ಲೇಹ್: ಕಾರ್ಗಿಲ್ ವಿಜಯದ ನೆನಪಿನ ಹೆಮ್ಮೆಯ ಸಂಕೇತ ‘ವಿಜಯ ಜ್ಯೋತಿ’ ಇಂದು ಲೇಹ್ನ ಕರುವನ್ನು ತಲುಪಿದೆ. ಜಿಒಸಿ ತ್ರಿಶೂಲ್ 3 ಡಿವಿಶನ್ ಮೇಜರ್ ಜನರಲ್ ಸಂಜೀವ್ ರಾಯ್ ಅವರು ಕರು ಪರೇಡ್ ಮೈದಾನದಲ್ಲಿ ವಿಜಯ ಜ್ಯೋತಿಯನ್ನು ಪೂರ್ಣ ಗೌರವದಿಂದ ಸ್ವೀಕರಿಸಿದರು. ಈ ವರ್ಷ ಆಪರೇಷನ್ ವಿಜಯ್ನ 20 ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ.
ಕಠಿಣ ಭೂಪ್ರದೇಶ, ಪ್ರತಿಕೂಲ ಹವಾಮಾನ ಮತ್ತು ಭಾರೀ ಎತ್ತರವನ್ನು ಲೆಕ್ಕಿಸದೆ ಭಾರತಕ್ಕೆ ವಿಜಯವನ್ನು ಪ್ರಾಪ್ತಿಸಿಕೊಟ್ಟ ನೂರಾರು ಯೋಧರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಿ ಗೌರವಿಸುವ ಸಲುವಾಗಿ ಆಪರೇಷನ್ ವಿಜಯವನ್ನು ಆಚರಿಸಲಾಗುತ್ತಿದೆ.
ಸಂಭ್ರಮಾಚರಣೆಯ ಪ್ರಮುಖ ಭಾಗವಾಗಿ, ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಿಂದ ವಿಜಯ ಜ್ಯೋತಿಯನ್ನು ದ್ರಾಸ್ನಲ್ಲಿನ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಕೊಂಡೊಯ್ಯಲಾಗುತ್ತಿದೆ. ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರು ದೆಹಲಿಯ ಯುದ್ಧ ಸ್ಮಾರಕದಲ್ಲಿ ವಿಜಯ ಜ್ಯೋತಿಯನ್ನು ಬೆಳಗಿಸಿ ಏಸ್ ಆರ್ಮಿ ಶೂಟರ್ ಸುಬೇದಾರ್ ಜಿತು ರಾಯ್ ಅವರಿಗೆ ಹಸ್ತಾಂತರಿಸಿದ್ದರು. ವಿಜಯ ಜ್ಯೋತಿ ಕಾರ್ಗಿಲ್ ಯುದ್ಧ ಹುತಾತ್ಮರ ಆತ್ಮಗಳ ಒಗ್ಗೂಡಿಸುವಿಕೆಯನ್ನು ಸಂಕೇತಿಸುತ್ತದೆ.
ಭಾರತೀಯ ಸೇನೆಯು ಮಾತೃಭೂಮಿಗೆ ಸರ್ವೋಚ್ಚ ತ್ಯಾಗ ಮಾಡಿದ ಅಮರದ ಸಮಗ್ರತೆ, ಧೈರ್ಯ ಮತ್ತು ವೈಭವದಿಂದ ಪ್ರೇರಣೆಯನ್ನು ಪಡೆದು ವಿಜಯ ಜ್ಯೋತಿಯನ್ನು ವಿನ್ಯಾಸಪಡಿಸಲಾಗಿದೆ. ಈ ಜ್ಯೋತಿ ತಾಮ್ರ, ಹಿತ್ತಾಳೆ ಮತ್ತು ಮರದಿಂದ ಮಾಡಲ್ಪಟ್ಟಿದೆ, ಇದು ನಮ್ಮ ಹುತಾತ್ಮ ವೀರರ ಸ್ಥಿರತೆ ಮತ್ತು ದೃಢತೆಯನ್ನು ಸಂಕೇತಿಸುತ್ತದೆ. ಜ್ಯೋತಿಯ ಮೇಲಿನ ಭಾಗವು ಅಮರ್ ಜವಾನ್ ಎಂಬ ಲೋಹದ ಬರಹವನ್ನು ಹೊಂದಿದೆ. ಜ್ಯೋತಿಯ ಕೆಳಗಿನ ಮರದ ಭಾಗವು ಅಮರ್ ಜವಾನ್ನ 20 ಚಿನ್ನದ ಉಬ್ಬು ಬರಹಗಳನ್ನು ಹೊಂದಿದೆ, ಇದು ಕಾರ್ಗಿಲ್ ವಿಜಯದ 20 ಅದ್ಭುತ ವರ್ಷಗಳನ್ನು ಉದಾಹರಣೆಯಾಗಿ ತೋರಿಸುತ್ತದೆ.
ಇದು ಉತ್ತರ ಭಾರತದ 9 ನಗರಗಳನ್ನು ಸುತ್ತಿ ಕೊನೆಗೆ ಜುಲೈ 26ರಂದು ದ್ರಾಸ್ನಲ್ಲಿನ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಶಾಶ್ವತ ಜ್ಯೋತಿಯೊಂದಿಗೆ ವಿಲೀನವಾಗಲಿದೆ. ಪ್ರಸ್ತುತ ಈ ವಿಜಯ ಜ್ಯೋತಿ ಲೇಹ್ನ ಕರುವಿಗೆ ಬಂದು ತಲುಪಿದೆ.
ಈ ಬಾರಿಯ ಕಾರ್ಗಿಲ್ ವಿಜಯ್ ದಿವಸ್ ಅನ್ನು ‘ಸ್ಮರಿಸಿ, ಸಂಭ್ರಮಿಸಿ ಮತ್ತು ನವೀಕರಿಸಿ’ ಎಂಬ ಥೀಮ್ನೊಂದಿಗೆ ಆಚರಿಸಲಾಗುತ್ತಿದೆ. ಜುಲೈ ತಿಂಗಳ ಆರಂಭದಿಂದಲೇ ವಿಜಯೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಜರುಗುತ್ತಿವೆ. ಪ್ರಮುಖ ಸಮಾರಂಭ ಜುಲೈ 27 ರಂದು ಜರುಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.