ಶ್ರೀನಗರ: ಜೇನುಸಾಕಣೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹಳೆಯ ಸಂಪ್ರದಾಯವಾಗಿದೆ. ವೈಜ್ಞಾನಿಕ ಮಧ್ಯಪ್ರವೇಶಗಳಿಂದಾಗಿ, ಇದು ರಾಜ್ಯದಲ್ಲಿ ಲಾಭದಾಯಕ ವ್ಯವಹಾರವಾಗಿ ಹೊರಹೊಮ್ಮುತ್ತಿದೆ, ಸ್ಥಳೀಯರಿಗೆ ಹೆಚ್ಚಿನ ಆದಾಯ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
ಪ್ರವಾಸೋದ್ಯಮ ಕ್ಷೇತ್ರವು ಕೂಡ ಜೇನುಸಾಕಣೆಯೊಂದಿಗೆ ರಾಜ್ಯದಲ್ಲಿ ಉತ್ತಮ ಉತ್ತೇಜನವನ್ನು ಕಾಣುತ್ತಿದೆ. ದೋಡಾ ಜಿಲ್ಲೆಯ ಭದರ್ವಾ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಾದ ಭಲ್ಲಾ ಮತ್ತು ಸಾರ್ಥಾಲಗಳು ಜೇನುಹುಳು ಪ್ರವಾಸೋದ್ಯಮದ ತಾಣಗಳಾಗಿವೆ. ಈ ಪ್ರದೇಶಗಳು ಹೇರಳವಾಗಿ ಹೂಬಿಡುವ ಸಸ್ಯಗಳನ್ನು ಹೊಂದಿರುವುದರಿಂದ ಇಲ್ಲಿ ಜೇನುಸಾಕಾಣಿಕೆ ಯಶಸ್ಸನ್ನು ಕಾಣುತ್ತಿದೆ. ಜೇನು ಸಾಕಾಣಿಕೆಗೆ ಇಂತಹ ಸಸ್ಯಗಳು ಅತ್ಯವಶ್ಯಕವಾಗಿವೆ.
ಇಲ್ಲಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಪ್ರಕೃತಿಯ ಮಡಿಲಲ್ಲಿ ವಿಶ್ರಾಂತಿಯನ್ನು ಪಡೆಯುವುದು ಮತ್ತು ಜೇನು ಸಾಕಾಣಿಕೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದು ಅವರ ಪ್ರವಾಸದ ಆದ್ಯತೆಯಾಗಿರುತ್ತದೆ.
ಜೇನುಸಾಕಣೆಯು ಜೇನುತುಪ್ಪ ಮತ್ತು ಜೇನು ತತ್ತಿಯನ್ನು ಉತ್ಪಾದಿಸುವುದಲ್ಲದೇ ಪರಾಗಸ್ಪರ್ಶ ಪ್ರಕ್ರಿಯೆಯ ಮೂಲಕ ಬೆಳೆ-ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುವ ಏಕೈಕ ಉದ್ಯಮವಾಗಿದೆ.
ಈ ಉದ್ಯಮಕ್ಕೆ ಮಕರಂದ ಮತ್ತು ಹೂವುಗಳಿಂದ ಪರಾಗ ರೂಪದಲ್ಲಿ ಸಿಗುವ ವಸ್ತುಗಳನ್ನು ಹೊರತುಪಡಿಸಿ ಬೇರಾವ ಹೆಚ್ಚಿನ ಹೂಡಿಕೆಯನ್ನು ಮಾಡುವ ಅಗತ್ಯವಿಲ್ಲ. ಮಕರಂದಗಳು ಜಮ್ಮು ಮತ್ತು ಕಾಶ್ಮೀರದ ನೈಸರ್ಗಿಕ ಪರಿಸರದಲ್ಲಿ ಸುಲಭವಾಗಿ ಲಭ್ಯವಿದೆ. ಇದಲ್ಲದೆ, ದೊಡ್ಡ ಪ್ರಮಾಣದ ಕಾಡುಗಳ ಉಪಸ್ಥಿತಿ ಮತ್ತು ಕೀಟನಾಶಕಗಳ ಸಿಂಪಡನೆ ಮಾಡದೇ ಇರುವುದರಿಂದ ಸಾವಯವ ಜೇನುತುಪ್ಪದ ಉತ್ಪಾದನೆಗೆ ಅನುಕೂಲಕರ ವಾತಾವರಣ ಇಲ್ಲಿ ಹೇರಳವಾಗಿ ಲಭ್ಯವಿದೆ.
ನೈಸರ್ಗಿಕ ಸಂಪನ್ಮೂಲಗಳ ಲಭ್ಯತೆಯ ಅನುಕೂಲವನ್ನು ಪಡೆದು ಜೇನು ಉದ್ಯಮವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಾರ್ಥಾಲ್ನಲ್ಲಿನ ಜೇನುಸಾಕಣೆದಾರರು ಉತ್ತಮ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅವರು ದೇಶೀಯವಾದ ಜೇನುಹುಳುಗಳನ್ನೇ ಬಳಕೆ ಮಾಡುತ್ತಾರೆ. ಸ್ಥಳಿಯ ಜೇನುಹುಳ ‘ಆಪಿಸ್ ಸೆರೆನಾ ಇಂಡಿಕಾ’ವನ್ನು ಇಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಇದು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ, ಯಾಕೆಂದರೆ ಅವುಗಳು ಹಲವಾರು ವಿಧದ ಹಣ್ಣುಗಳು ಮತ್ತು ಬೆಳೆಗಳಿಗೆ ನೈಸರ್ಗಿಕ ಪರಾಗಸ್ಪರ್ಶಕಗಳಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.