ಮುಂಬಯಿ: ಫುಟ್ಬಾಲ್ ಸ್ಪೋರ್ಟ್ಸ್ ಡೆವಲಪ್ಮೆಂಟ್ ಲಿಮಿಟೆಡ್ (ಎಫ್ಎಸ್ಡಿಎಲ್) ಭಾರತದಲ್ಲಿ ಫುಟ್ಬಾಲ್ ಅನ್ನು ಜನಪ್ರಿಯಗೊಳಿಸುವ ಸಲುವಾಗಿ, ನಾಲ್ಕು ತಂಡಗಳ ಅಂಡರ್ -17 ಮಹಿಳಾ ಪಂದ್ಯಾವಳಿಯನ್ನು ಪ್ರಾರಂಭಿಸಲಿದೆ. ಮಾತ್ರವಲ್ಲದೇ ಮಕ್ಕಳ ಲೀಗ್ ಅನ್ನು ಕೂಡ ಆಯೋಜಿನೆಗೊಳಿಸುತ್ತಿದೆ. ಈ ಬಗ್ಗೆ ಅದು ಶುಕ್ರವಾರ ಘೋಷಣೆ ಮಾಡಿದೆ.
ಮಾಧ್ಯಮ ಹೇಳಿಕೆಯ ಪ್ರಕಾರ, ಎಫ್ಎಸ್ಡಿಎಲ್ ಅಧ್ಯಕ್ಷೆ ನೀತಾ ಅಂಬಾನಿ ಅವರು ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಕ್ಲಬ್ ಮಾಲೀಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವೇಳೆ ಈ ಯೋಜನೆಗಳನ್ನು ಬಹಿರಂಗಪಡಿಸಿದ್ದಾರೆ. ಈ ಸಭೆಯಲ್ಲಿ ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಮುಖ್ಯಸ್ಥ ಪ್ರಫುಲ್ ಪಟೇಲ್ ಕೂಡ ಭಾಗವಹಿಸಿದ್ದರು.
“ಮಹಿಳಾ ಯು 17 ಟೂರ್ನಮೆಂಟ್ ಮತ್ತು ಮಕ್ಕಳ ಲೀಗ್ಗಳ ಎರಡು ಉಪಕ್ರಮಗಳ ಮೂಲಕ, ಭಾರತದಲ್ಲಿ ಫುಟ್ಬಾಲ್ ಕ್ರೀಡೆಯನ್ನು ಇನ್ನಷ್ಟು ಜನಪ್ರಿಯಗೊಳಿಸಲು ನಾವು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ” ಎಂದು ನೀತಾ ಅಂಬಾನಿ ಹೇಳಿದ್ದಾರೆ.
“2017 ರಲ್ಲಿ ಫಿಫಾ ಅಂಡರ್ 17 ವಿಶ್ವಕಪ್ ಅನ್ನು ಭಾರತದಲ್ಲಿ ಆಯೋಜಿಸಿದ್ದು ಯುವಕರಲ್ಲಿ ಫುಟ್ಬಾಲ್ ಕಡೆಗೆ ಆಸಕ್ತಿಯನ್ನು ಹುಟ್ಟುಹಾಕಲು ಕಾರಣವಾಗಿದೆ ಮತ್ತು ಫಿಫಾ ಅಂಡರ್ -17 ಮಹಿಳಾ ವಿಶ್ವಕಪ್ 2020 ಈ ಪ್ರಯಾಣವನ್ನು ಇನ್ನಷ್ಟು ವೇಗಗೊಳಿಸುತ್ತದೆ ಎಂದು ನನಗೆ ಭರವಸೆ ಇದೆ” ಎಂದು ನೀತಾ ಹೇಳಿದ್ದಾರೆ.
ಎಐಎಫ್ಎಫ್ ಆಶ್ರಯದಲ್ಲಿ ಆಯೋಜಿಸಲಾಗುವ ಯು-17 ಮಹಿಳಾ ಪಂದ್ಯಾವಳಿಗಳಲ್ಲಿ ನಾಲ್ಕು ತಂಡಗಳ ಸ್ವರೂಪದಲ್ಲಿ 100 ಕ್ಕೂ ಹೆಚ್ಚು ಬಾಲಕಿಯರು ಭಾಗವಹಿಸಲಿದ್ದಾರೆ. ಭಾರತವು ಅಕ್ಟೋಬರ್ 2020 ರಲ್ಲಿ ಫಿಫಾ ಅಂಡರ್ -17 ಮಹಿಳಾ ವಿಶ್ವಕಪ್ ಅನ್ನು ಆಯೋಜಿಸಲಿದೆ. ನವೆಂಬರ್ ಮಧ್ಯದಲ್ಲಿ ಪಂದ್ಯಾವಳಿ ನಡೆಯುವ ನಿರೀಕ್ಷೆ ಇದೆ.
17 ವರ್ಷದೊಳಗಿನವರ ಮಹಿಳಾ ಪಂದ್ಯಾವಳಿಯು ಆಟಗಾರರನ್ನು ಭಾರತೀಯ ತಂಡಕ್ಕೆ ಆಯ್ಕೆ ಮಾಡಲು ಮತ್ತು ಆಟಗಾರರಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶವನ್ನು ಒದಗಿಸುವ ಗುರಿಯನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.