ಶ್ರೀನಗರ: ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಆಗಸ್ಟ್ 5 ರಂದು ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸಿ, ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದಾಗಿನಿಂದ ಇದುವರೆಗೆ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ಥಾನ ಪಡೆಗಳು 222 ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘನೆಗಳನ್ನು ನಡೆಸಿವೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಪಾಕಿಸ್ಥಾನ ಸೇನೆಯು ಈ ವರ್ಷ ಒಟ್ಟು 1,900 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ, 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಕೇವಲ 25 ದಿನಗಳಲ್ಲಿ 222 ಕ್ಕೂ ಹೆಚ್ಚು ಬಾರಿ ಅದು ಕದನ ವಿರಾಮ ಉಲ್ಲಂಘನೆಯನ್ನು ಪುನರಾವರ್ತನೆಗೊಳಿಸಿದೆ.
ಆಗಸ್ಟ್ 5 ರಿಂದ ಪಾಕಿಸ್ಥಾನದ ಸೇನೆಯ ಕದನ ವಿರಾಮ ಉಲ್ಲಂಘನೆಯನ್ನು ನಿರಂತರ ಪ್ರಕ್ರಿಯೆಯನ್ನಾಗಿಸಿಕೊಂಡಿದೆ. ಇದು ಉಭಯ ದೇಶಗಳ ನಡುವೆ ಭಾರೀ ಗುಂಡಿನ ವಿನಿಮಯಕ್ಕೆ ಎಡೆ ಮಾಡಿಕೊಟ್ಟಿದೆ.
ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) ಪ್ರಾಬಲ್ಯ ಸಾಧಿಸುವ ಮತ್ತು ಕಾಶ್ಮೀರ ಸಮಸ್ಯೆಯನ್ನು ಅಂತಾರಾಷ್ಟ್ರೀಕರಿಸುವ ಹತಾಶ ಪ್ರಯತ್ನದ ಭಾಗವಾಗಿ ಪಾಕಿಸ್ಥಾನ ಕದನ ವಿರಾಮ ಉಲ್ಲಂಘನೆಯನ್ನು ಮಾಡುತ್ತಿದೆ. ಮಾತ್ರವಲ್ಲದೇ, ಗಡಿಯ ಮೂಲಕ ಭಾರತದೊಳಗೆ ಭಯೋತ್ಪಾದಕರನ್ನು ನುಸುಳುವಂತೆ ಮಾಡಲೂ ಅದು ಕದನವಿರಾಮ ಉಲ್ಲಂಘನೆಯನ್ನು ಅವಲಂಬಿಸಿದೆ.
ಗುಪ್ತಚರ ಸಂಸ್ಥೆಗಳು ಸಂಗ್ರಹಿಸಿದ ಮಾಹಿತಿಗಳ ಪ್ರಕಾರ, ಪ್ರತಿ ರಾತ್ರಿಯೂ ಪಾಕಿಸ್ಥಾನ ಭಾರತದೊಳಗೆ ಉಗ್ರರನ್ನು ಒಳನುಸುಳಿಸುವ ಪ್ರಯತ್ನಗಳನ್ನು ಮಾಡುತ್ತಿದೆ. ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವುದು ಇದರ ಹಿಂದಿನ ಉದ್ದೇಶವಾಗಿದೆ.
ಪಾಕಿಸ್ಥಾನದಿಂದ ನಡೆಯುವ ಪ್ರತಿಯೊಂದು ಅಪ್ರಚೋದಿತ ಶೆಲ್ ದಾಳಿಗೂ ಭಾರತೀಯ ಸೇನೆಯು ಬಲವಾದ ಪ್ರತಿಕ್ರಿಯೆಯನ್ನು ನೀಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.