ನವದೆಹಲಿ: ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರವು ಯೋಧರ ಕಲ್ಯಾಣಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ 1 ಕೋಟಿ ರೂಗಳನ್ನು ಹಸ್ತಾಂತರ ಮಾಡಿದೆ.
ವಿವೇಕಾನಂದ ಕೇಂದ್ರವು ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣಕ್ಕಾಗಿ 2015 ರ ಸಾಲಿನ ಪ್ರಶಸ್ತಿಯನ್ನು ಪಡೆದುಕೊಂಡಿದೆ. ವಿವೇಕಾನಂದ ಕೇಂದ್ರವು ಈಶಾನ್ಯ ರಾಜ್ಯಗಳಲ್ಲಿ ಅದರಲ್ಲೂ ಪ್ರಮುಖವಾಗಿ ಅರುಣಾಚಲ ಪ್ರದೇಶದ ಕುಗ್ರಾಮಗಳಲ್ಲಿ ನಡೆಸಿದ ಶ್ಲಾಘನೀಯ ಸಾಮಾಜಿಕ ಕಾರ್ಯಗಳನ್ನು ಪರಿಗಣಿಸಿ ಅದಕ್ಕೆ ಗಾಂಧಿ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿಯೂ ರೂ. 1 ಕೋಟಿ ನಗದು ಪುರಸ್ಕಾರವನ್ನು ಒಳಗೊಂಡಿದೆ.
ಈ ಪ್ರಶಸ್ತಿ ಮೊತ್ತವನ್ನು ವಿವೇಕಾನಂದ ಕೇಂದ್ರವು ರಕ್ಷಣಾ ಸಿಬ್ಬಂದಿಗಳ ಕಲ್ಯಾಣಕ್ಕಾಗಿ ದಾನ ಮಾಡಿದೆ. ಕೇಂದ್ರದ ಅಧ್ಯಕ್ಷೆ ನಿವೇದಿತಾ ಭಿಂದೆ, ಉಪಾಧ್ಯಕ್ಷ ಎ.ಬಾಲಕೃಷ್ಣನ್ ರೂ.1 ಕೋಟಿ ಚೆಕ್ ಅನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಹಸ್ತಾಂತರ ಮಾಡಿದ್ದಾರೆ.
ಕನ್ಯಾಕುಮಾರಿ ವಿವೇಕಾನಂದ ಕೇಂದ್ರದ ಈ ಪ್ರೇರಣಾದಾಯಕ ಕಾರ್ಯಕ್ಕೆ ಬಿಜೆಪಿ ಹಿರಿಯ ಮುಖಂಡ ರಾಮ್ ಮಾಧವ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದು, “ಅರುಣಾಚಲ ಪ್ರದೇಶದಂತಹ ಊರುಗಳಲ್ಲಿ ಸಾಮಾಜಿಕ ಸೇವೆ ಮಾಡಲು ಸವಾಲುಗಳನ್ನು ಎದುರಿಸುವ ಕನ್ಯಾಕುಮಾರಿ ವಿವೇಕಾನಂದ ಕೇಂದ್ರವು ತನಗೆ ಸಿಕ್ಕ ಪ್ರಶಸ್ತಿ ಮೊತ್ತವನ್ನು ಯೋಧರ ಕಲ್ಯಾಣಕ್ಕಾಗಿ ನೀಡಿದೆ. ಅದರ ಈ ನಾಯಕತ್ವದ ಪ್ರೇರಣೆಗೆ ನಮ್ಮ ಸೆಲ್ಯೂಟ್” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.