ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಉಡಾವಣಾ ದಿನಾಂಕವನ್ನು ಜುಲೈ 22ಕ್ಕೆ ನಿಗದಿಪಡಿಸಿದೆ. ಜುಲೈ 15 ರಂದು ನಿಗದಿಯಾಗಿದ್ದ ಉಡಾವಣಾ ದಿನಾಂಕ ತಾಂತ್ರಿಕ ದೋಷಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ರದ್ದುಗೊಂಡಿತ್ತು. ಇದೀಗ ಜುಲೈ 22ರಂದು ಮಧ್ಯಾಹ್ನ 2:43ಕ್ಕೆ ಸಮಯವನ್ನು ನಿಗದಿಪಡಿಸಲಾಗಿದೆ.
ಮುಂದಿನ ಸೋಮವಾರ ಜುಲೈ 22ರಂದು ಮಧ್ಯಾಹ್ನ 2:43ಕ್ಕೆ ಆಂಧ್ರಪ್ರದೇಶದ ಶ್ರೀಹರಿ ಕೋಟಾ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಚಂದ್ರಯಾನ-2 ಉಡಾವಣೆಗೊಳ್ಳಲಿದೆ ಎಂದು ಇಸ್ರೋ ಇಂದು ಪ್ರಕಟಿಸಿದೆ.
1 ಸಾವಿರ ಕೋಟಿ ರೂಪಾಯಿಗಳ ಯೋಜನೆ ಇದಾಗಿದ್ದು, ಯಶಸ್ವಿಯಾದರೆ ಚಂದ್ರನಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ವಿಶ್ವದ ನಾಲ್ಕನೇಯ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಭಾರತಕ್ಕೆ ತಂದುಕೊಡಲಿದೆ.
‘ಬಾಹುಬಲಿ’ ಎಂದೂ ಕರೆಯಲಾಗುವ ಚಂದ್ರಯಾನ- 2 ಮಿಷನ್ ಆನ್ಬೋರ್ಡ್ ಹೆವಿ-ಲಿಫ್ಟ್ ರಾಕೆಟ್ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ – ಮಾರ್ಕ್ III (ಜಿಎಸ್ಎಲ್ವಿ ಎಂಕೆ III) ಮೂಲಕ ಉಡಾವಣೆಗೊಳ್ಳಲಿದೆ.
ಜುಲೈ 15ರಂದು ಚಂದ್ರಯಾನ-2 ಉಡಾವಣೆಗೊಳ್ಳುತ್ತದೆ ಎಂದು ಇಡೀ ದೇಶವೇ ಕಾತುರದಿಂದ ಕಾದು ಕುಳಿತಿತ್ತು, ಆದರೆ ಉಡಾವಣೆಗೆ ಕೆಲವೇ ಗಂಟೆಗಳ ಮುಂಚಿತವಾಗಿ ಉಡಾವಣಾ ವಾಹಕದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಈ ಹಿನ್ನಲೆಯಲ್ಲಿ ಉಡಾವಣೆಯನ್ನು ರದ್ದುಗೊಳಿಸಿದ್ದು. ಬಳಿಕ ಪ್ರತಿಕ್ರಿಯೆ ನೀಡಿದ್ದ ಇಸ್ರೋ, ಶೀಘ್ರದಲ್ಲೇ ಮುಂದಿನ ಉಡಾವಣಾ ದಿನಾಂಕವನ್ನು ನಿಗದಿಪಡಿಸುತ್ತೇವೆ ಎಂದಿತ್ತು.
ಒಂದು ವೇಳೆ ತಾಂತ್ರಿಕ ದೋಷವನ್ನು ಪತ್ತೆ ಹಚ್ಚದೇ ಇರುತ್ತಿದ್ದರೆ ಇಡೀ ಚಂದ್ರಯಾನ-2 ಯೋಜನೆಯೇ ವಿಫಲವಾಗುತ್ತಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದೀಗ ದೋಷವನ್ನು ಸರಿಪಡಿಸಿರುವ ಇಸ್ರೋ, ಉಡಾವಣೆಗೆ ದಿನಾಂಕವನ್ನು ಮತ್ತೊಮ್ಮೆ ನಿಗದಿಪಡಿಸಿದೆ.
Chandrayaan-2 launch, which was called off due to a technical snag on July 15, 2019, is now rescheduled at 2:43 pm IST on Monday, July 22, 2019. #Chandrayaan2 #GSLVMkIII #ISRO
— ISRO (@isro) July 18, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.