
ನವದೆಹಲಿ: ಶ್ರೀ ಅಮರನಾಥ ಯಾತ್ರೆ 2026 ಜುಲೈ 3ರಿಂದ ಆಗಸ್ಟ್ 28ರವರೆಗೆ (57 ದಿನಗಳ ಕಾಲ) ನಡೆಯಲಿದೆ. ಈ ವರ್ಷದ ಯಾತ್ರೆಯ ಸಿದ್ಧತೆಗಳು ಪೂರ್ಣಗೊಂಡಿದ್ದು, ಭಕ್ತರು ಈಗಾಗಲೇ ಜಮ್ಮುನಲ್ಲಿ ರಿಜಿಸ್ಟ್ರೇಷನ್ ಮಾಡುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಮನವಿ
ಪ್ರಧಾನಿ ನರೇಂದ್ರ ಮೋದಿ ಅವರು ಭಕ್ತರಿಗೆ 5 ಸಂಕಲ್ಪಗಳನ್ನು ಅನುಸರಿಸುವಂತೆ ಮನವಿ ಮಾಡಿದ್ದಾರೆ. ಇದು ಸುರಕ್ಷಿತ, ಸುಸಂಘಟಿತ ಮತ್ತು ಪರಿಸರ ಸ್ನೇಹಿ ಯಾತ್ರೆಗೆ ಸಹಕಾರಿಯಾಗುವಂತೆ ಉದ್ದೇಶಿಸಲಾಗಿದೆ.
ಮೊದಲ ಸಂಕಲ್ಪ: ಅಮರನಾಥ ಯಾತ್ರೆಯ ಸಮಯದಲ್ಲಿ ಸ್ವಚ್ಛತೆಯ ನಿಯಮಗಳನ್ನು ಪಾಲಿಸೋಣ.
ಎರಡನೇ ಸಂಕಲ್ಪ: ಆಡಳಿತದ ಎಲ್ಲಾ ಆದೇಶಗಳು, ಸಂಚಾರ ನಿಯಮಗಳು ಮತ್ತು ಸುರಕ್ಷತಾ ನಿರ್ದೇಶನಗಳನ್ನು ಸಂಪೂರ್ಣ ಸಮರ್ಪಣಾಭಾವದಿಂದ ಪಾಲಿಸೋಣ ಮತ್ತು ಪ್ರತಿಕೂಲ ಹವಾಮಾನದ ನಡುವೆ ಭಕ್ತರು ಜಾರುವ ಹಾದಿಗಳ ಬಗ್ಗೆ ಜಾಗರೂಕರಾಗಿರಬೇಕು.
ಮೂರನೇ ಸಂಕಲ್ಪ : “ವೋಕಲ್ ಫಾರ್ ಲೋಕಲ್ ಮನೋಭಾವದೊಂದಿಗೆ ನಮ್ಮ ಪ್ರಯಾಣ ವೆಚ್ಚದ ಕನಿಷ್ಠ ಶೇಕಡಾ 10 ರಷ್ಟು ಹಣವನ್ನು ಸ್ಥಳೀಯ ಉತ್ಪನ್ನಗಳನ್ನು ಖರೀದಿಸಲು ಖರ್ಚು ಮಾಡೋಣ. ಇದು ಜಮ್ಮು-ಕಾಶ್ಮೀರದ ಕುಟುಂಬಗಳು ಮತ್ತು ಯುವಕರ ಜೀವನೋಪಾಯಕ್ಕೆ ಉತ್ತೇಜನ ನೀಡುತ್ತದೆ” ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.
ನಾಲ್ಕನೇ ಸಂಕಲ್ಪ: ರಕ್ಷಾ ಬಂಧನದಂದು ಮುಕ್ತಾಯಗೊಳ್ಳುವ ಯಾತ್ರೆಯನ್ನು ಪೂರ್ಣಗೊಳಿಸಿದ ನಂತರ ಸಸಿಯನ್ನು ಉಡುಗೊರೆಯಾಗಿ ನೀಡುವ ಮೂಲಕ “ಏಕ್ ಪೇಡ್ ಮಾ ಕೆ ನಾಮ್” ಅಭಿಯಾನದಲ್ಲಿ ಭಾಗವಹಿಸುವಂತೆ ಪ್ರಧಾನಿ ಮೋದಿ ಭಕ್ತರನ್ನು ಒತ್ತಾಯಿಸಿದರು.
ಐದನೇ ಸಂಕಲ್ಪ: ದೈನಂದಿನ ಜೀವನದಲ್ಲಿ ಯಾತ್ರೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು. “ರಾಷ್ಟ್ರ ಮೊದಲು” ಎಂಬ ಭಾವನೆಯೊಂದಿಗೆ, ವರ್ಷವಿಡೀ ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಪೂರೈಸೋಣ ಮತ್ತು ವಿಕ್ಷಿತ ಭಾರತವನ್ನು ನಿರ್ಮಿಸುವಲ್ಲಿ ಸಕ್ರಿಯ ಕೊಡುಗೆ ನೀಡೋಣ” ಎಂದು ಪ್ರಧಾನಿ ಮೋದಿ ಹೇಳಿದರು.
ಇನ್ನೊಂದೆಡೆ ಜೂನ್ 12 ರಂದು ದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಯಾತ್ರೆಯ ಸುರಕ್ಷತಾ ಸಿದ್ಧತೆಗಳನ್ನು ಪರಿಶೀಲಿಸಿದರು. ಮಲ್ಟಿ-ಲೇಯರ್ ಸುರಕ್ಷತಾ ಗ್ರಿಡ್ — ಯಾತ್ರಾ ಮಾರ್ಗದಲ್ಲಿ ಬಹು-ಹಂತದ ಸುರಕ್ಷತಾ ವ್ಯವಸ್ಥೆ. ಡ್ರೋನ್, ಸಿಸಿ ಟಿವಿ ಕ್ಯಾಮೆರಾಗಳು ಮತ್ತು ಆಧುನಿಕ ತಂತ್ರಜ್ಞಾನದ ಬಳಕೆ. ಜಮ್ಮು & ಕಾಶ್ಮೀರ್‌ನ ಇತರ ಪ್ರವಾಸಿ ಸ್ಥಳಗಳಲ್ಲೂ ಸುರಕ್ಷತಾ ಕ್ರಮಗಳನ್ನು ಬಲಪಡಿಸುವಂತೆ ನಿರ್ದೇಶನ ನೀಡಿದರು.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಉನ್ನತ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಭಕ್ತರಿಗೆ ಸುರಕ್ಷಿತ ಮತ್ತು ಸುಗಮ ಯಾತ್ರೆಯನ್ನು ಖಾತರಿಪಡಿಸಲು ಪೂರ್ಣವಾಗಿ ಬದ್ಧವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



