ನವದೆಹಲಿ : ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾನುವಾರ ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ‘ವಿಜಯ ಜ್ಯೋತಿ’ ಅನ್ನು ಬೆಳಗಿಸಿದ್ದು, ಇದು 11 ನಗರಗಳ ಮೂಲಕ ಹಾದುಹೋಗಿ ಕೊನೆಗೆ ಜಮ್ಮು ಮತ್ತು ಕಾಶ್ಮೀರದ ದ್ರಾಸ್ಗೆ ತಲುಪಲಿದೆ. ಬಳಿಕ ಈ ಜ್ಯೋತಿಯನ್ನು ಅಲ್ಲಿನ ‘ಕಾರ್ಗಿಲ್ ಯುದ್ಧ ಸ್ಮಾರಕ’ ದಲ್ಲಿನ ಶಾಶ್ವತ ಜ್ಯೋತಿಯೊಂದಿಗೆ ವಿಲೀನಗೊಳಿಸಲಾಗುತ್ತದೆ.
ಆಪರೇಷನ್ ವಿಜಯ್ನ 20 ನೇ ವಾರ್ಷಿಕೋತ್ಸವವನ್ನು ‘ಸ್ಮರಿಸಿ, ಆನಂದಿಸಿ ಮತ್ತು ನವೀಕರಿಸಿ’ ಎಂಬ ಥೀಮ್ನೊಂದಿಗೆ ಆಚರಿಸಲಾಗುತ್ತಿದೆ ಎಂದು ಸರ್ಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ‘ಕಾರ್ಗಿಲ್ ವಿಜಯ್ ದಿವಸ್’ ಆಚರಣೆಯನ್ನು ಜುಲೈ 25 ರಿಂದ 27 ರವರೆಗೆ ಆಚರಿಸಲಾಗುತ್ತಿದೆ. ದ್ರಾಸ್ ಮತ್ತು ನವದೆಹಲಿಯಲ್ಲಿ ಮುಖ್ಯ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸಲಾಗುತ್ತಿದೆ. ಮುಖ್ಯ ಕಾರ್ಯಕ್ರಮದ ಭಾಗವಾಗಿ ಜುಲೈ ಮೊದಲ ವಾರದಿಂದ ಸರ್ಕಾರವು ಹಲವಾರು ಚಟುವಟಿಕೆಗಳನ್ನು ಆಯೋಜನೆಗೊಳಿಸುತ್ತಿದೆ.
ಪಾಕಿಸ್ಥಾನ ವಿರುದ್ಧದ ಟೈಗರ್ ಹಿಲ್ ಕದನದಲ್ಲಿ ಹುತಾತ್ಮರಾದ ಯೋಧರ ಗೌರವಾರ್ಥವಾಗಿ ಭಾರತೀಯ ಸೇನೆಯು ಮಂಗಳವಾರ ‘ಆಪರೇಷನ್ ವಿಜಯ್’ ಅನ್ನು ಮರುಸೃಷ್ಟಿಸಿತ್ತು. 2 ರಜಪೂತಾನ ರೈಫಲ್ಸ್ ಪಡೆ ಟೋಲಿಂಗ್ ಟಾಪ್ಗೆ ಟ್ರಕ್ ಕೈಗೊಂಡಿತ್ತು.
ಕಾರ್ಗಿಲ್ ಯುದ್ಧ ಸ್ವಾತಂತ್ರ್ಯದ ನಂತರ ಭಾರತೀಯ ಸೇನೆಯು ನಡೆಸಿದ ದೊಡ್ಡ ಮಟ್ಟದ ಯುದ್ಧಗಳಲ್ಲಿ ಒಂದಾಗಿದೆ. 1999 ರ ಮೇ ನಿಂದ ಜುಲೈವರೆಗೆ, ಭಾರತೀಯ ಸೈನಿಕರು ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ನಲ್ಲಿನ ದ್ರಾಸ್, ಕಾಕ್ಸರ್, ಬಟಾಲಿಕ್ ಮತ್ತು ಟರ್ಟೊಕ್ ವಲಯಗಳಲ್ಲಿ ಪಾಕ್ ವಿರುದ್ಧ ಸೆಣಸಾಟವನ್ನು ನಡೆಸಿದರು. ಎರಡು ತಿಂಗಳ ಅವಧಿ ಧೈರ್ಯಶಾಲಿಯಾಗಿ ಹೋರಾಡಿದ ಭಾರತೀಯ ಸೈನಿಕರು ಕೊನೆಗೆ ವಿಜಯಿಗಳಾಗಿ ಹೊರಹೊಮ್ಮಿದರು. ಇದರ ಸ್ಮರಣಾರ್ಥ ಪ್ರತಿವರ್ಷ ಜುಲೈ 27ರಂದು ‘ಕಾರ್ಗಿಲ್ ವಿಜಯ್ ದಿವಸ್’ ಅನ್ನು ಆಚರಿಸಲಾಗುತ್ತದೆ.
#WATCH: Union Defence Minister Rajnath Singh lights the ‘Victory Flame’ from National War Memorial in Delhi, which would traverse through 11 towns and cities to finally culminate at Drass where the flame will be merged with the eternal flame at the ‘Kargil War Memorial’. pic.twitter.com/LtsIMsB5Qa
— ANI (@ANI) July 14, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.