ನವದೆಹಲಿ: ಕಾರ್ಗಿಲ್ ವಿಜಯ್ ದಿವಸ್ನ 20ನೇ ವರ್ಷಾಚರಣೆಯ ಪ್ರಯುಕ್ತ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ದೇಶ ಕಾಯುವ ಯೋಧರ ಶೌರ್ಯವನ್ನು ಕೊಂಡಾಡಿದ್ದಾರೆ.
ಟ್ವೀಟ್ ಮಾಡಿರುವ ಕೋವಿಂದ್, ” ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಈ ಕೃತಜ್ಞ ರಾಷ್ಟ್ರವು 999 ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ನಮ್ಮ ಸೇನಾ ಪಡೆಯ ಯೋಧರ ಶೌರ್ಯವನ್ನು ಸ್ಮರಿಸುತ್ತದೆ. ದೇಶವನ್ನು ಕಾಯುವ ವೀರಯೋಧರ ಸಾಹಸ ಮತ್ತು ಶೌರ್ಯಕ್ಕೆ ನಮ್ಮ ಸೆಲ್ಯೂಟ್ ಇದೆ. ಅವರ ಋಣವನ್ನು ನಾವೆಂದಿಗೂ ಸಂದಾಯ ಮಾಡಲು ಸಾಧ್ಯವಿಲ್ಲ. ಜೈ ಹಿಂದ್” ಎಂದಿದ್ದಾರೆ.
On Kargil Vijay Diwas, a grateful nation acknowledges the gallantry of our Armed Forces on the heights of Kargil in 1999.
We salute the grit and valour of those who defended India, and record our everlasting debt to those who never returned.
Jai Hind! 🇮🇳 #PresidentKovind
— President of India (@rashtrapatibhvn) July 26, 2019
ಇಂದು ರಾಷ್ಟ್ರಪತಿಗಳು ಜಮ್ಮು-ಕಾಶ್ಮೀರದ ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ ಹುತಾತ್ಮರಾದ ಯೋಧರಿಗೆ ಗೌರವ ನಮನ ಸಲ್ಲಿಸಲಿದ್ದಾರೆ.
1999ರ ಜೂನ್ 26ರಂದು ಭಾರತವು ಪಾಕಿಸ್ತಾನ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ವಿಜಯವನ್ನು ಸಾಧಿಸಿತು ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಜುಲೈ 26 ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.