲು ಮತ್ತು ‘ವಿಶ್ವ ಗುರು’ ಆಗಲು ಬಯಸಿದರೆ, ಚಾಣಕ್ಯನನ್ನು ನಾವು ಪುನಃ ಅವಲೋಕನ ಮಾಡಬೇಕಾಗಿದೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಮಹಾನ್ ಹಿಂದೂ ತತ್ವಜ್ಞಾನಿ ಸಂಕೇತಿಸಿದ ನಿಯಮಗಳನ್ನು ಅನುಸರಿಸುವ ಮೂಲಕ ಆ ಕಾರ್ಯವನ್ನು ನಿಖರವಾಗಿ ಮಾಡುತ್ತಿದ್ದಾರೆ.
ರಾಷ್ಟ್ರೀಯತೆ ಮತ್ತು ಮೋದಿ ಅವರ ನೀತಿಗಳಲ್ಲಿ ಚಾಣಕ್ಯನ ಪ್ರಭಾವ
ನೇಷನ್ ಫಸ್ಟ್ ಎಂಬ ಪರಿಕಲ್ಪನೆಯನ್ನು ನೀಡಿದ ಮೊದಲಿಗರು ಚಾಣಕ್ಯ, ‘ರಾಷ್ಟ್ರ ಸರ್ವೋಚ್ಚವೇ ಹೊರತು ಆಡಳಿತಗಾರನಲ್ಲ’ ಎಂದು ಚಾಣಕ್ಯ ಹೇಳಿದ್ದರು. ‘ನೇಷನ್ ಫಸ್ಟ್’ ಕಳೆದ ಐದು ವರ್ಷಗಳಲ್ಲಿ ಮೋದಿ ಸರ್ಕಾರದ ತತ್ವವಾಗಿದೆ ಮತ್ತು ಅದರ ಪ್ರತಿಯೊಂದು ನೀತಿಯು ‘ರಾಷ್ಟ್ರೀಯ ಹಿತಾಸಕ್ತಿ’ಯ ಧ್ಯೇಯದೊಂದಿಗೆ ಮುನ್ನಡೆಯುತ್ತದೆ. ಜನರಿಗೆ ಸೇವೆ ಮಾಡುವುದು ರಾಜನ ಮೊದಲ ಕರ್ತವ್ಯ ಎಂದು ಚಾಣಕ್ಯ ಹೇಳಿದ್ದರು ಮತ್ತು ಪ್ರಧಾನಿ ಮೋದಿ ತಮ್ಮನ್ನು ತಾವು ‘ಪ್ರಧಾನ್ ಸೇವಾ’ ಎಂದು ಹೇಳಿಕೊಳ್ಳುವ ಮೂಲಕ ಮಹಾನ್ ತತ್ವಜ್ಞಾನಿಯ ಪಾಂಡಿತ್ಯದ ಹಾದಿಯಲ್ಲಿ ಸಾಗುತ್ತಿರುವ ಸೂಚನೆ ನೀಡಿದ್ದಾರೆ.
ಹಿರಿಯ ಮಗ ಉತ್ತರಾಧಿಕಾರಿ ಎಂಬ ನಿಯಮದ ಬಗ್ಗೆ ಚಾಣಕ್ಯ ಅಸಹ್ಯ ವ್ಯಕ್ತಪಡಿಸುತ್ತಾನೆ ಮತ್ತು ಅದನ್ನು ಕೊನೆಗೊಳಿಸುತ್ತಾನೆ. ಅವರ ಪ್ರಕಾರ, ಅತ್ಯುತ್ತಮ ಅಧಿಕಾರಿಯೇ ಸರಿಯಾದ ಉತ್ತರಾಧಿಕಾರಿ. ಮೋದಿ ಮತ್ತು ಶಾ ಅವರ ನೇತೃತ್ವದಲ್ಲಿ ಬಿಜೆಪಿಯು ದೇಶದ ಹೆಚ್ಚಿನ ರಾಜಕೀಯ ರಾಜವಂಶಗಳನ್ನು ನಾಶಪಡಿಸಿದೆ.
ಒಂದು ರಾಷ್ಟ್ರವು ಚಾಣಕ್ಯನ ಸಿದ್ಧಾಂತಗಳನ್ನು ಅನುಸರಿಸಿದರೆ, ಅದನ್ನು ಚಾಣಕ್ಯನ ರಾಜ್ಯ ಎಂದು ಕರೆಯಬಹುದು. ಚಾಣಕ್ಯನ ರಾಜ್ಯದ ಕಲ್ಪನೆಯು ಸಮಾಜದಲ್ಲಿ ಆಡಳಿತದ ಸೀಮಿತ ಹಸ್ತಕ್ಷೇಪವನ್ನು ವಾದಿಸುತ್ತದೆ, ಅದರ ಪಾತ್ರವು ರಕ್ಷಣೆ, ಆಂತರಿಕ ಭದ್ರತೆ ಮತ್ತು ಕಾನೂನಿನ ನಿಯಮವನ್ನು ಸ್ಥಾಪಿಸುವಂತಹ ಕ್ಷೇತ್ರಗಳಿಗೆ ಸೀಮಿತವಾಗಿದೆ. ಭಾರತವನ್ನು ಚಾಣಕ್ಯ ರಾಜ್ಯವನ್ನಾಗಿ ಮಾಡಲು ಪಿಎಂ ಮೋದಿ ಪ್ರಯತ್ನಿಸುತ್ತಿದ್ದಾರೆ.
ಆಡಳಿತ ಮತ್ತು ಮೋದಿ ಅವರ ನೀತಿಗಳ ಮೇಲೆ ಚಾಣಕ್ಯನ ಪ್ರಭಾವ
2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರ ಚುನಾವಣಾ ಪ್ರಚಾರವು ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ದ ತತ್ವವನ್ನು ಆಧರಿಸಿತ್ತು. ಕಳೆದ ಕೆಲವು ವರ್ಷಗಳಲ್ಲಿ, ಡಿಜಿಟಲೀಕರಣದ ಸಹಾಯದಿಂದ ಸರ್ಕಾರಿ ಅಧಿಕಾರಿಗಳ ಹಸ್ತಕ್ಷೇಪವನ್ನು ಕಡಿಮೆ ಮಾಡಲಾಗಿದೆ. ಭ್ರಷ್ಟಾಚಾರವನ್ನು ಕಡಿಮೆ ಮಾಡಲು ಸಾರ್ವಜನಿಕ ಸರಕುಗಳ ವಿತರಣೆ, ತೆರಿಗೆ ಮತ್ತು ನಿಯಂತ್ರಣವನ್ನು ಡಿಜಿಟಲೀಕರಣಗೊಳಿಸಲಾಗಿದೆ.
ಮೋದಿಯ ವಿದೇಶಾಂಗ ನೀತಿ ಮತ್ತು ರಾಜತಾಂತ್ರಿಕತೆ ಮೇಲೆ ಚಾಣಕ್ಯನ ಪ್ರಭಾವ
ಮೋದಿ ಸರ್ಕಾರದಲ್ಲಿ ‘ಚಾಣಕ್ಯನ್ ಸ್ಕೂಲ್ ಆಫ್ ಫಾರಿನ್ ಪಾಲಿಸಿ’ ಕೂಡ ಪ್ರಮುಖವಾಗಿದೆ. ಇದರ ಪ್ರಕಾರ, ಒಂದು ದೇಶವು ವಿದೇಶಿ ನೀತಿ ವಿಷಯಗಳಲ್ಲಿ ‘ವಾಸ್ತವಿಕತೆಗೆ’ ಬದ್ಧವಾಗಿರಬೇಕು ಮತ್ತು ಬೇರೆ ಯಾವುದೇ ದೇಶದೊಂದಿಗೆ ವ್ಯವಹರಿಸುವಾಗ ‘ರಾಷ್ಟ್ರೀಯ ಹಿತಾಸಕ್ತಿ’ ಸರ್ವೋಚ್ಚವಾಗಿರಬೇಕು. ಇದು ವಿದೇಶಿ ನೀತಿಯನ್ನು ರಾಷ್ಟ್ರೀಯ ಹಿತಾಸಕ್ತಿಗೆ ಬದಲಾಗಿ ಆದರ್ಶವಾದಿ ಅಂತಾರಾಷ್ಟ್ರೀಯ ಒಳಿತಿನ ಸಾಧನವಾಗಿ ನೋಡುತ್ತಿದ್ದ ನೆಹರೂವಿನ ವಿದೇಶಾಂಗ ನೀತಿಗೆ ತದ್ವಿರುದ್ಧವಾಗಿದೆ.
ಮೋದಿ ಸರ್ಕಾರದ ವಿದೇಶಾಂಗ ನೀತಿಯನ್ನು ಎಲ್ಲಾ ರಾಜಕೀಯ ನಾಯಕರುಗಳು ಮೆಚ್ಚಿದ್ದಾರೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ, ಭಾರತವನ್ನು ಪ್ರಮುಖ ಜಾಗತಿಕ ಶಕ್ತಿಯೆಂದು ಗುರುತಿಸಲಾಗಿದೆ ಮತ್ತು ವಿಶ್ವದಾದ್ಯಂತದ ದೇಶಗಳು ಭಾರತದೊಂದಿಗೆ ತೊಡಗಿಸಿಕೊಳ್ಳಲು ಮತ್ತು ಸಹಕರಿಸಲು ಬಯಸುತ್ತಿವೆ. ಭಾರತೀಯ ಅಮೆರಿಕನ್ನರೊಂದಿಗಿನ ಪ್ರಧಾನಿ ಮೋದಿ ಅವರ ಸಂವಾದದಲ್ಲಿ ಅಧ್ಯಕ್ಷ ಟ್ರಂಪ್ ಪಾಲ್ಗೊಳ್ಳುತ್ತಿದ್ದಾರೆ, ಇದು ಇಂಡೋ-ಯುಎಸ್ ಸಂಬಂಧಗಳು ಉತ್ತುಂಗದಲ್ಲಿದೆ ಎಂಬುದನ್ನು ಸೂಚಿಸುತ್ತದೆ. ಈ ಎಲ್ಲದರ ಮೂಲಕ, ಭಾರತವು ತನ್ನ ನಿರ್ಧಾರಗಳ ಮೇಲೆ ತನ್ನ ಸಾರ್ವಭೌಮತ್ವವನ್ನು ಪ್ರತಿಪಾದಿಸುವಲ್ಲಿ ಯಶಸ್ವಿಯಾಗಿದೆ ಮತ್ತು ರಷ್ಯಾದೊಂದಿಗೆ ಸಂಬಂಧವನ್ನು ವೃದ್ಧಿಸಿಕೊಂಡಿದೆ ಮತ್ತು ರಷ್ಯಾದ ದೂರದ ಪೂರ್ವದಲ್ಲಿ ಶತಕೋಟಿ ಹೂಡಿಕೆ ಮಾಡಲು ಯೋಜಿಸಿದೆ. ಇದು ರಾಜಕೀಯ ಚಿಂತನೆಯ ಚಾಣಕ್ಯನ ಸಿದ್ಧಾಂತವನ್ನು ತೋರಿಸುತ್ತದೆ.
ಚಾಣಕ್ಯರ ನೀತಿಗಳನ್ನು ಹೆಚ್ಚಾಗಿ ‘ಡಾರ್ವಿನಿಯನ್’ ಎಂದು ಕರೆಯಲಾಗುತ್ತದೆ. ಆದರೆ ಮಹಾನ್ ತತ್ವಜ್ಞಾನಿ ಚಾಣಕ್ಯ ಡಾರ್ವಿನಿಯನ್ ಅನ್ನು ವಿರೋಧಿಸುತ್ತಾರೆ ಮತ್ತು ಅದನ್ನು ಮತ್ಸ್ಯ ನ್ಯಾಯಾ ಎಂದು ಕರೆದಿದ್ದಾರೆ. ಅಲ್ಲಿ ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ತಿನ್ನುತ್ತವೆ. ಭೂಮಿಯ ಕಾನೂನೇ ಸರ್ವೋಚ್ಚವಾಗಿರುವ ನಿಯಮ ಆಧಾರಿತ ವ್ಯವಸ್ಥೆಯ ಬಗ್ಗೆ ಅವರು ವಾದಿಸುತ್ತಾರೆ ಮತ್ತು ಸಂನ್ಯಾಸಿಗಳಿಂದ ಕೋಟ್ಯಧಿಪತಿಯವರೆಗೆ ಎಲ್ಲರಿಗೂ ನ್ಯಾಯವನ್ನು ಒಂದೇ ರೀತಿಯಲ್ಲಿ ತರಬೇಕು ಎಂಬುದು ಅವರ ವಾದವಾಗಿದೆ.
ಚಾಣಕ್ಯನ ತೆರಿಗೆ ನೀತಿ ಮತ್ತು ಮೋದಿಯ ತೆರಿಗೆ ನೀತಿ
ತೆರಿಗೆ ವಿಧಿಸುವಾಗ ರಾಜನಾದವನು, ಜೇನುಹುಳುಗಳು ಹೂವುಗಳಿಂದ ಮಕರಂದವನ್ನು ನೋಯಿಸದೆ ಹೊರತೆಗೆಯುವ ರೀತಿಯಲ್ಲಿಯೇ ತೆರಿಗೆ ವಿಧಿಸಬೇಕು ಎಂದು ಚಾಣಕ್ಯ ಹೇಳುತ್ತಾರೆ. ಮೋದಿ ಸರ್ಕಾರವು ಭ್ರಷ್ಟರಾದ ಮತ್ತು ತೆರಿಗೆ ಪಾವತಿದಾರರ ಮೇಲೆ ದೌರ್ಜನ್ಯ ಎಸಗಿದ ಅನೇಕ ಆದಾಯ ತೆರಿಗೆ ಅಧಿಕಾರಿಗಳನ್ನು ಕಡ್ಡಾಯ ನಿವೃತ್ತಿಗೊಳಪಡಿಸಿದೆ. ಪ್ರಸ್ತುತ, ಭಾರತದ ಜಿಡಿಪಿ ಅನುಪಾತಕ್ಕೆ ತೆರಿಗೆ ಶೇ. 17 ರಷ್ಟಿದೆ, ಇದು ಚಾಣಕ್ಯನ ಸಿದ್ಧಾಂತಕ್ಕೆ ಅನುಗುಣವಾಗಿಯೇ ಇದೆ.
ಚಾಣಕ್ಯನ ಆಂತರಿಕ ಭದ್ರತೆ ಮತ್ತು ಮೋದಿಯ ವಿಧಾನ
ಆಂತರಿಕ ಭದ್ರತಾ ಸಮಸ್ಯೆಗಳನ್ನು ಪರಿಹರಿಸಲು, ರಾಜಿ ಸಂಧಾನ ಮತ್ತು ಬಲಾತ್ಕಾರದ ನೀತಿಯನ್ನು ಚಾಣಕ್ಯ ಪ್ರತಿಪಾದಿಸುತ್ತಾರೆ. “ರಾಜನು ಅತೃಪ್ತಿ ಹೊಂದಿದವರೊಂದಿಗೆ ಅಥವಾ ಸ್ವಾಭಾವಿಕವಾಗಿ ಅಸಮಾಧಾನ ಇರುವವರೊಂದಿಗೆ ರಾಜಿ ನೀತಿಯನ್ನು ಬಳಸಿಕೊಳ್ಳಬಹುದು. ಮನುಷ್ಯನನ್ನು ಅಚಲತೆಯಿಂದ ತೃಪ್ತಿಪಡಿಸುವ ನೆಪದಲ್ಲಿ ಉಡುಗೊರೆಯನ್ನೂ ನೀಡಬಹುದು ಅಥವಾ ಅವನ ದುಃಖ ಅಥವಾ ಸಂಕಟದ ಬಗ್ಗೆ ಕಾಳಜಿಯನ್ನು ವಹಿಸಬಹುದು” ಎಂದು ಚಾಣಕ್ಯ ಹೇಳುತ್ತಾರೆ.
ಮೋದಿ ಸರ್ಕಾರವು ಜಮ್ಮು ಮತ್ತು ಕಾಶ್ಮೀರ ವಿಷಯದಲ್ಲಿ ಅದೇ ರೀತಿ ಮಾಡಿತು. ಸಾಮಾನ್ಯ ಕಾಶ್ಮೀರಿ ಇದು ತನ್ನ ಸರ್ಕಾರ ಎಂದು ಭಾವಿಸುವಂತೆ ಮಾಡಬೇಕು ಎಂಬ ನಿಟ್ಟಿನಲ್ಲಿ ಆಡಳಿತವನ್ನು ಅದು ತರುತ್ತಿದೆ. ಅಲ್ಲಿ ಎದುರಾಗುತ್ತಿರುವ ಆಂತರಿಕ ಬೆದರಿಕೆಗಳನ್ನು ಎದುರಿಸಲು ಚಾಣಕ್ಯ ಪ್ರತಿಪಾದಿಸಿದಂತೆ ಬಲವಂತದ ತಂತ್ರಗಳನ್ನೂ ಬಳಸಿಕೊಳ್ಳುತ್ತಿದೆ. ಚಾಣಕ್ಯ ರಾಷ್ಟ್ರ ದ್ರೋಹಿಗಳಿಗೆ ಮತ್ತು ಪಿತೂರಿ ಮಾಡುವ ನಾಯಕರಿಗೆ ಮರಣದಂಡನೆಯೇ ಶಿಕ್ಷೆ ಎಂದು ಸೂಚಿಸಿದ್ದಾರೆ. ಪ್ರತ್ಯೇಕತಾವಾದಿ ನಾಯಕರೊಂದಿಗೆ ಸರ್ಕಾರ ಬಲವಂತದ ಕ್ರಮಗಳನ್ನೇ ಜರುಗಿಸುತ್ತಿದೆ. “ಹೌದು, ಇಂದು ಅವರ ಮನಸ್ಸಿನಲ್ಲಿ ಭಯವಿದೆ. ಅದು ಇರಬೇಕು ಮತ್ತು ಮುಂದೆ ಅದು ಹೆಚ್ಚಾಗಲಿದೆ ”ಎಂದು ಪ್ರತ್ಯೇಕತಾವಾದಿ ನಾಯಕರ ಬಗ್ಗೆ ಸಂಸತ್ತಿನಲ್ಲಿ ಅಮಿತ್ ಶಾ ಹೇಳಿದ್ದರು.
ಚಾಣಕ್ಯ ಬರೆದ ನೀತಿ-ನಿಯಮಗಳು ಕಳೆದ ಐದು ವರ್ಷಗಳಲ್ಲಿ ಮೋದಿ ಸರ್ಕಾರದ ನೀತಿಗಳಿಗೆ ಮಾರ್ಗದರ್ಶನವನ್ನು ನೀಡಿ ಸಕಾರಾತ್ಮಕ ಫಲಿತಾಂಶಗಳು ಬರುವಂತೆ ಮಾಡುತ್ತಿವೆ. ಚಾಣಕ್ಯನೆಂಬ ಮಹಾನ್ ದಾರ್ಶನಿಕನನ್ನು ಅನುಸರಿಸುವ ಮೂಲಕ ಭಾರತವು ದೊಡ್ಡ ಸಾಧನೆಯ ಹಾದಿಯನ್ನು ಹಿಡಿಯಬಲ್ಲದು ಮತ್ತು ವಿಶ್ವ ಗುರು ಸ್ಥಾನವನ್ನು ಮತ್ತೆ ಅಲಂಕರಿಸಬಲ್ಲದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.