ನವದೆಹಲಿ: ಭಯೋತ್ಪಾದನೆಗೆ ಪ್ರತ್ಯುತ್ತರವನ್ನು ನೀಡುವ ಭಾರತದ ರಾಜಕೀಯ ಮತ್ತು ಮಿಲಿಟರಿ ಬದ್ಧತೆಯನ್ನು 2016 ಸರ್ಜಿಕಲ್ ಸ್ಟ್ರೈಕ್ ಮತ್ತು ಬಾಲಾಕೋಟ್ ಏರ್ ಸ್ಟ್ರೈಕ್ ತೋರಿಸಿಕೊಟ್ಟಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಮತ್ತೇನಾದರೂ ಪಾಕಿಸ್ಥಾನ ದುಸ್ಸಾಹಸ ಮಾಡಿದರೆ ತೀಕ್ಷ್ಣ ಪ್ರತ್ಯುತ್ತರ ನೀಡಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಕಾರ್ಗಿಲ್ ಯುದ್ಧಕ್ಕೆ 20 ವರ್ಷಗಳು ಸಂದ ಹಿನ್ನಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, “ಎದುರಾಳಿಯ ಯಾವುದೇ ಬೆದರಿಕೆಗಳಿಗೆ ನಾವು ಸಂಘಟಿತ ರೀತಿಯಲ್ಲಿ ಪ್ರತ್ಯುತ್ತರವನ್ನು ನೀಡಲು ಸನ್ನದ್ಧರಾಗಿದ್ದೇವೆ. ಉರಿ ದಾಳಿ ಮತ್ತು ಬಾಲಕೋಟ್ ನಂತರದ ಬೆಳವಣಿಗೆಗಳು ಭಯೋತ್ಪಾದನೆ ವಿರುದ್ಧದ ನಮ್ಮ ರಾಜಕೀಯ ಮತ್ತು ಮಿಲಿಟರಿ ಸಂಕಲ್ಪವನ್ನು ಪ್ರದರ್ಶಿಸಿದೆ. ಭಯೋತ್ಪಾದನೆಯ ಯಾವುದೇ ಕೃತ್ಯವೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನಾವು ಬಿಡುವುದಿಲ್ಲ” ಎಂದಿದ್ದಾರೆ.
ಪಾಕಿಸ್ಥಾನವು ಪದೇ ಪದೇ ದುಸ್ಸಾಹಸಕ್ಕೆ ಕೈ ಹಾಕುತ್ತಿದೆ, ಪರೋಕ್ಷವಾಗಿ ಯುದ್ಧ ಮಾಡುತ್ತಿದೆ ಮತ್ತು ಭಯೋತ್ಪಾದನೆಯನ್ನು ಭಾರತದ ವಿರುದ್ಧ ಬಳಸಿಕೊಳ್ಳುತ್ತಿದೆ ಎಂದು ರಾವತ್ ಆರೋಪಿಸಿದ್ದಾರೆ. ಅಲ್ಲದೇ, ಅದರ ಪ್ರತಿಯೊಂದು ಪ್ರಯತ್ನವನ್ನೂ ಭಾರತವು ಅತ್ಯಂತ ಶಿಕ್ಷಾರ್ಹ ಪ್ರತಿಕ್ರಿಯೆಯೊಂದಿಗೆ ಹಿಮ್ಮೆಟ್ಟಿಸಲಿದೆ ಎಂದಿದ್ದಾರೆ.
“ತನ್ನದೇ ಆದ ಅಸಮರ್ಪಕತೆ, ಆಂತರಿಕ ಭದ್ರತೆ ಮತ್ತು ಆಡಳಿತದ ಸಮಸ್ಯೆಗಳಿಂದ ಬಳಲುತ್ತಿರುವ ಪಾಕಿಸ್ಥಾನದ ಸೇನೆಯು ಪರೋಕ್ಷ ಯುದ್ಧಗಳು ಮತ್ತು ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆಯ ಮೂಲಕ ದುಸ್ಸಾಹಸಗಳನ್ನು ಮಾಡುತ್ತಿದೆ ಎಂದಿದ್ದಾರೆ.
“ಭಾರತೀಯ ಸಶಸ್ತ್ರ ಪಡೆಗಳು ದೃಢ ನಿಶ್ಚಯದೊಂದಿಗೆ ತನ್ನ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಸರ್ವ ಸನ್ನದ್ಧವಾಗಿವೆ. ಯಾವುದೇ ದುಷ್ಕೃತ್ಯವನ್ನು ಅದು ಅತ್ಯಂತ ದಂಡನಾತ್ಮಕ ಪ್ರತಿಕ್ರಿಯೆಯೊಂದಿಗೆ ಹಿಮ್ಮೆಟ್ಟಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.