ನವದೆಹಲಿ: ಪಶ್ಚಿಮಬಂಗಾಳದ ಟಿವಿ ತಾರೆಯರ ದೊಡ್ಡ ತಂಡವೇ ಗುರುವಾರ ಬಿಜೆಪಿಗೆ ಸೇರ್ಪಡೆಗೊಂಡಿದೆ. ಇದು ಅಲ್ಲಿನ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹೊಡೆತ ನೀಡಿದೆ.
ಹದಿಮೂರು ನಟ ನಟಿಯರು ಕೋಲ್ಕತ್ತಾದಿಂದ ದೆಹಲಿಗೆ ಪ್ರಯಾಣಿಸಿ, ಬಿಜೆಪಿ ಕೇಂದ್ರ ಕಛೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿಯ ಕೇಸರಿ, ಹಸಿರು ಶಾಲು ಹೊದಿಸಿ ಮಾಧ್ಯಮಗಳ ಮುಂದೆ ಫೋಸ್ ನೀಡಿದ್ದಾರೆ. ಈ ವೇಳೆ ಮಾತನಾಡಿದ ಬಿಜೆಪಿಯ ಬಂಗಾಳ ಮುಖ್ಯಸ್ಥ ದಿಲೀಪ್ ಘೋಷ್ ಅವರು, “ಈ ದಿನಗಳಲ್ಲಿ ಬಂಗಾಳದಲ್ಲಿ ಬಿಜೆಪಿಗೆ ಸೇರುವುದು ಅಪಾಯಕಾರಿ. ರಾಜ್ಯದ ಆಡಳಿತ ಪಕ್ಷವು ಬಿಜೆಪಿ ಸದಸ್ಯರಿಗೆ ಬೆದರಿಸುತ್ತಿದೆ ಮತ್ತು ಕಿರುಕುಳ ನೀಡುತ್ತಿದೆ” ಎಂದು ಆರೋಪಿಸಿದ್ದಾರೆ.
ಅಲ್ಲದೇ, “ನಾವು ತಾರೆಯರ ಧೈರ್ಯಕ್ಕೆ ತಲೆಬಾಗುತ್ತೇವೆ, ಈ ಸಂದರ್ಭಗಳಲ್ಲಿ ಅವರು ನಮ್ಮೊಂದಿಗೆ ಸೇರಲು ಯೋಚಿಸಿದ್ದು ನಿಜಕ್ಕೂ ಮೆಚ್ಚುವಂತಹ ಕಾರ್ಯ” ಎಂದು ಘೋಷ್ ಹೇಳಿದ್ದಾರೆ.
ಬಂಗಾಳಿ ಟಿವಿ ಧಾರವಾಹಿ ಮತ್ತು ಚಲನಚಿತ್ರಗಳ ಜಗತ್ತಿನಲ್ಲಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿರುವ, ರಿಷಿ ಕೌಶಿಕ್, ಪಾರ್ನೊ ಮಿತ್ರ, ಕಾಂಚನಾ ಮೊಯಿತ್ರಾ, ರೂಪಂಜನ ಮಿತ್ರ, ಬಿಸ್ವಾಜಿತ್ ಗಂಗೂಲಿ, ದೇಬ್ ರಂಜನ್ ನಾಗ್, ಅರಿಂದಮ್ ಹಾಲ್ಡರ್, ಮೌಮಿತಾ ಗುಪ್ತಾ, ಅನಿಂದ್ಯಾ ಬ್ಯಾನರ್ಜಿ, ಸೌರವ್ ಚಕ್ರವರ್ತಿ, ರೂಪಾ ಭಟ್ಟಾಚಾರ್ಯ, ಅಂಜನಾ ಬಸು ಮತ್ತು ಕೌಶಿಕ್ ಚಕ್ರವರ್ತಿ ಬಿಜೆಪಿ ಸೇರಿದ ಕಲಾವಿದರಾಗಿದ್ದಾರೆ.
2021ರಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಲಿರುವ ಪಶ್ಚಿಮಬಂಗಾಳದಲ್ಲಿ ಈ ತಾರೆಯರು ಬಿಜೆಪಿಯ ಪರವಾಗಿ ಪ್ರಮುಖ ಪಾತ್ರವನ್ನು ನಿಭಾಯಿಸುವ ಸಾಧ್ಯತೆ ಇದೆ.
ಬಂಗಾಳದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಭಾರಿ ದೊಡ್ಡ ಗೆಲುವನ್ನು ಸಾಧಿಸಿತ್ತು. ಪ್ರಸ್ತುತ ಅಲ್ಲಿನ ವಾತಾವರಣ ಕೂಡ ಬಿಜೆಪಿಯ ಪರವಾಗಿಯೇ ಇದೆ. ಇದು ಮುಂಬರುವ ರಾಜ್ಯ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಪಕ್ಷಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.