ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಕಾರ್ಯಗಳ ಬಗ್ಗೆ ಶ್ಲಾಘನೆಗಳನ್ನು ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರನ್ನು ಮತ್ತೊಬ್ಬ ಕಾಂಗ್ರೆಸ್ ಮುಖಂಡ ಅಭಿಷೇಕ್ ಸಿಂಘ್ವಿ ಬೆಂಬಲಿಸಿದ್ದಾರೆ. ಪ್ರಧಾನಿಯನ್ನು ಟೀಕಿಸುವುದು ತಪ್ಪು ಮತ್ತು ವಿಷಯಾಧಾರಿತವಾಗಿ ಮಾತ್ರ ಟೀಕೆಗಳನ್ನು ಮಾಡಬೇಕೇ ಹೊರತು ವ್ಯಕ್ತಿಗತವಾಗಿ ಮಾಡಬಾರದು ಎಂದು ಸಿಂಘ್ವಿ ಹೇಳಿದ್ದಾರೆ.
ಟ್ವೀಟ್ ಮಾಡಿರುವ ಅವರು, “ಮೋದಿಯನ್ನು ಟೀಕಿಸುವುದು ತಪ್ಪು ಎಂದು ನಾನು ಪ್ರತಿಪಾದಿಸುತ್ತಲೇ ಬಂದಿದ್ದೇನೆ. ಅವರು ದೇಶದ ಪ್ರಧಾನಿ ಎಂಬುದು ಮಾತ್ರವಲ್ಲ, ಏಕ ಮುಖ ವಿರೋಧಗಳು ಅವರಿಗೆ ಲಾಭವಾಗಿ ಪರಿಣಮಿಸುತ್ತಿವೆ ಎಂಬುದು ಕೂಡ ಇಲ್ಲಿ ಮುಖ್ಯ. ಕೆಲಸಗಳು ಕೆಟ್ಟದು, ಒಳ್ಳೆಯದು ಅಥವಾ ಭಿನ್ನವಾಗಿರುವಂತದ್ದು ಏನೇ ಆಗಿರಬಹುದು ಅದನ್ನು ವಿಷಯಾಧಾರಿತವಾಗಿಯೇ ಟೀಕಿಸಬೇಕು. ನಿಜಕ್ಕೂ ಉಜ್ವಲ ಯೋಜನೆ ಇತರ ಅತ್ಯುತ್ತಮವಾದ ಯೋಜನೆಗಳಲ್ಲಿ ಒಂದಾಗಿದೆ” ಎಂದಿದ್ದಾರೆ.
ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಅವರು ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡಿ, ಪ್ರಧಾನಿ ಮೋದಿಯವರ ಆಡಳಿತ ಮಾದರಿಯು “ಸಂಪೂರ್ಣವಾಗಿ ನಕಾರಾತ್ಮಕ ಕಥೆಯಲ್ಲ ಮತ್ತು ಅವರ ಕೆಲಸವನ್ನು ಗುರುತಿಸದೆ ಇರುವುದು ಮತ್ತು ಎಲ್ಲಾ ಸಮಯದಲ್ಲೂ ಅವರನ್ನು ಟೀಕಿಸುವುದು ನಮಗೆ ಸಹಾಯ ಮಾಡುವುದಿಲ್ಲ” ಎಂದು ಹೇಳಿದ್ದರು.
ಈ ಟ್ವೀಟ್ ಮೂಲಕ ಸಿಂಘ್ವಿ ಅವರು ಜೈರಾಮ್ ರಮೇಶ್ ಅವರ ಅಭಿಪ್ರಾಯಗಳಿಗೆ ಸಹಮತವನ್ನು ವ್ಯಕ್ತಪಡಿಸಿದ್ದಾರೆ.
Always said demonising #Modi wrong. No only is he #PM of nation, a one way opposition actually helps him. Acts are always good, bad & indifferent—they must be judged issue wise and nt person wise. Certainly, #ujjawala scheme is only one amongst other good deeds. #Jairamramesh
— Abhishek Singhvi (@DrAMSinghvi) August 23, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.