ವಿಶ್ವಸಂಸ್ಥೆ: ಶಾಂತಿಪಾಲನೆಯ ಕಾರ್ಯಕ್ಕಾಗಿ ದಕ್ಷಿಣ ಸುಡಾನಿನಲ್ಲಿ ನಿಯೋಜನೆಗೊಂಡಿರುವ ಭಾರತದ 17 ಮಂದಿ ಪೊಲೀಸ್ ಅಧಿಕಾರಿಗಳಿಗೆ ವಿಶ್ವಸಂಸ್ಥೆಯು ‘ಸೇವಾ ಮೆಡಲ್’ ಪ್ರದಾನಿಸಲಾಗಿದೆ.
ಈ ಭಾರತೀಯ ಪೊಲೀಸ್ ಅಧಿಕಾರಿಗಳು ವಿಶ್ವಸಂಸ್ಥೆ ಮತ್ತು ದಕ್ಷಿಣ ಸುಡಾನ್ ಜನರಿಗಾಗಿ ಸುಮಾರು ಒಂದು ವರ್ಷ ಸೇವೆ ಸಲ್ಲಿಸಿದ್ದಾರೆ. ನಿರ್ಗತಿಕರಾದ ನಾಗರಿಕರನ್ನು ರಕ್ಷಿಸುವುದು, ಸಮುದಾಯ ಪೊಲೀಸ್ ಮತ್ತು ಸ್ಥಳೀಯ ಪೊಲೀಸ್ ಕೌಶಲ್ಯಗಳನ್ನು ಬೆಳೆಸುವುದು ಈ ಪೊಲೀಸ್ ಅಧಿಕಾರಿಗಳು ನಿರ್ವಹಿಸುತ್ತಿರುವ ಕೆಲಸವಾಗಿದೆ.
ದಕ್ಷಿಣ ಸುಡಾನ್ನಲ್ಲಿನ ಯುಎನ್ ಮಿಷನ್ (ಯುಎನ್ಎಂಐಎಸ್ಎಸ್) ಮಂಗಳವಾರ ಟ್ವೀಟ್ ಮಾಡಿ ಈ ಬಗ್ಗೆ ಮಾಹಿತಿಯನ್ನು ನೀಡಿದೆ. “ದಕ್ಷಿಣ ಸುಡಾನಿನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ 17 ಭಾರತೀಯ ಶಾಂತಿಪಾಲಕರಿಗೆ ಅವರು ನಿರ್ವಹಿಸಿದ ಯುಎನ್ ಪೀಸ್ ಕೀಪಿಂಗ್ ಸೇವೆಯನ್ನು ಗುರುತಿಸಿ ಇಂದು ಯುಎನ್ ಪದಕಗಳನ್ನು ಪ್ರದಾನಿಸಲಾಗಿದೆ” ಎಂದಿದ್ದಾರೆ.
ಜುಬಾದ ಯುಎನ್ ಹೌಸ್ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ 17 ಭಾರತೀಯ ಪುರುಷರು ಮತ್ತು ಮಹಿಳಾ ಪೊಲೀಸ್ ಅಧಿಕಾರಿಗಳಿಗೆ ಯುಎನ್ ಸೇವಾ ಪದಕಗಳನ್ನು ನೀಡಲಾಗಿದೆ.
ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ದೊಡ್ಡ ಮಟ್ಟದಲ್ಲಿ ಶಾಂತಿಪಾಲಕರನ್ನು ನೀಡುವ ವಿಶ್ವದ ದೇಶಗಳ ಪೈಕಿ ಭಾರತವೂ ಒಂದಾಗಿದೆ. ಮಾರ್ಚ್ 2019 ರ ವೇಳೆಗೆ, ಯುಎನ್ಎಂಐಎಸ್ಎಸ್ಗೆ ಭಾರತವು ಎರಡನೇ ಅತಿ ಹೆಚ್ಚು ಅಂದರೆ 2,337 ಶಾಂತಿಪಾಲಕರ ಕೊಡುಗೆಯನ್ನು ನೀಡಿದೆ. ಇದಲ್ಲದೆ, ಯುಎನ್ಎಂಐಎಸ್ಎಸ್ಗೆ ಭಾರತ 22 ಪೊಲೀಸ್ ಸಿಬ್ಬಂದಿಯನ್ನು ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.