ನವದೆಹಲಿ: ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರಿಗೆ ಶುಕ್ರವಾರ (ಆಗಸ್ಟ್ 2) ರಾಜತಾಂತ್ರಿಕ ಸಂಪರ್ಕವನ್ನು ಒದಗಿಸಲು ಅನುವು ಮಾಡಿಕೊಡುವುದಾಗಿ ಪಾಕಿಸ್ಥಾನ ಹೇಳಿದೆ. ಪಾಕಿಸ್ಥಾನದ ವಿದೇಶಾಂಗ ವ್ಯವಹಾರಗಳ ವಕ್ತಾರರು ಈ ಬಗ್ಗೆ ಘೋಷಣೆ ಮಾಡಿದ್ದು, ಭಾರತದ ಪ್ರತಿಕ್ರಿಯೆಗಾಗಿ ಕಾಯುತ್ತಿರುವುದಾಗಿ ಅವರು ಹೇಳಿದ್ದಾರೆ.
ಅಂತಾರಾಷ್ಟ್ರೀಯ ನ್ಯಾಯಾಲಯವು ಇತ್ತೀಚಿಗೆ ಜಾಧವ್ ಅವರಿಗೆ ಪಾಕಿಸ್ಥಾನದ ಮಿಲಿಟರಿ ನ್ಯಾಯಾಲಯ ಘೋಷಿಸಿದ್ದ ಮರಣದಂಡನೆಯನ್ನು ರದ್ದುಗೊಳಿಸಿ, ಅವರಿಗೆ ರಾಜತಾಂತ್ರಿಕ ನೆರವನ್ನು ನೀಡಬೇಕು ಎಂದು ಆದೇಶಿಸಿತ್ತು. ಈ ಹಿನ್ನಲೆಯಲ್ಲಿ ಪಾಕಿಸ್ಥಾನ ಜಾಧವ್ ಅವರಿಗೆ ರಾಜತಾಂತ್ರಿಕ ಸಂಪರ್ಕವನ್ನು ಒದಗಿಸಲು ಮುಂದಾಗಿದೆ.
“ಅಂತಾರಾಷ್ಟ್ರೀಯ ನ್ಯಾಯಾಲಯದ ನಿರ್ಧಾರಕ್ಕೆ ಅನುಗುಣವಾಗಿ, ಕಮಾಂಡರ್ ಕುಲಭೂಷಣ್ ಜಾಧವ್ ಅವರಿಗೆ ವಿಯೆನ್ನಾ ಕನ್ವೆನ್ಷನ್ ಆರ್ಟಿಕಲ್ 36, ಪ್ಯಾರಾಗ್ರಾಫ್ 1 (ಬಿ) ಅಡಿಯಲ್ಲಿ ತಮ್ಮ ಹಕ್ಕುಗಳ ಬಗ್ಗೆ ತಿಳಿಸಲಾಗಿದೆ. ಜವಾಬ್ದಾರಿಯುತ ರಾಜ್ಯವಾಗಿ ಪಾಕಿಸ್ಥಾನವು ತನ್ನ ಕಾನೂನುಗಳ ಪ್ರಕಾರ ಜಾಧವ್ ಅವರಿಗೆ ರಾಜತಾಂತ್ರಿಕ ಸಂಪರ್ಕವನ್ನು ಒದಗಿಸಲಿದೆ, ಇದಕ್ಕಾಗಿ ವಿಧಾನಗಳನ್ನು ರೂಪಿಸಲಾಗುತ್ತಿದೆ ”ಎಂದು ಪಾಕಿಸ್ಥಾನ ವಿದೇಶಾಂಗ ಕಚೇರಿ ಜುಲೈ 19 ರಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಜಾಧವ್ ಅವರನ್ನು ಗೂಢಚರ್ಯದ ಆರೋಪದ ಮೇರೆಗೆ ಬಂಧಿಸಿರುವ ಪಾಕಿಸ್ಥಾನವು ಅವರಿಗೆ ಮರಣದಂಡನೆಯನ್ನು ವಿಧಿಸಲು ಮುಂದಾಗಿತ್ತು. ಆದರೆ ಈ ನಿರ್ಧಾರವನ್ನು ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಈ ನ್ಯಾಯಾಲಯದಲ್ಲಿ ಮುಖಭಂಗ ಅನುಭವಿಸಿರುವ ಪಾಕಿಸ್ಥಾನ ಈಗ ರಾಜತಾಂತ್ರಿಕ ನೆರವನ್ನು ನೀಡಲು ಆಫರ್ ನೀಡುವ ಮೂಲಕ ಒಳ್ಳೆಯವನಂತೆ ವರ್ತಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.