ನವದೆಹಲಿ: ಪಿ.ಟಿ. ಉಷಾ, ಎಂಭತ್ತರ ದಶಕದಲ್ಲಿ ತನ್ನ ಮಿಂಚಿನ ಓಟದ ಮೂಲಕ ಭಾರತವನ್ನು ಹೆಮ್ಮೆಪಡಿಸಿದವರು. ಇಂದು, ಆ ಗೌರವಾನ್ವಿತ ಓಟಗಾರ್ತಿಯನ್ನು ಕ್ರೀಡೆಗೆ ಅಪಾರ ಕೊಡುಗೆಯನ್ನು ನೀಡಿದ್ದಕ್ಕಾಗಿ, ಸೇವೆಯನ್ನು ಸಲ್ಲಿಸಿದ್ದಕ್ಕಾಗಿ ಇಂಟರ್ನ್ಯಾಷನಲ್ ಅಸೋಸಿಯೇಶನ್ ಆಫ್ ಅಥ್ಲೆಟಿಕ್ಸ್ ಫೆಡರೇಶನ್ (ಐಎಎಎಫ್)ನ ‘ವೆಟರನ್ ಪಿನ್’ಗೆ ನಾಮನಿರ್ದೇಶನಗೊಳಿಸಲಾಗಿದೆ. ಇದು ನಿಜಕ್ಕೂ ಭಾರತಕ್ಕೆ ಒಂದು ಹೆಮ್ಮೆಯ ಕ್ಷಣವಾಗಿದೆ!
“ವಿಶ್ವ ಅಥ್ಲೆಟಿಕ್ಸ್ಗೆ ಸುದೀರ್ಘ ಮತ್ತು ಪ್ರಶಂಸನೀಯ ಸೇವೆಯನ್ನು ನೀಡಿದ್ದಕ್ಕಾಗಿ ಪಿಟಿ ಉಷಾ ಅವರು ಐಎಎಎಫ್ ವೆಟರನ್ ಪಿನ್ ಸ್ವೀಕರಿಸಲು ನಾಮನಿರ್ದೇಶನಗೊಂಡಿರುವುದಕ್ಕೆ ನಾವು ಸಂತೋಷಪಡುತ್ತೇವೆ” ಎಂದು ಐಎಎಎಫ್ ಸಿಇಒ ಜಾನ್ ರಿಡ್ಜನ್ ಉಷಾಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಸೆಪ್ಟೆಂಬರ್ 24ರಂದು ದೋಹಾದ ಕತಾರ್ ನ್ಯಾಷನಲ್ ಕನ್ವೆನ್ಷನ್ ಸೆಂಟರಿನಲ್ಲಿ ಜರುಗಲಿರುವ 52 ನೇ ಐಎಎಎಫ್ ಕಾಂಗ್ರೆಸ್ ಉದ್ಘಾಟನಾ ಸಂದರ್ಭದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು 55 ವರ್ಷದ ಉಷಾಗೆ ಅವರು ಆಹ್ವಾನವನ್ನು ಅವರು ನೀಡಿದ್ದಾರೆ.
ತನ್ನನ್ನು ಆಯ್ಕೆ ಮಾಡಿದ ಜಾಗತಿಕ ಸಂಸ್ಥೆಗೆ ಧನ್ಯವಾದ ತಿಳಿಸಿ ಉಷಾ, “ವಿಶ್ವ ಅಥ್ಲೆಟಿಕ್ಸ್ಗಾಗಿ ಸುದೀರ್ಘ ಮತ್ತು ಪ್ರಶಂಸನೀಯ ಸೇವೆಯನ್ನು ಸಲ್ಲಿಸಿದ್ದಕ್ಕಾಗಿ ಐಎಎಎಫ್ ವೆಟರನ್ ಪಿನ್ಗೆ ನನ್ನನ್ನು ನಾಮನಿರ್ದೇಶನಗೊಳಿಸಿರುವುದು ಅತೀವ ಗೌರವವನ್ನು ತಂದುಕೊಟ್ಟಿದೆ. ಇದಕ್ಕಾಗಿ ಐಎಎಎಫ್ಗೆ ಧನ್ಯವಾದಗಳು” ಎಂದಿದ್ದಾರೆ.
ಭಾರತದ ಶ್ರೇಷ್ಠ ಓಟಗಾರರಲ್ಲಿ ಉಷಾ ಒಬ್ಬರಾಗಿದ್ದಾರೆ. ಇವರನ್ನು ‘ಕ್ವೀನ್ ಆಫ್ ಟ್ರ್ಯಾಕ್ ಆ್ಯಂಡ್ ಫೀಲ್ಡ್ ’ ಎಂದೂ ಕರೆಯಲಾಗುತ್ತದೆ. ಜಕಾರ್ತದಲ್ಲಿ 1985 ರಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಜೊತೆಗೆ 100 ಮೀ, 200 ಮೀ, 400 ಮೀ, 400 ಮೀ ಹರ್ಡಲ್ಸ್ ಮತ್ತು 4×400 ಮೀ ರಿಲೇಯಲ್ಲಿ ಐದು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. 1984 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಉಷಾ ಅವರ ಅತ್ಯಂತ ಸ್ಮರಣೀಯ ಪ್ರದರ್ಶನವನ್ನು ನೀಡಿ, 400 ಮೀ ಹರ್ಡಲ್ಸ್ನಲ್ಲಿ ಫೈನಲ್ಗೆ ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಕೆಲವೇ ಸೆಕೆಂಡುಗಳ ಅಂತರದಿಂದ ಅವರು ಕಂಚನ್ನು ಕಳೆದುಕೊಂಡರು.
‘ಪಯ್ಯೋಳಿ ಎಕ್ಸ್ಪ್ರೆಸ್’ ಎಂದೂ ಖ್ಯಾತರಾಗಿರುವ ಇವರು, 1983 ರಲ್ಲಿ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎರಡು ವರ್ಷಗಳ ನಂತರ 1985 ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು.
IAAF Veteran Pin for the long and meritorious service to the cause of World Athletics!
Thank you IAAF for this incredible honour 🙏 pic.twitter.com/QDILgouvgL— P.T. USHA (@PTUshaOfficial) July 18, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.