ವಾಷಿಂಗ್ಟನ್: ಭಾರತದ ಚಂದ್ರಯಾನ -2 ಉಡಾವಣೆಯನ್ನು ಯಶಸ್ವಿಗೊಳಿಸಿರುವ ಭಾರದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋಗೆ ಜಾಗತಿಕ ವಲಯದಿಂದ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ. ಅಮೆರಿಕಾದ ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಆಡ್ಮಿನಿಸ್ಟ್ರೇಶನ್ (ನಾಸಾ) ಎರಡನೇ ಚಂದ್ರಯಾನ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪ್ರಾರಂಭಿಸಿದ್ದಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗೆ ಅಭಿನಂದನೆಯನ್ನು ತಿಳಿಸಿದೆ.
ಚಂದ್ರನ ದಕ್ಷಿಣ ಧ್ರುವದ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಮಾಡಲಿರುವ ಅನ್ವೇಷಣೆಗಳ ಬಗ್ಗೆ ತಿಳಿದುಕೊಳ್ಳಲು ಕಾತುರದಿಂದ ಎದುರು ನೋಡುತ್ತಿರುವುದಾಗಿ ನಾಸಾ ಹೇಳಿದೆ.
ನಾಸಾ ಮಾತ್ರವಲ್ಲದೇ, ಚಂದ್ರಯಾನ 2 ಯಶಸ್ವಿ ಉಡಾವಣೆಗಾಗಿ ಜಾಗತಿಕ ಮಾಧ್ಯಮಗಳೂ ಇಸ್ರೋವನ್ನು ಶ್ಲಾಘಿಸಿವೆ.
ಟ್ವಿಟ್ ಮಾಡಿರುವ ನಾಸಾ, “ಚಂದ್ರನನ್ನು ಅಧ್ಯಯನ ಮಾಡುವ ಮಿಷನ್ ಚಂದ್ರಯಾನ್ 2 ಅನ್ನು ಪ್ರಾರಂಭಿಸಿದಕ್ಕಾಗಿ ಇಸ್ರೋಗೆ ಅಭಿನಂದನೆಗಳು. ನಮ್ಮ ಡೀಪ್ ಸ್ಪೇಸ್ ನೆಟ್ವರ್ಕ್ ಅನ್ನು ಬಳಸಿಕೊಂಡು ನಿಮ್ಮ ಮಿಷನ್ಗೆ ಬೆಂಬಲಿಸಲು ನಾವು ಹೆಮ್ಮೆಪಡುತ್ತೇವೆ ಮತ್ತು ಚಂದ್ರನ ದಕ್ಷಿಣದ ಬಗ್ಗೆ ನೀವು ಏನು ಕಲಿಯುತ್ತೀರಿ ಎಂದು ಎದುರು ನೋಡುತ್ತೇವೆ. ಕೆಲವೇ ವರ್ಷಗಳಲ್ಲಿ ನಮ್ಮ ಆರ್ಟೆಮಿಸ್ ಮಿಷನ್ನಲ್ಲಿ ಗಗನಯಾತ್ರಿಗಳನ್ನು ನಾವು ದಕ್ಷಿಣ ಧ್ರುವಕ್ಕೆ ಕಳಿಸಲಿದ್ದೇವೆ” ಎಂದಿದೆ.
Congrats to @ISRO on the launch of Chandrayaan 2, a mission to study the Moon. We’re proud to support your mission comms using our Deep Space Network and look forward to what you learn about the lunar South pole where we will send astronauts on our #Artemis mission in a few years pic.twitter.com/dOcWBX3kOE
— NASA (@NASA) July 22, 2019
ಇಸ್ರೋದ ಶಕ್ತಿಯುತ ರಾಕೆಟ್ GSLV MkIII M1 ಮಧ್ಯಾಹ್ನ 2.43 ಕ್ಕೆ ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಿಂದ ಮೇಲಕ್ಕೆ ಯಶಸ್ವಿಯಾಗಿ ಚಿಮ್ಮಿದೆ. 48 ದಿನಗಳಲ್ಲಿ ಅದು ಚಂದ್ರನ ದಕ್ಷಿಣ ಧ್ರುವವನ್ನು ತಲುಪಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, 1 ಸಾವಿರ ಕೋಟಿ ರೂಪಾಯಿ ವೆಚ್ಚವಾಗಿದೆ.
ಚಂದ್ರನಲ್ಲಿಗೆ ನೌಕೆ ಕಳುಹಿಸುತ್ತಿರುವ ಸಾಧನೆ ಮಾಡಿದ ಜಗತ್ತಿನ 4ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇಲ್ಲಿಯವರೆಗೆ ಅಮೆರಿಕ, ರಷ್ಯಾ, ಚೀನಾ ಮಾತ್ರ ಈ ಪ್ರಯೋಗದಲ್ಲಿ ಯಶಸ್ವಿಯಾಗಿಸಿವೆ. ಈ ಸಾಲಿಗೆ ಈಗ ಭಾರತ ಸೇರಲಿದೆ. ಚಂದ್ರಯಾನ-2ರ ಪ್ರತಿಯೊಂದು ಹಂತಗಳು ಯಶಸ್ವಿಯಾಗುತ್ತಿದ್ದಂತೆ ವಿಜ್ಞಾನಿಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.