ನವದೆಹಲಿ: ಜುಲೈ 26 ರಂದು ಸಿಂಗಾಪುರದಿಂದ ಬಂದ ವಿಶೇಷ ಒಲಿಂಪಿಕ್ಸ್ ಜ್ಯೋತಿ (Special Olympic Torch) ಅನ್ನು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜ್ಜು ದೆಹಲಿಯಲ್ಲಿ ಸ್ವೀಕರಿಸಿದ್ದಾರೆ.
ನವದೆಹಲಿಯಲ್ಲಿ ವಿಶೇಷ ಒಲಿಂಪಿಕ್ಸ್ ಅಂತಾರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ಶಿಪ್ (Special Olympics International Football Championship) ನ ಅಧ್ಯಕ್ಷ ಡಾ. ಅಮರ್ ಪ್ರಸಾದ್ ರೆಡ್ಡಿ ಅವರಿಂದ ಸಚಿವರು ವಿಶೇಷ ಒಲಿಂಪಿಕ್ಸ್ ಜ್ಯೋತಿಯನ್ನು ಪಡೆದುಕೊಂಡರು. ವಿಶೇಷ ಒಲಿಂಪಿಕ್ಸ್ ಚಾಂಪಿಯನ್ಶಿಪ್ ಆಗಸ್ಟ್ 3 ರಿಂದ ಆಗಸ್ಟ್ 6 ರವರೆಗೆ ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕಿರಣ್ ರಿಜ್ಜು, “ಮಾನವರಿಗೆ ಕ್ರೀಡೆ ಇಲ್ಲದ ಜೀವನ ಅಪೂರ್ಣವಾಗಿರುತ್ತದೆ. ಚೆನ್ನೈನಲ್ಲಿ ನಡೆಯುವ ವಿಶೇಷ ಒಲಿಂಪಿಕ್ಸ್ ಮತ್ತು ಅಂತಾರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ಶಿಪ್ಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದರು. ಈ ವೇಳೆ ಅಬುಧಾಬಿ ಗೇಮ್ಸ್ನಲ್ಲಿ ವಿಜೇತರಾದವರಿಗೆ ನಗದು ಬಹುಮಾನವನ್ನೂ ಸಚಿವರು ಘೋಷಿಸಿದರು.
ಟ್ವಿಟ್ ಮಾಡಿರುವ ಸಚಿವರು, “ನಾನು ಇಂದು ದೆಹಲಿಯಲ್ಲಿ ವಿಶೇಷ ಒಲಿಂಪಿಕ್ ಜ್ಯೋತಿ ಅನ್ನು ಸ್ವೀಕರಿಸಿ ಮತ್ತು ‘ಭರವಸೆಯ ಜ್ಯೋತಿ’ಯನ್ನು ಬೆಳಗಿಸಿ ಪುಳಕಿತಗೊಂಡಿದ್ದೇನೆ. ಈ ವಿಶೇಷ ಒಲಿಂಪಿಕ್ಸ್ ವಿಶೇಷ ಮಾನಸಿಕ ಸಾಮರ್ಥ್ಯ ಹೊಂದಿರುವವರಿಗೆ ತಮ್ಮ ದೇಶವನ್ನು ಪ್ರತಿನಿಧಿಸುವ ಅವಕಾಶವನ್ನು ನೀಡುತ್ತದೆ. ನಮ್ಮ ವಿಶೇಷ ಕ್ರೀಡಾಪಟುಗಳಿಗೆ ನಾವು ಎಲ್ಲಾ ಬೆಂಬಲವನ್ನು ನೀಡುತ್ತೇವೆ” ಎಂದಿದ್ದಾರೆ.
I’m excited to receive the Special Olympic torch in Delhi today and lit the ‘Flame of Hope’. The Special #Olympics gives hope to those with special mental abilities a chance to represent their country. We will extend all support to our special athletes. pic.twitter.com/AEBTfwAGGA
— Kiren Rijiju (@KirenRijiju) July 26, 2019
ವಿಶೇಷ ಒಲಿಂಪಿಕ್ಸ್ ವಿಶೇಷ ಮಾನಸಿಕ ಸಾಮರ್ಥ್ಯ ಹೊಂದಿರುವವರಿಗಾಗಿನ ಒಲಿಂಪಿಕ್ಸ್ ಆಗಿದೆ. ಈ ಬಾರಿ ಇದು ಭಾರತದಲ್ಲಿ ಆಯೋಜನೆಗೊಳ್ಳುತ್ತಿದೆ. ಈ ವಿಶೇಷ ಒಲಿಂಪಿಕ್ಸ್ ಜ್ಯೋತಿ, ಧೈರ್ಯ ಮತ್ತು ವೈವಿಧ್ಯತೆಯ ಆಚರಣೆಯೊಂದಿಗೆ ಜಗತ್ತಿನಾದ್ಯಂತ ಸಮುದಾಯಗಳನ್ನು ಒಂದುಗೂಡಿಸುತ್ತದೆ. ಅದನ್ನು ಬೆಳಗಿಸುವುದು ಕ್ರಿಯೆಯ ಕರೆಯನ್ನು, ಬೌದ್ಧಿಕವಾಗಿ ವಿಭಿನ್ನ ಸಾಮರ್ಥ್ಯ ಹೊಂದಿರುವವರನ್ನು ಸಮಾಜದಲ್ಲಿ ಸೇರ್ಪಡೆಗೊಳಿಸುವುದನ್ನು ಉತ್ತೇಜಿಸಲು ಮತ್ತು ಅವರ ವಿಶಿಷ್ಟ ಸಾಮರ್ಥ್ಯಗಳನ್ನು ಆಚರಿಸುವುದನ್ನು ಸಾಂಕೇತಿಕರಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.